ಬೆಳ್ತಂಗಡಿ | ಟಿಪ್ಪರ್ ಲಾರಿ-ಬೈಕ್ ನಡುವೆ ಭೀಕರ ಅಪಘಾತ, ಬೈಕ್ ಸವಾರ ರಿಬ್ಬರು ಸ್ಥಳದಲ್ಲೇ ಸಾವು

Share the Article

ಬೆಳ್ತಂಗಡಿ: ಬೈಕ್ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಮದ್ದಡ್ಕ ಎಂಬಲ್ಲಿ ನಡೆದಿದೆ.

ಮೃತ ಯುವಕರನ್ನು ನಾವೂರು ನಿವಾಸಿ ಹಮೀದ್ ಕುದುರು ಎಂಬವರ ಪುತ್ರ ನಿಸ್ಬಾ ಹಾಗೂ ಅಶ್ರಫ್ ಅವರ ಪುತ್ರ ಅಷ್ಪ ಎಂದು ಗುರುತಿಸಲಾಗಿದೆ.

ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply