ನರೇಂದ್ರ ಮೋದಿ ತಾಯಿ ಮತ್ತು ಅಮಿತ್ ಶಾ ತಾಯಿ ಕೂಡಾ ಬಾರ್ ಡ್ಯಾನ್ಸರ್, ನಾರ್ತ್ ಇಂಡಿಯಾದ ಹೆಣ್ಣು ಮಕ್ಕಳೆಲ್ಲ ಅಂಥವರೇ | ಕಾಂಗ್ರೆಸ್ ಐಟಿ ಸೆಲ್‌ನ ಮುಖ್ಯಸ್ಥೆ ಶೈಲಜಾ ಹೇಳಿಕೆ ?!

Share the Article

ನರೇಂದ್ರ ‌ಮೋದಿ,ಅಮಿತ್ ಶಾ ತಾಯಿ ಕೂಡ ಬಾರ್ ಡ್ಯಾನ್ಸರ್ ಎಂದು ಹೇಳುವ ಮೂಲಕ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಪುತ್ತೂರಿನ ಶೈಲಜಾ ಅಮರನಾಥ್ ಹೊಸ ವಿವಾದ ಸೃಷ್ಟಿಸಿದ್ದಾರೆ.

ಕ್ಲಬ್ ಹೌಸ್ ನಲ್ಲಿ ಚರ್ಚೆಯ ವೇಳೆ ಮಾತನಾಡಿದ ಶೈಲಜಾ ಅವರು ನರೇಂದ್ರ ಮೋದಿ ಮತ್ತು ತಾಯಿ ಮತ್ತು ಅಮಿತ್ ಶಾ ತಾಯಿ ಕೂಡಾ ಬಾರ್ ಡ್ಯಾನ್ಸರ್, ನಾರ್ತ್ ಇಂಡಿಯಾದ ಹೆಣ್ಣು ಮಕ್ಕಳೆಲ್ಲ ಅಂಥವರೇ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಅವರ ಬದುಕು ಹೇಗಿತ್ತೆಂದರೆ ಕರುಳು ಮಾತ್ರವಲ್ಲ ಕಿಡ್ನಿಯೂ ಕಿತ್ತು ಬರುತ್ತದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಡಿಯೋಗಳು ವೈರಲ್ ಆಗುತ್ತಿದ್ದು,ಬಿಜೆಪಿ ಕಾರ್ಯಕರ್ತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ,ಪ್ರಿಯಾಂಕ ಗಾಂದಿ ಬಗ್ಗೆ ಇದೇ ರೀತಿಯ ಹೇಳಿಕೆಗಳನ್ನು ಬಿಜೆಪಿಗರು ಮಾಡುತ್ತಾರೆ.ಅದಕ್ಕಾಗಿ ನಾವೂ ಕೂಡ ಇದೇ ರೀತಿ ಹೇಳಿದ್ದೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ತಾಯಂದಿರ ಬಗ್ಗೆ ಬಾರ್ ಡ್ಯಾನ್ಸರ್ ,ಉತ್ತರ ಭಾರತದವರು ಎಲ್ಲರೂ ಇದೇ ರೀತಿಯಲ್ಲಿ ಇದ್ದಾರೆ ಎಂದು ತನ್ನ ಹೇಳಿಕೆಯಲ್ಲಿ ಶೈಲಜಾ ಅವರು ಬಿಂಬಿಸಿದ್ದಾರೆ ಎನ್ನಲಾಗಿದೆ

Leave A Reply

Your email address will not be published.