ಸಮುದ್ರ ತಳದಲ್ಲಿ ಐಸ್ ಫಿಶ್ ಗಳ 6 ಕೋಟಿ ಮನೆ ಪತ್ತೆ|ಏನಿದು ಐಸ್ ಫಿಶ್?|ಇದರ ಮನೆ ಕುರಿತು ಕುತೂಹಲ ಇರೋರು ಇಲ್ಲಿ ನೋಡಿ

Share the Article

ಮನುಷ್ಯರಂತೆಯೇ ಮೀನುಗಳಿಗೂ ಒಂದು ನೆಲೆ ಇರುತ್ತದೆ. ಅವುಗಳು ನೀರಿನಲ್ಲಿ ಮಾತ್ರ ಜೀವುಸುವುದಾದರು,ಅವುಗಳಿಗೆ ಮನೆ ಇರುತ್ತೆ ಅನ್ನೋ ವಿಚಾರ ನಿಮಗೆ ಗೊತ್ತಿದೆಯೇ?ಇಲ್ಲೊಂದು ಕಡೆ ಮೀನುಗಳ ಮನೆಗಳು ಪತ್ತೆಯಾಗಿದ್ದು,ಅದು ಯಾವರೀತಿ ಇರಬಹುದು ಎಂಬ ಕುತೂಹಲ ಇರೋರು ಮುಂದೆ ನೋಡಿ.

ಹೌದು.ಅಂಟಾರ್ಕ್​​​ಟಿಕಾದಲ್ಲಿ ಹಿಮಮುಚ್ಚಿದ ವೆಡ್ಡಲ್ ಸಮುದ್ರದ ತಳಭಾಗದಲ್ಲಿ ತಜ್ಞರು ಐಸ್​ ಫಿಶ್​​ಗಳ ಸುಮಾರು 6 ಕೋಟಿಯಷ್ಟು ಮನೆಗಳನ್ನು ಪತ್ತೆಮಾಡಿದ್ದಾರೆ.ಮೀನುಗಳ ಕಾಲೋನಿ ಲಂಡನ್​ ನಗರದ ಮೂರನೇ ಒಂದು ಭಾಗದಷ್ಟು ದೊಡ್ಡದಾಗಿದೆ ಅಂತ ಕೂಡ ಗೊತ್ತಾಗಿದೆ. ಸಮುದ್ರ ತಳದಿಂದ ಒಂದೂವರೆಯಿಂದ ಎರಡೂವರೆ ಮೀಟರ್ ಎತ್ತರದಲ್ಲಿ ಸಂಶೋಧನೆ ವೇಳೆ ಈ ಅದ್ಭುತ ಸೆರೆಯಾಗಿದೆ.

ಈ ಹಿಂದೆಯೂ ಐಸ್​ ಫಿಶ್​​ಗಳ ಕಾಲೋನಿ ಸಿಕ್ಕಿತ್ತು. ಆದ್ರೆ ಅದ್ರಲ್ಲಿ ಕೇವಲ 60 ಮನೆಗಳು ಮಾತ್ರ ಇದ್ದವು.ಕಂರೆಂಟ್ ಬಯಾಲಜಿಯಲ್ಲಿ ಈ ಸಂಬಂಧ ಸಂಶೋಧನೆಯ ವರದಿಯನ್ನು ಪ್ರಕಟಿಸಲಾಗಿದೆ.ಇನ್ನು ಮನೆ ಅಂದ್ರೆ ದೊಡ್ಡ ಗೂಡು ಕಟ್ಕೊಂಡು ಇವೆ ಅಂತ ಅರ್ಥವಲ್ಲ. ಜಸ್ಟ್ ಸಣ್ಣ ಸಣ್ಣ ಕಲ್ಲುಗಳ ಚಿಕ್ಕ ರಾಶಿ ರೀತಿ ಇದ್ದು, ವೃತ್ತಾಕಾರದಲ್ಲಿದೆ. ಅದ್ರ ಮೇಲೆ ಅವುಗಳು ಕೂತಿರೋದು ಕೂಡ ಚಿತ್ರಗಳಲ್ಲಿ ನೋಡಬಹುದಾಗಿದ್ದು, ಒಂತರ ವಿಭಿನ್ನವಾಗಿದೆ.

ಐಸ್​ಫಿಶ್​​ ಹೇಗಿರುತ್ತೆ ಗೊತ್ತಾ?

ಈ ಐಸ್​ಫಿಶ್ ನ ತಲೆಬುರುಡೆ ಮತ್ತು ರಕ್ತ ಪಾರದಾರ್ಶಕವಾಗಿರುತ್ತೆ. ಜೊತೆಗೆ ಕೆಂಪು ರಕ್ತಕಣವನ್ನು ಹೊಂದಿರದ ಏಕೈಕ ಕಶೇರುಕ ಈ ಐಸ್​ ಫಿಶ್ ಆಗಿದೆ. ಕೋಲ್ಡ್​ ತಡೆದುಕೊಳ್ಳಲು ಇದ್ರ ದೇಹದಲ್ಲಿ ಆಯಂಟಿ ಫ್ರೀಜ್​ ಪ್ರೊಟೀನ್ ಇರುತ್ತೆ.

Leave A Reply