ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಅಧಿಕೃತವಾಗಿ ಮತಾಂತರವಾದ ನಿರ್ದೇಶಕ ಅಲಿ ಅಕ್ಬರ್ !! | ಮುಸ್ಲಿಂ ಧರ್ಮ ತ್ಯಜಿಸಲು ಅವರು ನೀಡಿರುವ ಕಾರಣ ಏನು ಗೊತ್ತಾ ??
ತಿಂಗಳುಗಳ ಹಿಂದೆ ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರ ಆಗುವೆ ಎಂದು ಹೇಳಿದ್ದ ನಿರ್ದೇಶಕ ಅಲಿ ಅಕ್ಬರ್ ಅವರು ಇದೀಗ ಅಧಿಕೃತವಾಗಿ ಸನಾತನ ಧರ್ಮಕ್ಕೆ ಮತಾಂತರ ಆಗಿದ್ದಾರೆ.
ಹಿಂದೂ ಸೇವಾ ಕೇಂದ್ರದ ಸ್ಥಾಪಕ ಪತ್ರೀಶ್ ವಿಶ್ವನಾಥ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.”ಮಲಯಾಳಂ ಸಿನಿಮಾ ನಿರ್ದೇಶಕ ಶ್ರೀ ಅಲಿ ಅಕ್ಬರ್ ಅವರು ಸನಾತನ ಧರ್ಮಕ್ಕೆ ಅಧಿಕೃತವಾಗಿ ಮರಳಿದ್ದಾರೆ. ಈಗ ಅವರು ರಾಹಸಿಂಹನ್. ಮೂಲಜಾಗಕ್ಕೆ ಸ್ವಾಗತ. ಎಲ್ಲ ಧರ್ಮಗಳ ತಾಯಿ ಧರ್ಮಕ್ಕೆ ಸ್ವಾಗತ. ಹರ ಹರ ಮಹಾದೇವ, ನಮೋ ನಾರಾಯಣ ಜೈ ಭವಾನಿ” ಎಂದು ಪ್ರತೀಶ್ ವಿಶ್ವನಾಥ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಅಲಿ ಅಕ್ಬರ್ ಮತಾಂತರ ಹೊಂದಿದ ಫೋಟೋಗಳನ್ನು ಕೂಡ ಅವರು ಹಂಚಿಕೊಂಡಿದ್ದಾರೆ.
ಅಷ್ಟೊಂದು ಸಿನಿಮಾ ವಿಚಾರವಾಗಿ ಚಿತ್ರರಂಗದಲ್ಲಿ ಸೌಂಡ್ ಮಾಡಿಲ್ಲವಾದರೂ ಕೂಡ, ಅಲಿ ಅಕ್ಬರ್ ಅವರು ಕೇರಳದಲ್ಲಿ ಮಲಬಾರ್ ದಂಗೆ ಕುರಿತಂತೆ ಪ್ರಸ್ತುತ ಸಿನಿಮಾ ಮಾಡುತ್ತಿದ್ದಾರೆ. ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಜೊತೆಗೆ 12 ಮಂದಿ ತಮಿಳುನಾಡಿನ ಕೂನೂರು ಸಮೀಪ ಭೀಕರ ಹೆಲಿಕಾಪ್ಟರ್ ಅಪಘಾತ ಸಂಭವಿಸಿತ್ತು. ಘಟನೆಯನ್ನು ನೋಡಿ ಕೆಲವರು ಸಂಭ್ರಮಿಸಿದ್ದರು. ಸಾವಿನಲ್ಲಿಯೂ ಸಂಭ್ರಮ ಮಾಡಿರುವವರಲ್ಲಿ ಹೆಚ್ಚು ಜನರು ಮುಸ್ಲಿಂ ಆಗಿರೋದರಿಂದ ಬೇಸತ್ತ ಅಕ್ಬರ್ ಅಲಿ ಇಸ್ಲಾಂ ತೊರೆಯುವ ನಿರ್ಧಾರ ಮಾಡಿದ್ದರು.
ರಾಷ್ಟ್ರ ವಿರೋಧಿ ಪ್ರಕ್ರಿಯೆ ಮಾಡಿದವರನ್ನೂ ಕೂಡ ಇಸ್ಲಾಂ ಧರ್ಮದ ನಾಯಕರು ವಿರೋಧಿಸದೆ ಇರೋದ್ರಿಂದ ಇಸ್ಲಾಂ ಧರ್ಮದಲ್ಲಿ ನಂಬಿಕೆ ಕಳೆದುಕೊಂಡೆ ಎಂದು ಅಲಿ ಅಕ್ಬರ್ ಈ ಹಿಂದೆ ಹೇಳಿದ್ದರು. ಅಲಿ ಅಕ್ಬರ್ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಅಲಿ ನಡೆ ಮೆಚ್ಚಿದ್ದರೆ, ಇನ್ನೂ ಕೆಲವರು ವಿರೋಧಿಸಿದ್ದರು. ಒಟ್ಟಿನಲ್ಲಿ ಅಲಿ ಅಕ್ಬರ್ ಅವರನ್ನು ಅನೇಕರು ನಿಂದಿಸಿರೋದಂತೂ ಸತ್ಯ.
“ನಾನು ಮುಸ್ಲಿಂ ಆಗಿರೋಕೆ ಇಷ್ಟಪಡೋದಿಲ್ಲ. ನಾನು ಭಾರತೀಯ. ಭಾರತದ ವಿರುದ್ಧ ನಗುತ್ತಿರುವ ಇಮೋಜಿಗಳನ್ನು ಕಳಿಸಿದವರಿಗೆ ಇದು ನನ್ನ ಉತ್ತರ. ಬಿಪಿನ್ ರಾವತ್ ಸಾವನ್ನು ಸಂಭ್ರಮಿಸುವುದರ ಜೊತೆಗೆ ಸಾಕಷ್ಟು ರಾಷ್ಟ್ರ ವಿರೋಧಿ ಚಟುವಟಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿವೆ. ಬಿಪಿನ್ ರಾವತ್ ಸಾವನ್ನು ಸಂಭ್ರಮಿಸಿದವರಲ್ಲಿ ಅನೇಕರು ಮುಸ್ಲಿಂ ಮಂದಿಯಾಗಿದ್ದಾರೆ. ಪಾಕಿಸ್ತಾನದ ವಿರುದ್ಧ ಸಾಕಷ್ಟು ಕ್ರಮಗಳನ್ನು ರಾವತ್ ಕೈಗೊಂಡಿದ್ರು ಅಂತ ಅವರ ಸಾವನ್ನು ಸಂಭ್ರಮಿಸಲಾಗುತ್ತಿದೆ. ಸಾಕಷ್ಟು ಜನರು ನಮ್ಮ ದೇಶವನ್ನು ಬಿಪಿನ್ ರಾವತ್ ಅವರನ್ನು ಅಗೌರವಿಸಿದ್ದಾರೆ. ಇದರ ಬಗ್ಗೆ ಮುಸ್ಲಿಂ ಧರ್ಮದ ನಾಯಕರು ಕೂಡ ಏನೂ ಹೇಳಿಲ್ಲ. ಹೀಗಾಗಿ ನಾನು ಈ ಧರ್ಮದಲ್ಲಿ ಇರಲು ಬಯಸೋದಿಲ್ಲ” ಎಂದು ಧೈರ್ಯದಿಂದ ಅಲಿ ಅಕ್ಬರ್ ಅವರ ನಿರ್ಧಾರವನ್ನು ಹೇಳಿದ್ದರು.
ಅಲಿ ಅಕ್ಬರ್ ಹಾಗೂ ಅವರ ಪತ್ನಿ ಹಿಂದೂ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಆದರೆ ನಮ್ಮ ಮಕ್ಕಳಿಗೆ ಹಿಂದೂ ಧರ್ಮಕ್ಕೆ ಮತಾಂತರ ಆಗಿ ಅಂತ ಹೇಳೋದಿಲ್ಲ. ಅದು ಅವರ ಇಚ್ಛೆ ಎಂದಿದ್ದರು. ಅಂತೆಯೇ ಅಲಿ ಅಕ್ಬರ್ ಮತಾಂತರ ಆಗುತ್ತಿರುವ ಫೋಟೋದಲ್ಲಿ ಅವರ ಪತ್ನಿ ಮಾತ್ರ ಕಾಣುತ್ತಿದ್ದಾರೆ, ಮಕ್ಕಳು ಕಾಣಿಸಿಲ್ಲ. ಹಿಂದೂ ಧರ್ಮಕ್ಕೆ ಮತಾಂತರ ಆದ ನಂತರ ಅಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಸರು ಬದಲಿಸಿಕೊಂಡಿಲ್ಲ.