ಮೂಡುಬಿದಿರೆ: ಗೋವಿನ ತಲೆಯನ್ನು ಕತ್ತರಿಸಿ ಗೋಣಿ ಚೀಲದಲ್ಲಿ ಹಾಕಿ ರಸ್ತೆಗೆಸೆದ ಕಿಡಿಗೇಡಿಗಳು| ಆರೋಪಿಗಳನ್ನು ಕೂಡಲೇ ಪತ್ತೆ ಮಾಡುವಂತೆ ಹಿಂದೂ ಜಾಗರಣ ವೇದಿಕೆಯಿಂದ ಆಗ್ರಹ

Share the Article

ಮೂಡುಬಿದಿರೆ :ತಾಲೂಕಿನ ಪುರಸಭಾ ವ್ಯಾಪ್ತಿಯ ಮಹಾವೀರ ಕಾಲೇಜು ಸಮೀಪ ಕೊಡಂಗಲ್ಲು ಕೀರ್ತಿನಗರ ಕ್ರಾಸ್ ಎಂಬಲ್ಲಿ ದನದ ತಲೆ ಕಡಿದು ಗೋಣಿ ಚೀಲದಲ್ಲಿ ಕಟ್ಟಿ ರಸ್ತೆ ಬದಿ ಎಸೆದಿರುವುದು ಪತ್ತೆಯಾಗಿದೆ.

ಈ ಘಟನೆ ಇಂದು ಬೆಳಗಿನ ಜಾವ ಗಮನಕ್ಕೆ ಬಂದಿದ್ದು, ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಅನೇಕ ಸಾರ್ವಜನಿಕರು ದೌಡಾಯಿಸಿದ್ದಾರೆ.ಬಳಿಕ ಸ್ಥಳಕ್ಕಾಗಮಿಸಿದ ಮೂಡುಬಿದಿರೆ ಪೊಲೀಸರು ಗೋವಿನ ತಲೆಯನ್ನು ತೆರವುಗೊಳಿಸಿದರು.

ನಿನ್ನೆ ರಾತ್ರಿ ಯಾರೋ ಕಿಡಿಗೇಡಿಗಳು ರುಂಡವನ್ನು ಪ್ಲಾಸ್ಟಿಕ್ ಚೀಲದಲ್ಲಿ ತಂದು ಇಲ್ಲಿ ಎಸೆದಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದು,ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಘಟನೆ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸದಿದ್ದಲ್ಲಿ 48 ಗಂಟೆಗಳ ಒಳಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಮೂಡಬಿದಿರೆ ತಾಲೂಕು
ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.

ಕರಾವಳಿಯಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇದ್ದು,ಜನರ ನಂಬಿಕೆ ಹಾಗು ಭಾವನೆಗೆ ಧಕ್ಕೆಯುಂಟುಮಾಡುತ್ತಿದೆ.ಅಲ್ಲದೆ ಅಶಾಂತಿಯ ವಾತಾವರಣ ಸೃಷ್ಟಿಸುತಿದ್ದು ಇದಕ್ಕೆ ಶೀಘ್ರವೇ ಕಡಿವಾಣ ಬೀಳಬೇಕಿದೆ.

Leave A Reply

Your email address will not be published.