ಕಾರು ಕೊಳ್ಳುವ ಮುನ್ನ ಎಚ್ಚರ ಧನಿ !!|ಕಳೆದ ಬಾರಿ ಭಾರತೀಯರು ಕೊಂಡ ಬಹುತೇಕ ಕಾರುಗಳು ಗ್ಲೋಬಲ್ NCAP ಸೇಫ್ಟಿ ರೇಟಿಂಗ್ ನಲ್ಲಿ ಫೇಲ್ !|ಫೇಲ್ ಆದ ಕಾರುಗಳ ಲಿಸ್ಟ್ ನಲ್ಲಿ ನೀವು ಖರೀದಿಸಿದ್ದೂ ಇದೆಯೇ??

ಯಾರಿಗೆ ತಮ್ಮ ಜೀವದ ಮೇಲೆ ಆಸೆ ಇಲ್ಲ ಹೇಳಿ. ನೀವು ಯಾರಲ್ಲಿ ಬೇಕಾದರೂ ಕೇಳಿ ನೋಡಿ, ಪ್ರತಿ ಮನುಷ್ಯರು ಕೂಡ ತಾನು ಆರೋಗ್ಯವಂತವಾಗಿ ಹೆಚ್ಚು-ಹೆಚ್ಚು  ಸುದೀರ್ಘ ಕಾಲ ಬದುಕಬೇಕು ಎನ್ನುತ್ತಾರೆ. ಆದರೆ ಹೀಗೆ ಸುದೀರ್ಘವಾಗಿ ಬದುಕಲು ಇಚ್ಚಿಸುವ ಮಂದಿ ಅದಕ್ಕೆ ಬೇಕಾದ ಸನ್ನಿವೇಶಗಳನ್ನು ಸೃಷ್ಟಿಸಿ ಕೊಳ್ಳುವುದಿಲ್ಲ, ಮುಖ್ಯವಾಗಿ ನಾವು ಭಾರತೀಯರು ! ನಾವು ಭಾರತೀಯರು ಅತ್ಯಂತ ಕನಿಷ್ಠ ಆರೋಗ್ಯ ಪ್ರಜ್ಞೆ ಮತ್ತು ಸುರಕ್ಷತಾ ಪ್ರಜ್ಞೆ ಇಟ್ಟುಕೊಂಡು ಬದುಕುವವರು. ನಾವಿದನ್ನು ಒಪ್ಪಿಕೊಳ್ಳಲೇಬೇಕು. ಇದನ್ನು ಇದರ ಅಂಕಿ-ಅಂಶಗಳ ಸಮೇತ ನಿಮಗ್ ಇವತ್ತು ಪ್ರಸ್ತುತಪಡಿಸುತ್ತೇನೆ.

ಕಳೆದ ವರ್ಷ ಅಂದರೆ 2021 ಭಾರತದ ಆಟೋಮೊಬೈಲ್ ಸೆಕ್ಟರ್ ಗಳಿಗೆ ಕೊಚ್ಚ ಸುಧಾರಣೆಯ ವರ್ಷ  2020ರಲ್ಲಿ ಮತ್ತು ಅದಕ್ಕಿಂತ ಹಿಂದೆ ಇನ್ನೊಂದು ವರ್ಷದಲ್ಲಿ ಕೊರೋನಾದ ಅಪ್ಪಳಿಕೆ ವಾಹನಗಳು ಮತ್ತು ವಾಹನದ ಇಂಡಸ್ಟ್ರಿ ತುಕ್ಕು ಹಿಡಿಯಲು ಆರಂಭವಾಗಿತ್ತು. ಆದರೆ ಇದೀಗ ತಾನೇ ಕಳೆದುಹೋದ 2021 ರಲ್ಲಿ ಕೊಂಚ ಚೇತರಿಕೆ ಕಂಡಿದೆ. ಇವತ್ತು ನಾವೀಗ ಮಾಡ ಹೊರಟದ್ದು ಮಾರುಕಟ್ಟೆಯ ಅಧ್ಯಯನವಲ್ಲ  ಬದಲಿಗೆ 2021ರಲ್ಲಿ ಯಾವೆಲ್ಲ ವಾಹನಗಳು ಕಾರುಗಳು ಮಾರಾಟವಾಗಿವೆ ಮತ್ತು ಈ ಕಾರು ಮಾರಾಟದ ಅಂಕಿಅಂಶಗಳು ನಮ್ಮ ಸುರಕ್ಷತಾ ಪ್ರಜ್ಞೆಯನ್ನು ಹೇಗೆ ಬಿಂಬಿಸುತ್ತಿವೆ ಎನ್ನುವುದರ ಬಗ್ಗೆ ಲೇಖನ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರಾಟವಾದ ಟಾಪ್-ಟೆನ್ ಕಾರುಗಳ ವಿವರ ಇಲ್ಲಿದೆ ನೋಡಿ.
ಈ ಪಟ್ಟಿಯಲ್ಲಿರುವ 10 ಕಾರುಗಳಲ್ಲಿ 5 ಕಾರುಗಳು ಮಾರುತಿ ಸುಜುಕಿ ಕಾರ್ಯಾಗಾರದಿಂದ ಹೊರಕ್ಕೆ ಬಂದಿವೆ. ಸುರಕ್ಷತೆಯ ದೃಷ್ಟಿಯಿಂದ ಮಾರುತಿ ಕಾರುಗಳು ಯಾವುದೇ ರೀತಿಯಿಂದಲೂ ಜಸ್ತಿಫೈ ಆಗುತ್ತಿಲ್ಲ. ಕಾರಣ ಕಾರುಗಳ NCAP ಗ್ಲೋಬಲ್ ಸೇಫ್ಟಿ ರೇಟಿಂಗ್ ನಲ್ಲಿ ಹಲವು ಕಾರುಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿವೆ. ಝೀರೋ ರೇಟಿಂಗ್ ಅಂದರೆ ಕಳಪೆ ಸುರಕ್ಷಿತ ಕಾರು ಎಂದರ್ಥ. ಈ ಅಂಕಿ ಹೆಚ್ಚುತ್ತಾ ಹೋದಂತೆ ಕಾರು ತನ್ನ ಸುರಕ್ಷಿತ ಲೆವೆಲ್ ಅನ್ನು ಹೆಚ್ಚಿಸುತ್ತಾ ಹೋಗುತ್ತದೆ. 3 ರೇಟಿಂಗ್ ಇದ್ದ ಕಾರನ್ನು ಅದೊಂದು ಸಾಮಾನ್ಯ (ಸುರಕ್ಷಿತ ಕಾರು) ಎನ್ನಲಾಗುತ್ತದೆ. 5 ರೇಟಿಂಗ್ ಕಾರು ಅತ್ಯಂತ ಸುರಕ್ಷಿತ ಕಾರು ಎಂದು ಪರಿಗಣಿಸಲಾಗಿದೆ.

ಕಾರ್ ಸೇಫ್ಟಿ ಟೆಸ್ಟಿಂಗ್ ಹೇಗೆ ?
ಗಂಟೆಗೆ ಅರವತ್ತನಾಲ್ಕು ಕಿಲೋಮೀಟರ್ ವೇಗದಲ್ಲಿ ಬರುವ ಕಾರನ್ನು ಬಲಿಷ್ಠ ಗೋಡೆಯ ಮೇಲೆ ಡಿಕ್ಕಿ ಹೊಡೆಸಿ ಆಯಾ ಕಾರಿನ ಕ್ರಾಷ್ ಟೆಸ್ಟ್ ಮಾಡಲಾಗುತ್ತದೆ. ಡ್ರೈವರ್ ಸೇಫ್ಟಿ, ಪ್ಯಾಸೆಂಜರ್ ಸೇಫ್ಟಿ, ಚೈಲ್ಡ್ ಸೇಫ್ಟಿ ಮತ್ತು ಇಂಪಾಕ್ಟ್ ಅಸೆಸ್ಮೆಂಟ್ ಮುಖಾಂತರ ವಾಹನದ ಬಿಲ್ಡ್ ಕ್ವಾಲಿಟಿ ಮತ್ತು ಇತರ ಸುರಕ್ಷತಾ ಪರಿಮಾಣಗಳನ್ನು ಅಳೆಯಲಾಗುತ್ತದೆ. ಅದರಲ್ಲೂ ಎರಡು ಮುಖ್ಯ ಕೆಟಗರಿ ಇದೆ ಒಂದು ಎಒಪಿ (AOP) ಮತ್ತೊಂದು ಸಿಒಪಿ (COP). ಮೊದಲನೆಯದು ಅಡಲ್ಟ್ occupancy ಕೆಟಗರಿ ಮತ್ತೊಂದು ಚೈಲ್ಡ್ occupancy ಕೆಟಗರಿ. ಕ್ರಮವಾಗಿ ಹಿರಿಯ ಪ್ರಯಾಣಿಕರ ಮತ್ತು ಮಕ್ಕಳ ಸೇಫ್ಟಿ ಅನ್ನು ಅಳೆಯುವ ಮಾಪಕಗಳಷ್ಟೇ ಇದು. ಇನ್ನೂ ಹಲವಾರು ಕಾರು ಸುರಕ್ಷತೆಯ ಸಾಧನಗಳಿಗೆ. ಅದರ ಬಗ್ಗೆ ಮುಂದಿನ ಲೇಖನದಲ್ಲಿ ತಿಲ್ಕೊಳ್ಳೋಣ.

ಕಳೆದ ವರ್ಷ ಭಾರತೀಯರು ಖರೀದಿಸಲು ಇಷ್ಟಪಟ್ಟ ಟಾಪ್ 10 ಕಾರುಗಳು:
1) ಮಾರುತಿ ಸುಜುಕಿ ಸ್ವಿಫ್ಟ್: NCAP ಗ್ಲೋಬಲ್ ಸೇಫ್ಟಿ ರೇಟಿಂಗ್- 2 ಸ್ಟಾರ್
ಮಾರುತಿ ಸುಜುಕಿ ಸ್ವಿಫ್ಟ್ ಏಪ್ರಿಲ್ 2020 ರಿಂದ ಮಾರ್ಚ್ 2021 ರ ನಡುವೆ ದೇಶದಲ್ಲಿ ಹೆಚ್ಚು ಮಾರಾಟವಾದ ಕಾರು.
ಭಾರತೀಯ ಮಾರುಕಟ್ಟೆಯಲ್ಲಿ 1,72,671 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.
ಈ ಕಾರು ತುಂಬಾ ಫೇಮಸ್. ಇದನ್ನು ಹೆಚ್ಚಾಗಿ ಅಫೀಷಿಯಲ್ ಗಳು, ಸಾಫ್ಟ್ ವೇರ್ ಎಂಜಿನಿಯರ್ ಗಳು ಬಳಸುತ್ತಾರೆ. ಎಲ್ಲರೂ ಓದಿದವರೆ, ಎಲ್ಲರೂ ಟೆಕ್ನಿಕಲ್ ಸ್ಕಿಲ್, ಅನಲಿಟಿಕಲ್ ಸ್ಕಿಲ್ ಹೊಂದಿದವರು, ಆದರೂ ಸೇಫ್ಟಿ ಎಂಬ ವಿಷಯ ಬಂದಾಗ ಅವರು ಕೂಡ ‘ ಬ್ಲೈಂಡ್’ ಆಗ್ತಾರೆ. ಮುಗಿಬಿದ್ದು ಸುರಕ್ಷತೆ ಇಲ್ಲದ ಈ ಕಾರು ಕೊಳ್ತಾರೆ ಜನ.

2) ಮಾರುತಿ ಸುಜುಕಿ ಬಲೆನೊ: NCAP ಗ್ಲೋಬಲ್ ಸೇಫ್ಟಿ ರೇಟಿಂಗ್-ಝೀರೋ ಸ್ಟಾರ್ ಪಡೆದಿದೆ ಹಲವು ಫೀಚರ್ ಗಳಿರುವ ಈ ಆಕರ್ಷಕ ಕಾರು. ಕಳೆದ ಒಂದು ಅವಧಿಯಲ್ಲಿ ಬಲೆನೊ ದೇಶದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು. ಇದು ದೇಶದಲ್ಲಿ 1,63,445 ಯುನಿಟ್‌ಗಳನ್ನು ಮಾರಾಟ ಮಾಡಿದೆ.  ಆದರೇನು ಉಪಯೋಗ ? ಈ ಕಾರು ಸುರಕ್ಷತಾ ಮಾಪನದಲ್ಲಿ ಕಳಪೆ ಪ್ರದರ್ಶನ ನೀಡಿದೆ. ಆದ್ರಿಂದ ಈ ಕಾರು ಕೊಳ್ಳಬೇಡಿ.

3) ಮಾರುತಿ ಸುಜುಕಿ ವ್ಯಾಗನ್ಆರ್: NCAP ಗ್ಲೋಬಲ್ ಸೇಫ್ಟಿ ರೇಟಿಂಗ್- 2 ಸ್ಟಾರ್
ವ್ಯಾಗನ್ಆರ್ ಈ ಅವಧಿಯಲ್ಲಿ 1,60330 ಯುನಿಟ್‌ಗಳು ಮಾರಾಟವಾಗುವುದರೊಂದಿಗೆ ಮೂರನೇ ಅತಿ ಹೆಚ್ಚು ಮಾರಾಟವಾದ ಕಾರ್ ಆಗಿ ಉಳಿದಿದೆ.
ಇದನ್ನು ಹೆಚ್ಚಾಗಿ ವಿದ್ಯಾವಂತರು, ಅದರಲ್ಲೂ ಮುಖ್ಯವಾಗಿ ಡಾಕ್ಟರುಗಳು, ಪ್ರೊಫೆಸರ್ ಗಳು ಲೆಕ್ಚರರ್ ಗಳು ಬಳಸುತ್ತಾರೆ. ಆದರೆ ಅಜ್ಞಾನಕ್ಕೆ ಏನು ಕೊರತೆ ಹೇಳಿ. ಆದರೆ ಸುರಕ್ಷತಾ ಪ್ರಜ್ಞೆಯ ಕೊರತೆ ಇದೆ. ಗ್ಲೋಬಲ್ ಸೇಫ್ಟಿ ರೇಟಿಂಗ್ ನಲ್ಲಿ ಎರಡು ಸ್ಟಾರ್ ಪಡೆದ ಈ ಕಾರು, ಸಣ್ಣ ಪುಟ್ಟ ಆಕ್ಸಿಡೆಂಟುಗಳಲ್ಲಿ ಕೂಡ ನುಜ್ಜುಗುಜ್ಜಾಗಿದೆ.

4) ಹುಂಡೈ ಗ್ರಾಂಡ್ ಐ10: NCAP ಗ್ಲೋಬಲ್ ಸೇಫ್ಟಿ ರೇಟಿಂಗ್ -2 ಸ್ಟಾರ್ ರೇಟಿಂಗ್
ಹ್ಯುಂಡೈ ಗ್ರಾಂಡ್ ಐ10 ನ 81,667 ಕಾರುಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ. ಈ ಹ್ಯಾಚ್‌ಬ್ಯಾಕ್ ವರ್ಷಗಳಲ್ಲಿ ಕೊರಿಯನ್ ಕಾರು ತಯಾರಿಕಾ ಸಂಸ್ಥೆಯಾದ ಹುಂಡೈ   ಮಾರಾಟ ದಾಖಲಾಗಿದೆ. ಆದ್ರೆ ಈ ಕಾರು ಸೇಫ್ ಅಲ್ಲ. ಆಕರ್ಷಕ ಫೀಚರ್ಸ್ ಆಸೆಗೆ ಬಿದ್ದು ಮೋಸ ಹೋಗಬೇಡಿ.

5) ಹುಂಡೈ ಕ್ರೆಟಾ SUV: NCAP ಗ್ಲೋಬಲ್ ಸೇಫ್ಟಿ ರೇಟಿಂಗ್-3.5 ಸ್ಟಾರ್
ಕ್ರೆಟಾ ಪ್ರಮುಖ ಫೇಸ್‌ಲಿಫ್ಟ್‌ಗೆ ಒಳಗಾಗಿದೆ ಮತ್ತು 86,397 ಯುನಿಟ್‌ಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ. ಈ ಕಾರು ಕೂಡ ತುಂಬಾ ಬೇಡಿಕೆಯಲ್ಲಿದೆ. ಆದರೆ ಗ್ಲೋಬಲ್ ncap ರೇಟಿಂಗ್ ನಲ್ಲಿ ಕಾರು ಸಾಮಾನ್ಯ ಪ್ರದರ್ಶನ ನೀಡಿದೆ. 

6) ಕಿಯಾ ಸೆಲ್ಟೋಸ್: NCAP ಗ್ಲೋಬಲ್ ಸೇಫ್ಟಿ ರೇಟಿಂಗ್- 3 ಸ್ಟಾರ್. ಆದರೆ ಚೈಲ್ಡ್ ಸೇಫ್ಟಿ ಯಲ್ಲಿ 2 ಸ್ಟಾರ್ ಮಾತ್ರ ಪಡೆಯುವಲ್ಲಿ ಈ ಕಾರ ಸಫಲವಾಗಿದೆ.
ಸೆಲ್ಟೋಸ್ ಈ ವರ್ಷ 91,417 ಕಾರುಗಳನ್ನು ಮಾರಾಟ ಮಾಡಿದೆ ಮತ್ತು ಕಳೆದ ವರ್ಷವಷ್ಟೇ ಬಿಡುಗಡೆಯಾಗಿದೆ. ಆದರೆ ಸೇಫ್ಟಿ ರೇಟಿಂಗ್ ನಲ್ಲಿ ಸಾಮಾನ್ಯ ಪ್ರದರ್ಶನ ನೀಡಿದೆ ಕಿಯ ಸೆಲ್ಟೋಸ್. ಅದರಲ್ಲೂ ಚೈಲ್ಡ್ ಸ್ಥಿತಿಯಲ್ಲಿ ಹೀನಾಯ ಪ್ರದರ್ಶನ.

7) ಮಾರುತಿ ಇಕೋ: NCAP ಗ್ಲೋಬಲ್ ಸೇಫ್ಟಿ ರೇಟಿಂಗ್-ಝೀರೋ ಸ್ಟಾರ್
ಈ ವರ್ಷ ಭಾರತದಲ್ಲಿ ಮಾರಾಟವಾಗುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಈ ಕಾರು ಏಕೈಕ ಯುಟಿಲಿಟಿ ವ್ಯಾನ್ ಆಗಿ ಹೊರಹೊಮ್ಮಿದೆ. ಮಾರುತಿ ಈ ವರ್ಷ ನವೆಂಬರ್ 30 ರಂದು 88,265 Eeco ಯುನಿಟ್‌ಗಳನ್ನು ಮಾರಾಟ ಮಾಡಲಿದೆ. ಮಾರುತಿಯ ಒಟ್ಟು ಮಾರುಕಟ್ಟೆಯ ದೃಢವಾದ ಮಾರಾಟದ ಅಂಕಿಅಂಶಗಳ ಹಿಂದಿನ ಕಾರಣಗಳಲ್ಲಿ ಇಕೋ ಕೂಡ ಒಂದು. ಈ ಕಾರು ಹತ್ತಲು ಕೂಡಾ ಯೋಗ್ಯವಲ್ಲದ ಡಬ್ಬಿ ಕಟ್ಟಿ ಓಡಿಸುವಂತಹ ತಗಡು ಗಾಡಿ : ಸುರಕ್ಷತೆಯನ್ನು ಮುಂದಿಟ್ಟುಕೊಂಡು ಮಾತನಾಡುವುದಾದರೆ. ಇನ್ನೇನು, ಝೀರೋ ಸೇಫ್ಟಿ ರೇಟಿಂಗ್ ಇಟ್ಕೊಂಡು ಓದುತ್ತಿರುವ ಈ ಕಾರಿಗೆ ಭಾರೀ ಬೇಡಿಕೆ !! ದುರಂತ ಅನ್ನದೆ ಬೇರೆ ವಿಧಿಯಿಲ್ಲ.

8) ಹುಂಡೈ ವೆನ್ಯೂ: ಗ್ಲೋಬಲ್ ಎನ್ ಕಾಪ್ ಸೇಫ್ಟಿ ರೇಟಿಂಗ್-4 ಸ್ಟಾರ್
ಈ ಸಬ್-ಕಾಂಪ್ಯಾಕ್ಟ್ SUV ಈ ವರ್ಷ 92,972 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದೊಂದು ಒಳ್ಳೆಯ ಸುರಕ್ಷತಾ ದೃಷ್ಟಿಗಳನ್ನು ಗಮನದಲ್ಲಿಟ್ಟುಕೊಂಡು ತಯಾರಾದ ಕಾರು. ಫೋರ್ ಸ್ಟಾರ್ ರೇಟಿಂಗ್ ಹೊಂದಿದ್ದ ಈ ಕಾರು ಸಾಮಾನ್ಯಕ್ಕಿಂತ ಹೆಚ್ಚಿನ ಸುರಕ್ಷತೆಯನ್ನು ತನ್ನ ಪ್ರಯಾಣಿಕರಿಗೆ ಒದಗಿಸಬಲ್ಲದು. ಹಾಗಾಗಿ ಈ ಕಾರು ಕೊಳ್ಳಬಹುದು.

9) ಮಾರುತಿ ಸುಜುಕಿ ಆಲ್ಟೊ: ಗ್ಲೋಬಲ್ ಎನ್ ಕಾಪ್ ಸೇಫ್ಟಿ ರೇಟಿಂಗ್ – ಝೀರೋ
ಈ ವರ್ಷ ಆಲ್ಟೊ 1,58,992 ಯುನಿಟ್‌ಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ. ಇದು ಮತ್ತೂಂದು ಮಾರಾಟದಲ್ಲಿ ವಿಕ್ರಮ ಮಾಡಿದ ಕಾರು. ಆದ್ರೆ ಮತ್ತೂಂದು ತಗಡಿನ ಶೀಟು. ಸೇಫ್ಟಿ ದೃಷ್ಟಿಯಲ್ಲಿ ವೇಸ್ಟ್ ಕಾರು. ಇದರಿಂದ ದೂರ ಇರಿ. ನೀವೂ ಕೊಳ್ಳಬೇಡಿ, ಯಾರದೇ ಆಲ್ಟೊ ವನ್ನು ಹತ್ತಬೇಡಿ ಕೂಡಾ.

10) ಮಾರುತಿ ಸ್ವಿಫ್ಟ್ ಡಿಜೈರ್: ಗ್ಲೋಬಲ್ ಎನ್ ಕಾಪ್ ಸೇಫ್ಟಿ ರೇಟಿಂಗ್ – 2 ಸ್ಟಾರ್
ಡಿಜೈರ್ ಭಾರತದಲ್ಲಿ ಲಭ್ಯವಿರುವ ಅದರ ಗಾತ್ರದ ಏಕೈಕ ಸೆಡಾನ್ ಆಗಿದೆ. ಈ ವರ್ಷ ಭಾರತದಲ್ಲಿ 1,28,251 ಯುನಿಟ್‌ಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ. ಆದರೆ ಒಳ್ಳೆಯ ಸುರಕ್ಷತಾ ಪ್ರದರ್ಶನ ನೀಡುವ ಬದಲು ಇದು ಹೀನಾಯ ಪ್ರದರ್ಶನ ತೋರಿಸಿದೆ. ಇದು ಬಳಸಲು ಯೋಗ್ಯವಲ್ಲ.

ಈ ಮೇಲಿನ ಭಾರತದಲ್ಲಿ ಮಾರಾಟವಾದ ಕಾರುಗಳ ಅಂಕಿ-ಅಂಶದ ಮೇಲೆ ಹೇಳುವುದಾದರೆ ಭಾರತೀಯರು ಸುರಕ್ಷತೆಗೆ ಅತ್ಯಂತ ಕನಿಷ್ಠ ಮಹತ್ವವನ್ನು ನೀಡುತ್ತಾರೆ. ಇದು ಕಳೆದ ವರ್ಷ ಮಾರಾಟವಾದ ಭಾರತದಲ್ಲಿ ಮಾರಾಟವಾದ ಟಾಪ್ ಟೆನ್ ಕಾರುಗಳ ಅಂಕಿಅಂಶಗಳಿಂದ ಸಾಬೀತಾಗಿದೆ.
ಈಗ ಭಾರತದಲ್ಲಿ ಸ್ವದೇಶಿ ಟಾಟಾ ಕಂಪನಿಯು ಹಲವು ವಾಹನಗಳನ್ನು ಫೈವ್ ಸ್ಟಾರ್ ರೇಟಿಂಗ್ ನಲ್ಲಿ ನೋಟಿಗೆ ಬಿಟ್ಟಿವೆ. ಟಾಟಾದ ತಿಯಾಗೋ ಟಾಗೋರ್ ಮತ್ತು ಇತ್ತೀಚಿನ ಮಾಡೆಲ್ ಗಳಾದ ಆಲ್ಟ್ರೋಜ್ ಮತ್ತು ಟ್ರೈನಿಂಗ್ ನಲ್ಲಿರುವ ನೆಕ್ಸನ್ ಗಾಡಿಗಳು ಅತ್ಯಂತ ಸುರಕ್ಷತಾ ಕಾರು ಗಳೆಂದು ncap ರೇಟಿಂಗ್ ನಲ್ಲಿ ಪ್ರೂವ್ ಆಗಿವೆ. ಅಲ್ಲದೆ ಮಹೀಂದ್ರ ಕಂಪನಿಯ, ಹಳೆಯ ಫೋರ್ಡ್ ಕಂಪನಿಯ ವಾಹನಗಳು ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳದೆ ತಯಾರಾಗಿ ಬಂದಿದೆ.

ದಯವಿಟ್ಟು ಓದುಗರೇ, ಕಾರು ಇರುವುದು ನಾವು ಸುರಕ್ಷಿತವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಲು. ಅಂತಹ ಸುರಕ್ಷಿತ ವಾಹನಗಳ ಆಯ್ಕೆ ಬಹುಮುಖ್ಯ. ಈಗ ಗೂಗ್ಲ್ ನಲ್ಲಿ, ಯು ಟ್ಯೂಬ್ ನಲ್ಲಿ ಸಕಲ ಜ್ಞಾನ ಭಂಡಾರವೇ ಅಡಗಿದೆ. ಓಡಿ, ನೋಡಿ, ಬಳಸಿಕೊಳ್ಳಿ.ಯಾವುದನ್ನೂ ಕೊಳ್ಳುವ ಮೊದಲು ಸ್ವಲ್ಪ ಅಧ್ಯಯನ ಮುಖ್ಯ. ಕಾರಿನ ಒಳಗೆ ಒಂದು ಪ್ರೀತಿಯ ಕುಟುಂಬ ಇದೆ ಎಂಬುದನ್ನು ಮರೀಬೇಡಿ. ಸುರಕ್ಷಿತ ರೇಟಿಂಗ್ ಇರುವ ಗಾಡಿ ಮಾತ್ರ ಕೊಳ್ಳಿ ಮತ್ತು ಬಳಸಿ ಎನ್ನುವುದು ನಮ್ಮ ವಿನಂತಿ.
ನಿರೀಕ್ಷಿಸಿ: ನಿಮ್ಮ ಬಜೆಟ್ಟಿನಲ್ಲಿ ಬರುವ ಸೇಫೆಸ್ಟ್ ಕಾರುಗಳ ಬಗ್ಗೆ ಸಂಪೂರ್ಣ ಮಾಹಿತಿ ಮುಂದಿನ ಸಂಚಿಕೆಯಲ್ಲಿ.

error: Content is protected !!
Scroll to Top
%d bloggers like this: