ಲಸಿಕೆ ಪಡೆಯದ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ದಂಡ -ಗ್ರೀಸ್ ಸರಕಾರ ಘೋಷಣೆ
60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಕೋವಿಡ್ ಸೋಂಕಿನ ವಿರುದ್ಧದ ಲಸಿಕೆ ಪಡೆಯದಿದ್ದರೆ ಅವರಿಗೆ ದಂಡ ವಿಧಿಸಲಾಗುವುದು ಎಂದು ಗ್ರೀಸ್ ಸರಕಾರ ಘೋಷಿಸಿದೆ.
ದಂಡದಿಂದ ಪಾರಾಗುವ ಅತ್ಯಂತ ಸರಳ ವಿಧಾನವೆಂದರೆ ಲಸಿಕೆ ಪಡೆಯುವುದಾಗಿದೆ.
60 ವರ್ಷ ಮೇಲ್ಪಟ್ಟ ನಮ್ಮ ಪ್ರಜೆಗಳಿಗೆ ಲಸಿಕೆ ಪಡೆಯಲು ನಾನು ಸಲಹೆ ನೀಡುತ್ತೇನೆ. ಇದು ದಂಡ ವಿಧಿಸುವ ಪ್ರಶ್ನೆಯಲ್ಲ. ನಿಮ್ಮ ಪ್ರಾಣವನ್ನು, ನೀವು ಪ್ರೀತಿಸುವವರ ಉಳಿಸಿಕೊಳ್ಳುವ ವಿಷಯವಾಗಿದೆ ಎಂದು ಗ್ರೀಸ್ ಪ್ರಧಾನಿ ಕಿರಿಯಾಕೊಸ್ ಮಿಸ್ಫೋಟಕಿಸ್ ಹೇಳಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಲಸಿಕೆ ಕಡ್ಡಾಯಗೊಳಿಸಿದಂದಿನಿಂದ,
60 ವರ್ಷ ಮೇಲ್ಪಟ್ಟ ಸುಮಾರು 3 ಲಕ್ಷ ಜನ ಲಸಿಕೆ ಪಡೆಯಲು ಬಾಕಿಯಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಲಸಿಕೆ ಪಡೆಯದವರಿಗೆ ತಿಂಗಳಿಗೆ 114 ಡಾಲರ್ ಮೊತ್ತದ ದಂಡ ವಿಧಿಸಲಾಗುವುದು.
ಹೀಗೆ ಸಂಗ್ರಹಿಸಿದ ಮೊತ್ತವನ್ನು ಸೋಂಕಿನ ವಿರುದ್ಧ ಹೋರಾಡುತ್ತಿರುವ ಆಸ್ಪತ್ರೆಗಳಿಗೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಹೇಳಿದೆ.