ಬೆಳಗ್ಗೆ ಖರೀದಿ ಮಾಡಿದ ಕಾರಲ್ಲಿ ಸಂಜೆ ಪ್ರಯಾಣ | ಕೋಟಿಗಟ್ಟಲೇ ಕೊಟ್ಟು ಖರೀದಿಸಿದ ಕಾರಲ್ಲೇ ಕಾಯುತ್ತಿತ್ತು ಉದ್ಯಮಿಯ ಸಾವು

ಅಥೆನ್ಸ್ ( ಗ್ರೀಸ್ ) : ಸಾವು ಯಾವ ರೂಪದಲ್ಲಿ ಬರುತ್ತದೆ. ಹೇಗೆ ಬರುತ್ತದೆ ಎಂದು ಪ್ರತಿಯೊಬ್ಬರಿಗೂ ಹೇಳುವುದು ಕಷ್ಟ. ಹೌದು, ತಾನು ಪ್ರೀತಿಯಿಂದ ಖರೀದಿಸಿದ ಕಾರಿನಲ್ಲಿ ಅದೂ ಕೂಡ ಬೆಳಗ್ಗೆ ಕೋಟಿ ಖರ್ಚು ಮಾಡಿ ಹೆಂಡತಿ ಜೊತೆ ಡ್ರೈವ್ ಗೆ ಹೋದ ಸಂದರ್ಭದಲ್ಲಿ ಸಾವು ಬಂದರೆ ಊಹಿಸಲಸಾಧ್ಯ. ಅಲ್ಲವೇ ? ಅಂಥದ್ದೇ ಒಂದು ದುರ್ಘಟನೆ ಗ್ರೀಸ್ ನ ರಾಜಧಾನಿ ಅಥೆನ್ಸ್ ನ ಮೌಲಾದಲ್ಲಿ ನಡೆದಿದೆ.

ಬೆಳಗ್ಗೆಯಷ್ಟೇ ಕೋಟ್ಯಾಂತರ ರೂಪಾಯಿ ನೀಡಿ ಖರೀದಿ ಮಾಡಿದ ಕಾರಲ್ಲಿ ಉದ್ಯಮಿಯೋರ್ವರು ತನ್ನ ಪತ್ನಿ ಜೊತೆ ಫೆರಾರಿ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಹೊತ್ತಿ ಉರಿದಿದೆ.


Ad Widget

Ad Widget

Ad Widget

ಉದ್ಯಮಿ ಟ್ಜೋರ್ಟ್ ಜಿಸ್ ಮೆನೊಯಿಯೊಸ್ ( 45) ಅಪಘಾತದ ವೇಳೆ ಸಾವನ್ನಪ್ಪಿದ್ದಾರೆ.

ರೆಸಾರ್ಟ್‌ ದ್ವೀಪವಾದ ಮೈಕೋನೋಸ್ ನಲ್ಲಿ ಬಟ್ಟೆ ಅಂಗಡಿ ಹೊಂದಿರುವ ಈ ಉದ್ಯಮಿ, ಇಂದು ಬೆಳಗ್ಗೆ 3 ಕೋಟಿಗೂ ಅಧಿಕ ಮೌಲ್ಯದ ಸ್ಪೋರ್ಟ್ಸ್ ಕಾರು ಫೆರಾರಿ 488 ಖರೀದಿ ಮಾಡಿದ್ದು, ಸಂಜೆ ವೇಳೆ ಹೆಂಡತಿ ಜೊತೆ ಪ್ರಯಾಣ ಬೆಳೆಸಿದ್ದು, ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಗುದ್ದಿದೆ. ಪರಿಣಾಮ ಉದ್ಯಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರು ಬೆಂಕಿಗಾಹುತಿಯಾಗಿದೆ. ಉದ್ಯಮಿ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: