ಸೂಪರ್ ಸ್ಟಾರ್ ರಜನಿಕಾಂತ್ ಕುಟುಂಬದಲ್ಲಿ ಡೈವೊರ್ಸ್ | ಮಗಳಿಗೆ ಡೈವೊರ್ಸ್ ಕೊಟ್ಟ ನಟ ಧನುಷ್

0 10

ಧನುಶ್ ತಮ್ಮ ಹೆಂಡತಿ ರಜನಿಕಾಂತ್ ಪುತ್ರಿ ಐಶ್ವರ್ಯಾ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಈ ಬಗ್ಗೆ ಧನುಶ್ ಅವರು ಅಧಿಕೃತವಾಗಿ ಟ್ವೀಟೊಂದನ್ನು ಶೇರ್ ಮಾಡಿದ್ದಾರೆ.

18 ವರ್ಷಗಳ ಕಾಲ ಜೋಡಿಯಾಗಿ, ಸ್ನೇಹಿತರಾಗಿ, ದಂಪತಿಗಳಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ನಡೆಸಿದ ಒಗ್ಗಟ್ಟಿನ ಪಯಣದಲ್ಲಿ ಬೆಳವಣಿಗೆ, ಅರ್ಥ ಮಾಡಿಕೊಳ್ಳುವಿಕೆ ಹೊಂದಾಣಿಕೆಗಳಿದ್ದವು. ಇವತ್ತು ನಾವು ನಿಂತಿರುವಲ್ಲಿಂದ ನಮ್ಮ ದಾರಿಗಳು ಪ್ರತ್ಯೇಕವಾಗುತ್ತಿವೆ. ಐಶ್ವರ್ಯಾ ಮತ್ತು ನಾನು ದಾಂಪತ್ಯದಿಂದ ದೂರವಾಗಲು ತೀರ್ಮಾನಿಸಿದ್ದೇವೆ. ಪ್ರತ್ಯೇಕವಾಗಿ ನಮ್ಮನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವುದು ಉತ್ತಮ ಎಂದುಕೊಂಡಿದ್ದೇವೆ.

ನಮ್ಮ ಈ ನಿರ್ಧಾರಗಳನ್ನು ಗೌರವಿಸಿ. ಖಾಸಗಿತನವನ್ನು ನೀಡಿ.

2004 ರ ನವೆಂಬರ್ 18 ರಂದು ಧನುಶ್ ಅವರ ವಿವಾಹವು ಐಶ್ವರ್ಯಾ ಜೊತೆ ನೆರವೇರಿತ್ತು. ಐಶ್ವರ್ಯಾ ಅವರು ಖ್ಯಾತನಟ ರಜನಿಕಾಂತ್ ಅವರ ಹಿರಿಯ ಪುತ್ರಿ.

ಕಿರಿಯ ಪುತ್ರಿ ಸೌಂದರ್ಯ ಕೂಡಾ‌ ಪ್ರೀತಿಸಿ ಮದುವೆಯಾದ ಏಳು ವರ್ಷಗಳಲ್ಲಿ ಪತಿ ಅಶ್ವಿನ್ ರಾಮ್ ಕುಮಾರ್ ಅವರಿಂದ ವಿಚ್ಛೇದನ ಪಡೆದಿದ್ದು, ನಂತರ ಎರಡು ವರ್ಷಗಳ ಬಳಿಕ ವಿಶಾಗನ್ ಎನ್ನುವವರ ಜೊತೆಗೆ ಎರಡನೇ ವಿವಾಹವಾಗಿದ್ದಾರೆ.

ಯಾತ್ರ ( 16), ಮತ್ತು ಲಿಂಗ ( 12) ಎನ್ನುವ ಇಬ್ಬರು ಮಕ್ಕಳು ಧನುಶ್ ಹಾಗೂ ಐಶ್ವರ್ಯಾ ಅವರಿಗಿದೆ.

Leave A Reply