ಮಗುವಿಗೆ ನಾಯಿ ಕಚ್ಚಿದ್ದಕ್ಕೆ ಪೊಲೀಸ್ ಅತಿಥಿಯಾದ ಮಾಲೀಕ!!

Share the Article

ಮನುಷ್ಯರ ಮೇಲೆ ನಾಯಿಗಳ ದಾಳಿ ಇತ್ತೀಚೆಗೆ ಅಧಿಕವಾಗಿದೆ. ಇದೇ ರೀತಿ ಇಲ್ಲೊಂದು ಕಡೆ ಮಗುವಿಗೆ ನಾಯಿ ಕಚ್ಚಿದ್ದು, ಮಾಲೀಕ ಪೊಲೀಸ್ ಅತಿಥಿಯಾಗಿದ್ದಾನೆ. ಕೇವಲ ನಾಯಿ ಕಚ್ಚಿದ್ದಕ್ಕೆ ಆತ ಕಂಬಿ ಏನಿಸಿದನೇ ಎಂಬ ನಿಮ್ಮ ಯೋಚನೆ ತಪ್ಪು. ಯಾಕಂದ್ರೆ ಇದಕ್ಕೂ ಒಂದು ಕಾರಣವಿದೆ.

ಹೌದು.10 ವರ್ಷದ ಬಾಲಕನಿಗೆ ನಾಯಿ ಕಚ್ಚಿತ್ತು. ಇದರ ಬಗ್ಗೆ ಮಾಲಿಕರಿಗೆ ಪೋಷಕರು ಪ್ರಶ್ನಿಸಿದಾಗ ಸಮಧಾನದಿಂದ ಕ್ಷಮೆಯಾಚುವುದನ್ನು ಬಿಟ್ಟು,ಆಕ್ರೋಶಗೊಂಡ ಮಾಲಿಕರು ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ.

ಇದರಿಂದ ಮಗುವಿನ ಪೋಷಕರು ನೊಂದು ದೂರು ನೀಡಿದ್ದು,ಅದರಂತೆ ಕ್ರಮ ಕೈಗೊಂಡ ಪೊಲೀಸರು ಮಾಲಿಕರ ಪೈಕಿ ಮೂವರಲ್ಲಿ ಒಬ್ಬರನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.ಅಷ್ಟಕ್ಕೂ ಈ ಘಟನೆ ನೋಯ್ಡಾದಲ್ಲಿ ನಡೆದಿದೆ.

Leave A Reply