ಕುರಿ ಕಡಿಯುವ ಬದಲು ಕುರಿ ಹಿಡಿದಿದ್ದ ವ್ಯಕ್ತಿಯ ತಲೆ ಕಡಿದ

Share the Article

ಚಿತ್ತೂರು : ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕುರಿ ಕಡಿಯುವ ಬದಲಾಗಿ ವ್ಯಕ್ತಿಯ ತಲೆಯನ್ನು ಕಡಿದಿರುವ ಘಟನೆ ನಡೆದಿದೆ. ಟಿ. ಸುರೇಶ್ ಮೃತನಾಗಿದ್ದಾನೆ.

ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯ ಕೃತ್ಯಕ್ಕೆ ಈತ ಬಲಿಯಾಗಿದ್ದಾನೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ.

ಚಿತ್ತೂರಿನಲ್ಲಿ ನಡೆದ ಹಬ್ಬವೊಂದರ ಹಿನ್ನೆಲೆಯಲ್ಲಿ ಕುರಿಗಳನ್ನು ಕೂಡ ಲಾಗುತ್ತಿತ್ತು. ಬಲಿ ಕೊಡಲು ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಕುರಿಯನ್ನು ಕಡಿಯುವ ಬದಲು ಹಿಡಿದುಕೊಂಡಿದ್ದ ವ್ಯಕ್ತಿಯ ತಲೆಯನ್ನೇ ಕಡಿದಿದ್ದಾನೆ. ಸ್ಥಳದಲ್ಲೇ ಕುಸಿದು ಬಿದ್ದು ಸುರೇಶ್ ಮೃತ ಪಟ್ಟಿದ್ದಾನೆ.

ಸ್ಥಳದಲ್ಲಿ ಸೇರಿದ್ದ ಜನರು ಬೆಚ್ಚಿಬಿದ್ದಿದ್ದಾರೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Leave A Reply