ಭಾರತದ ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ : ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ, ಮಾಸಿಕ ವೇತನ ರೂ.69,000/-

ಕೇಂದ್ರ ಸರಕಾರದ ಉದ್ಯೋಗ ಅರಸುತ್ತಿರುವವರಿಗೆ ಸಿಹಿಸುದ್ದಿ. ಗಡಿ ಭದ್ರತಾ ಪಡೆ ( ಬಾರ್ಡರ್ ಸೆಕ್ಯುರಿಟಿ ಫೋರ್ಸ್) ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಭಾರತದಾದ್ಯಂತ ಖಾಲಿ ಇರುವ 2788 ಟ್ರೇಡ್ಸ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತರು ನಿಗದಿತ ದಿನಾಂಕ ಫೆ.28, 2022 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬಹುದು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಹುದ್ದೆ ಹೆಸರು : ಕಾನ್ಸ್ ಟೇಬಲ್ ( ಟ್ರೇಡ್ಸ್ ಮ್ಯಾನ್ )

ಹುದ್ದೆ ಸ್ಥಳ : ಭಾರತದೆಲ್ಲೆಡೆ

ಹುದ್ದೆ ಸಂಖ್ಯೆ : 2788

ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 15-01-2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-02-2022

ವಿದ್ಯಾರ್ಹತೆ : ಗಡಿ ಭದ್ರತಾ ಪಡೆಯ ನೇಮಕಾತಿ ಅಧಿಸೂಚನೆ ಪ್ರಕಾರ ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ ನಿಂದ ಕಡ್ಡಾಯವಾಗಿ 10 ನೇ ತರಗತಿ, ಐಟಿಐ, ಡಿಪ್ಲೋಮಾ ತೇರ್ಗಡೆ ಹೊಂದಿರಬೇಕು.

ಅನುಭವ : ಅಭ್ಯರ್ಥಿಗಳು ಆಯಾ ಟ್ರೇಡ್ ಗಳಲ್ಲಿ ಎರಡು ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ವೃತ್ತಿ ಶಿಕ್ಷಣ ಸಂಸ್ಥೆಯ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಮಾಡಿರಬೇಕು. ಟ್ರೇಡ್ ನಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಇರಬೇಕು.

ವಯೋಮಿತಿ : ಆಗಸ್ಟ್ 1, 2021 ಕ್ಕೆ ಅನ್ವಯವಾಗುವಂತರ ಕನಿಷ್ಠ 18 ವರ್ಷ, ಮತ್ತು ಗರಿಷ್ಠ 23 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆಯನ್ನು ಆಯಾಯ ವರ್ಗಕ್ಕೆ ಅನುಸಾರವಾಗಿ ನೀಡಲಾಗಿದೆ.

ಅರ್ಜಿ ಶುಲ್ಕ : ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಆಯ್ಕೆ ಪ್ರಕ್ರಿಯೆ : ದೈಹಿಕ ಗುಣಮಟ್ಟ ಪರೀಕ್ಷೆ, ದೈಹಿಕ ದಕ್ಷತೆ ಪರೀಕ, ಟ್ರೇಡ್ ಪರೀಕ್ಷೆ, ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.21,700 ರಿಂದ ರೂ. 69,100/- ರವರೆಗೆ ವೇತನ ಇರುತ್ತದೆ.

error: Content is protected !!
Scroll to Top
%d bloggers like this: