ಈ ವಾಹನಕ್ಕೆ ಮೀನೇ ಚಾಲಕ | ಮೀನಿಗೆಂದೆ ಸಂಚರಿಸಲು ರೊಬೋಟಿಕ್ ವಾಹನ

ಮೀನು ಜಲಚರ, ಅದಕ್ಕೆ ನೆಲದ ಮೇಲೆ ಸಂಚರಿಸಲು ಸಾಧ್ಯವಿಲ್ಲ. ಹೀಗೆಂದು ನೀವೆಂದು ಕೊಂಡಿದ್ದರೆ ಈಗಲೇ ಆ ಆಲೋಚನೆಯನ್ನು ಬಿಟ್ಟುಬಿಡಿ, ಏಕೆಂದರೆ ಇಸ್ರೇಲ್‌ನ ವಿಜ್ಞಾನಿಗಳು ಮೀನಿಗೆ ನೆಲದ ಮೇಲೂ ಸಂಚರಿಸಲು ಅವಕಾಶ ಮಾಡಿಕೊಡಲೆಂದೇ ಹೊಸ ಇಸ್ರೇಲ್ ಒಂದು ರೊಬೋಟಿಕ್ ವಾಹನವನ್ನು ತಯಾರಿಸಿದೆ. ಇಸ್ರೇಲ್‌ನ ಬೆನ್-ಗುರಿಯಾನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಹೊಸದೊಂದು ರೊಬೋ ಟೆಕ್ ವಾಹನವನ್ನು ತಯಾರಿಸಿದ್ದಾರೆ.

ಇದರಲ್ಲಿ ಮಧ್ಯಭಾಗದಲ್ಲಿ ಫಿಶ್ ಟ್ಯಾಂಕ್ ಇದ್ದರೆ ಮೇಲೆ ಲಿಡಾರ್ ಅಳವಡಿಸಲಾಗಿದೆ. ಕೆಮರಾ, ಓಮ್ಮಿ ವೀಲ್ಸ್, ಕಂಪ್ಯೂಟರ್, ಎಲೆಕ್ಟಿಕ್ ಮೋಟಾರ್‌ಗಳನ್ನೂ ಇದರಲ್ಲಿ ಜೋಡಿಸಲಾಗಿದೆ.

ಈ ವಾಹನದಲ್ಲಿ ಪಲ್ಲಡ್ ಲೇಸರ್ ಲೈಟ್ ಸೆನ್ಸರ್‌ಗಳನ್ನು ಬಳಸಲಾಗಿದ್ದು, ವಾಹನದಲ್ಲಿರುವ ಫಿಶ್ ಟ್ಯಾಂಕ್ ನೊಳಗಿನ ಮೀನಿನ ಚಲನವಲನವನ್ನು ಗಮನಿಸಿ, ಅದರ ಅನುಸಾರ ಚಕ್ರ ತಿರುಗುತ್ತದೆ. ಅದರಿಂದಾಗಿ ವಾಹನ ತನ್ನಿಂತಾನಾಗೇ ಮುಂದೆ ಸಾಗುತ್ತದೆ.

ಅಂದ ಹಾಗೆ, ಈ ವಾಹನದ ನಿಜ ನಿಯಂತ್ರಣ ಇರುವುದು ಮೀನಿನ ಬಳಿ, ಅದು ಯಾವ ಕಡೆ ಹೋಗಬೇಕೆಂದು ನಿರ್ಧರಿಸಿ, ಆ ಕಡೆಯ ಗ್ಲಾಸ್‌ನ್ನು ಮುಟ್ಟಿದರೆ ಮಾತ್ರವೇ ಚಕ್ರ ತಿರುಗುತ್ತದೆ. ಅದರಿಂದಾಗಿ ವಾಹನ ತನ್ನಿಂತಾನಾಗೇ ಮುಂದೆ ಸಾಗುತ್ತದೆ. ವಿಜ್ಞಾನಿಗಳು ಈ ವಾಹನದ ಪರೀಕ್ಷೆಗೆಂದು ಆರು ಗೋಲ್ಡನ್ ಫಿಶ್‌ಗಳನ್ನು ಬಳಸಿಕೊಂಡಿದ್ದಾರೆ. ಕೇವಲ 10 ತರಬೇತಿಯಲ್ಲಿ ಈ ಮೀನುಗಳು ಉತ್ತಮ ಚಾಲಕರಾಗಿ ಹೊರ ಹೊಮ್ಮಿದವು ಎನ್ನುತ್ತಾರೆ ವಿಜ್ಞಾನಿಗಳು,

Leave A Reply

Your email address will not be published.