ಪ್ರೀತಿಗಾಗಿ ಪ್ರೇಯಸಿಯ ತಾಯಿಗೆ ಕಿಡ್ನಿ ಕಿತ್ತು ಕೊಟ್ಟ | ತಾಯಿಯ ಹೊಟ್ಟೆಯ ಗಾಯ ಮಾಸುವ ಮುನ್ನವೇ ಬೇರೊಬ್ಬನನ್ನು ಮದುವೆ ಆದ ಪ್ರೇಯಸಿ!

ಇದೊಂದು ಘನ ಘೋರ ದ್ರೋಹದ ಕಥೆ. ತನ್ನ ಪ್ರಾಣ ಪಣಕ್ಕೆ ಇಟ್ಟು, ಆತ ತನ್ನ ಪ್ರೇಯಸಿಯ ಕುಟುಂಬದ ಸಹಾಯಕ್ಕೆ ನಿಂತಿದ್ದ. ಆದ್ರೆ ಆತನ ಪ್ರೇಯಸಿ ಮನುಷ್ಯತ್ವವನ್ನೇ ಧಿಕ್ಕರಿಸಿ, ಇದ್ದ ಪ್ರೀತಿಯನ್ನು ಕೊಡವಿಕೊಂಡು ಎದ್ದು ನಡೆದಿದ್ದಾಳೆ.

ಪ್ರೀತಿ ಕುರುಡು ಅಂತ ಎಲ್ಲರೂ ಹೇಳುತ್ತಾರೆ. ವಯಸ್ಸಿನ ಬೇಧ ಭಾವ ಕೂಡ ಪ್ರೀತಿಯಲ್ಲಿ ಮುಳುಗಿದವರಿಗೆ ಇರೋದಿಲ್ಲ. ಪ್ರೀತಿಯಲ್ಲಿ ಬಿದ್ದವರು ಒಬ್ಬರಿಗೊಬ್ಬರು ಏನೂ ಮಾಡಲು ಸಿದ್ಧರಿರುತ್ತಾರೆ. ಏನೆಲ್ಲಾ ತ್ಯಾಗ ಮಾಡೋದಕ್ಕೂ ಸಿದ್ಧರಿರುತ್ತಾರೆ. ಇದಕ್ಕೆ ಉದಾಹರಣೆಯಾಗಿ ಇಲ್ಲೊಬ್ಬ ಪ್ರೇಮಿ, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ತನ್ನ ಪ್ರೇಯಸಿಯ ತಾಯಿಗೆ  ಕಿಡ್ನಿಯನ್ನು  ನೀಡಿದ್ದಾನೆ. ಇಷ್ಟೇ ಆಗಿದ್ದರೆ ಪರ್ವಾಗಿಲ್ಲ. ಆದರೆ  ಮುಂದೆ ನಡೆದದ್ದು ಮಾತ್ರ ಘೋರ ದುರಂತ ಈ ಪ್ರೇಮಿ ಬಾಳಲ್ಲಿ.


Ad Widget

Ad Widget

Ad Widget

ಮೆಕ್ಸಿಕೋದ ಉಜಿಯೆಲ್ ಮಾರ್ಟಿನೆಜ್ ತನ್ನ ಗೆಳತಿಯ ತಾಯಿಗೆ ಮೂತ್ರಪಿಂಡವನ್ನು ದಾನ ಮಾಡಿದ್ದಾನೆ. ಆದರೆ ಪ್ರಿಯತಮನಿಂದ ತಾಯಿಗೆ ಕಿಡ್ನಿ ಪಡೆದು, ಪ್ರೀತಿಸಿದಾತನೊಂದಿಗೆ ಜೀವನ ಹಂಚಿಕೊಳ್ಳಬೇಕಿದ್ದ ಪ್ರೇಯಸಿ ಮಾತ್ರ, ಆಕೆಯ ತಾಯಿಯ ಹೊಟ್ಟೆಯ ಗಾಯ ಆರುವ ಮುನ್ನವೇ ಈತನನ್ನು ದೂರ ಮಾಡಿ ಬೇರೊಬ್ಬನನ್ನು ಇಷ್ಟ ಪಟ್ಟಿದ್ದಾಳೆ. ಒಂದೇ ತಿಂಗಳಲ್ಲಿ ಆಕೆ ಬೇರೊಬ್ಬನನ್ನು ಮದುವೆಯಾಗಿದ್ದಾಳೆ.

ಈ ಬಗ್ಗೆ ಮಾರ್ಟಿನೇಜ್ ಟಿಕ್ ಟಾಕ್ ನಲ್ಲಿ ಪ್ರೇಯಸಿಯ ಬಗ ಮೋಸದ ಬಗ್ಗೆ ವೀಡಿಯೋ ಮಾಡಿದ್ದಾನೆ. ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಮಾರ್ಟಿನೇಜ್ ನ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈತನ ಈ ವೀಡಿಯೋ ‌ನೋಡಿ, ಹಲವಾರು ಮಂದಿ ಸಾಂತ್ವನ ಹೇಳಿದ್ದಾರೆ.

Leave a Reply

error: Content is protected !!
Scroll to Top
%d bloggers like this: