ತನ್ನ ತಾಯಿಯೊಡನೆ ದೇವಸ್ಥಾನಕ್ಕೆ ಭೇಟಿ ನೀಡಿದ ಮುಸ್ಲಿಂ ನಟಿ !! | ಬಾಲಿವುಡ್ ನಟಿಯ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು

0 7

ಬಾಲಿವುಡ್ ನ ಮಾದಕನಟಿ ಸಾರಾ ಅಲಿಖಾನ್. ಮುಸ್ಲಿಂ ಆಗಿದ್ದರೂ ಆಕೆ ಪದೇ ಪದೇ ದೇವಸ್ಥಾನಗಳಿಗೆ ತೆರಳುತ್ತಿರುವುದು ಅಚ್ಚರಿಯ ಸಂಗತಿಯೇ ಸರಿ. ಇದೀಗ ಸಾರಾ ಅಲಿ ಖಾನ್ ಅವರು ತಮ್ಮ ತಾಯಿ ಜೊತೆ ಮಧ್ಯಪ್ರದೇಶದ ಉಜ್ಜಿಯಿನಿಯಲ್ಲಿರುವ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

ತಾಯಿ ಅಮೃತಾ ಸಿಂಗ್ ಜೊತೆಗೆ ಸಾರಾ ತಮ್ಮ ಪ್ರವಾಸದ ಕೆಲವು ಫೋಟೋವನ್ನು ಇನ್‍ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಮಾ ಔರ್ ಮಹಾಕಾಲ್ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಕಾಲ ಕಳೆಯುತ್ತಿದ್ದಾರೆ. ಸಾರಾ ಭಕ್ತಿಕಂಡ ಅಭಿಮಾನಿಗಳು ಕಾಮೆಂಟ್‍ಗಳ ವಿಭಾಗದಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ನಟ ವಿಕ್ಕಿ ಕೌಶಲ್ ಅವರೊಂದಿಗೆ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿರುವ ಸಾರಾ ಅಲಿ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಶೂಟಿಂಗ್ ದಿನಗಳ ಗ್ಲಿಂಪ್‍ಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಾರೆ.

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ದಂಪತಿಯ ಮಗಳು ಸಾರಾ. ಸೈಫ್ ಹಾಗೂ ಅಮೃತಾ ದೂರವಾಗಿದ್ದಾರೆ. ಹೀಗಾಗಿ ಸಾರಾ ಅಮ್ಮನ ಜೊತೆ ಇದ್ದಾರೆ. ಇತ್ತೀಚೆಗೆ ಸಾರಾ ತಾವು ಮದುವೆಯಾಗುವ ಹುಡುಗ ಹೇಗೆ ಇರಬೇಕು ಎಂದು ಕೆಲವು ಕಂಡೀಶನ್ ಹಾಕಿದ್ದರು. ಮದುವೆ ಆಗುವ ಹುಡುಗ ಸಾರಾ ಹಾಗೂ ಅವರ ಅಮ್ಮನ ಜೊತೆ ವಾಸ ಮಾಡಬೇಕು. ನನ್ನ ಅಮ್ಮನನ್ನು ನಾನು ಎಂದಿಗೂ ಒಂಟಿಯಾಗಿ ಬಿಡುವುದಿಲ್ಲ. ಈ ಕಾರಣಕ್ಕೆ ನನ್ನ ಮದುವೆ ಆಗುವ ಹುಡುಗ ನನ್ನ ಹಾಗೂ ನನ್ನ ಅಮ್ಮನ ಜೊತೆ ಇರಬೇಕು ಎಂದು ಹೇಳಿದ್ದರು.

Leave A Reply