ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳ ,ಸಿ.ಎಂ. ನೇತೃತ್ವದಲ್ಲಿ ತುರ್ತು ಸಭೆ : ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳ ಬಗ್ಗೆ ಆರ್.ಅಶೋಕ್ ಮಾಹಿತಿ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನೈಟ್ ಕರ್ಪ್ಯೂ ಯಥಾಸ್ಥಿತಿಯಂತೆ ಮುಂದುವರಿಯಲಿದೆ. ರಾಜ್ಯದಲ್ಲಿ ಲಾಕ್‌ಡೌನ್ ಯಾವುದೇ ಕಾರಣಕ್ಕೂ ಮಾಡುವುದಿಲ್ಲ. ಅಲ್ಲದೇ ವೀಕೆಂಡ್ ಕರ್ಪ್ಯೂ ಬಗ್ಗೆ ಶುಕ್ರವಾರದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೋವಿಡ್ ತುರ್ತು ಸಭೆ ನಡೆದಿದೆ. ಸಚಿವರಾದ ಆರ್. ಅಶೋಕ್, ಆರೊಗ್ಯ ಸಚಿವ ಡಾ.ಸುಧಾಕರ್, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ, ಕೋವಿಡ್ ತಜ್ಞರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ನಂತರದಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್, ರಾಜ್ಯದಲ್ಲಿ ಕೋವಿಡ್ ಸೋಂಕು ಜನವರಿ 25 ರ ವೇಳೆಗೆ ಭಾರೀ ಏರಿಕೆ ಕಾಣಲಿದೆ. ನಂತರದಲ್ಲಿ ಕೊರೊನಾ ಸೋಂಕು ಇಳಿಕೆಯಾಗಲಿದೆ. ಕೊರೊನಾ ಯಾವಾಗ ಇಳಿಕೆಯಾಗಲಿದೆ ಎಂದು ನೋಡಿಕೊಂಡು ನಿಯಮಗಳಲ್ಲಿ ಸಡಿಲಿಕೆ ಮಾಡಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿ ಮಾಡುವುದಿಲ್ಲ ಅಲ್ಲದೇ ಟಫ್ ರೂಲ್ಸ್ ಜಾರಿ ಮಾಡುವುದಿಲ್ಲ. ವಿಕೇಂಡ್ ಕರ್ಪ್ಯೂ ಬಗ್ಗೆ ಶುಕ್ರವಾರದ ನಡೆಯಲಿರುವ ಸಭೆಯ ನಂತರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯದ ಆರುವರೆ ಕೋಟಿ ಜನರ ಆರೋಗ್ಯವನ್ನು ಗಮನದಲ್ಲಿ ಇರಿಸಿಕೊಂಡು ನಿರ್ಧಾರ ಕೈಗೊಳ್ಳುತ್ತೇವೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಆ ಸಮಸ್ಯೆ ಎದುರಾಗದಂತೆ ಕ್ರಮವಹಿಸುತ್ತೇವೆ ಎಂದರು.

Leave A Reply

Your email address will not be published.