ಪೊಲೀಸ್ ಇಲಾಖೆಯ ಸಿಂಗಂ ರವಿ ಡಿ. ಚೆನ್ನಣ್ಣನವರ್ ಇನ್ನೊಂದು ಮುಖ ಬಯಲು!! 25 ಲಕ್ಷಕ್ಕಾಗಿ ವಂಚನೆ ಆರೋಪಿಗಳಿಗೆ ರಕ್ಷಣೆ-ದೂರುದಾರನಿಗೆ ಅನ್ಯಾಯ
ಪೊಲೀಸ್ ಇಲಾಖೆಯಲ್ಲಿ ಸಿಂಗಂ ಎಂದೇ ಖ್ಯಾತಿ ಪಡೆದ ಐ.ಪಿ.ಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಹಾಗೂ ಇತರ ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಹಣ ವಸೂಲಿ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಲಾಗಿದೆ.
ಏನಿದು ಘಟನೆ!?
ಅಕ್ರಮವಾಗಿ ನಡೆಯುತ್ತಿರುವ ಮರಳು ದಂಧೆ ಪ್ರಕರಣವನ್ನು ಮುಚ್ಚಿ ಹಾಕಲು ಹಾಗೂ ಕ್ರಶರ್ ಉದ್ಯಮಿ ಮತ್ತು ಇತರರಿಂದ 3.96 ಕೋಟಿ ರೂ ವಂಚನೆಯಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಂದಲೇ 50 ಲಕ್ಷ ವಸೂಲಿ ಮಾಡಿ ಆರೋಪಿಗಳಿಗೆ ರಕ್ಷಣೆ ನೀಡಿ,ದೂರುದಾರನಿಗೆ ಅನ್ಯಾಯ ಎಸಗಿದ್ದಾರೆ ಎಂದು ದೂರುದಾರ ಮಂಜುನಾಥ್ ಆರೋಪಿಸಿದ್ದಾರೆ.
ದೂರುದಾರರಿಗೆ ರಕ್ಷಣೆ ಕೊಡಬೇಕಾದ ಪೊಲೀಸರೇ ಇಂತಹ ಕೃತ್ಯ ಎಸಗಿದ್ದಲ್ಲದೇ, ಆರೋಪಿಗಳಿಗೆ ರಕ್ಷಣೆ ನೀಡಿದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಮಧ್ಯೆ ದೂರುದಾರರು ತನಗಾದ ವಂಚನೆಯ ಬಗ್ಗೆ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾದಾಗ ಆರೋಪಿಗಳ ಪರವಾಗಿ ಪ್ರಭಾವಿ ವ್ಯಕ್ತಿಗಳು ಪೊಲೀಸರ ಮೇಲೆ ಒತ್ತಡ ಹೇರಿದ್ದರಿಂದ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಕೆಯಾಗಿದೆ.
ಪೊಲೀಸರಿಗೆ ಆರೋಪಿ ನೀಡಿದ ಮೊತ್ತವೆಷ್ಟು?
ಪ್ರಕರಣದ ಆರೋಪಿ ಕ್ರಶರ್ ಉದ್ಯಮಿ ಅಶೋಕ್,ಎಸ್ಪಿ ರವಿ ಚೆನ್ನಣ್ಣನವರ್ ಗೆ 25 ಲಕ್ಷ,ಡಿವೈಎಸ್ಪಿ ಗೆ 15 ಲಕ್ಷ ಹಾಗೂ ಇನ್ನೊರ್ವ ಅಧಿಕಾರಿಗೆ 10 ಲಕ್ಷ ಹಣ ನೀಡುತ್ತಿರುವ, ಹಾಗೂ ದೂರುದಾರನಿಂದಲೂ ಹಣ ಪಡೆಯುವ ವಿಚಾರ ಸಾಕ್ಷಿ ಸಮೇತ ಪತ್ತೆಯಾಗಿದ್ದು, ಅನ್ಯಾಯ ಎಸಗಿದ ಅಧಿಕಾರಿಗಳಾದ ರವಿ ಚೆನ್ನಣ್ಣನವರ್,ಮಹದೇವಪ್ಪ,ಶ್ರೀನಿವಾಸ್ ಹಾಗೂ ಇಸ್ಮಾಯಿಲ್ ಎಂಬವರ ಅಮಾನತಿಗೆ ಹಾಗೂ ಸಿಬಿಐ ತನಿಖೆಗೆ ಆಗ್ರಹಿಸಲಾಗಿದೆ.