ಈ ಈರುಳ್ಳಿ ಕಣ್ಣೀರು ತರಿಸದು ! ಈ ಈರುಳ್ಳಿಗೆ ವ್ಯಕ್ತವಾಗಿದೆ ಬೇಡಿಕೆ

Share the Article

ಅಡುಗೆ ಮಾಡುವಾಗ ಈರುಳ್ಳಿ ಬಳಸುತ್ತೇವೆ. ಅದರಲ್ಲೂ ಮಾಂಸಾಹಾರದ ಅಡುಗೆಗೆ ಈರುಳ್ಳಿ ಬೇಕೆ ಬೇಕು. ಆದರೆ ಈರುಳ್ಳಿ ಕತ್ತರಿಸಲು ಬಹುತೇಕ ಅಡುಗೆ ಭಟ್ಟರು ಹಿಂದೆ ಸರಿಯುತ್ತಾರೆ.

ಏಕೆಂದರೆ ಇದನ್ನು ಕತ್ತರಿಸುವಾಗ ಕಣ್ಣೀರು ತಾನಾಗಿಯೇ ಬರುತ್ತದೆ. ಈ ಕಾರಣಕ್ಕಾಗಿ ಮನೆಯಲ್ಲಿನ ಹೆಣ್ಣು ಮಕ್ಕಳು ಈರುಳ್ಳಿ ಕತ್ತರಿಸುವುದನ್ನು ಗಂಡುಮಕ್ಕಳಲ್ಲಿ ಮಾಡಿಸುತ್ತಾರೆ.

ಆದರೀಗ ಅಚ್ಚರಿ ವಿಚಾರವೆಂದರೆ ಮಾರುಕಟ್ಟೆಗೆ ಹೊಸ ತಳಿಯ ಈರುಳ್ಳಿ ಬಂದಿದೆ. ಇದನ್ನು ಕತ್ತರಿಸಿದಾಗ ಕಣ್ಣೀರು ಬರುವುದಿಲ್ಲವಂತೆ. ಇದು ಸಿಹಿ ನೀರುಳ್ಳಿಯಾಗಿದೆ. ಯುನೈಟೆಡ್ ಕಿಂಗ್‌ಡಂನಲ್ಲಿ ಸಿಹಿ ನೀರುಳ್ಳಿ ಮಾರಾಟಕ್ಕೆ ಸಿದ್ದವಾಗಿದೆ.

ವೈಟ್‌ರೋಸ್ ಸೂಪರ್ ಮಾರ್ಕೆಟ್‌ನಲ್ಲಿ ಈ ಈರುಳ್ಳಿಯನ್ನು Sun ions® ಬಾಂಡ್ ಹೆಸರಿನಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ. ಅಂದಹಾಗೆಯೇ Sunions® ಈರುಳ್ಳಿಯನ್ನು ಅಮೆರಿಕದಲ್ಲಿ ಬೆಳೆಯಲಾಗುತ್ತದೆ. ಇದು ಸಿಹಿ ಈರುಳ್ಳಿಯಾಗಿದೆ. ಕಣ್ಣಿನ ಬಗ್ಗೆ ಹೆಚ್ಚು ಜಾಗತೆ ಮಾಡುವವರು, ಈರುಳ್ಳಿ ಎಂದರೆ ಹಿಂದೆ ಸರಿಯುವ ಹೆಂಗಸರಿಗೆ ಈ ಈರುಳ್ಳಿ ಸೂಕ್ತವಾಗಿದೆ.

Leave A Reply