ಲಿಕ್ಕರ್ ಉದ್ಯಮಿಯ ಮನೆಯ ನೀರಿನ ಟ್ಯಾಂಕ್ ನಲ್ಲಿತ್ತು ಒಂದು ಕೋಟಿ ನಗದು!

Share the Article

ಆದಾಯ ತೆರಿಗೆ ಅಧಿಕಾರಿಗಳು ಮಧ್ಯಪ್ರದೇಶದ ದಾಮೋನ್‌ನಲ್ಲಿರುವ ಲಿಕ್ಕರ್ ಉದ್ಯಮಿ ಶಂಕರ್ ರೈ, ಅವರ ಸಂಬಂಧಿಕರ ಮನೆ ಮತ್ತು ಆಸ್ತಿಗಳ ಮೇಲೆ ದಾಳಿ ನಡೆಸಿ ಕೋಟಿ ರೂಪಾಯಿ 8 ನಗದು ಮತ್ತು 3 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

ಇದರಲ್ಲಿ ಕುತೂಹಲದ ವಿಷಯವೆಂದರೆ, ರೈ ಫ್ಯಾಮಿಲಿ ಸುಮಾರು ಒಂದು ಕೋಟಿ ನಗದನ್ನು, ಬ್ಯಾಗ್‌ನೊಳಗೆ ತುಂಬಿ ನೀರಿನ ಟ್ಯಾಂಕ್‌ನಲ್ಲಿ ಅಡಗಿಸಿಟ್ಟಿದ್ದರು.

ಟ್ಯಾಂಕ್‌ನಿಂದ ಹಣ ತೆಗೆದ ಅಧಿಕಾರಿಗಳು, ನೀರಿನಲ್ಲಿ ನೆಂದಿದ್ದ ನೋಟುಗಳನ್ನು ಐರನ್ ಹಾಗೂ ಹೇರ್ ಡ್ರೈಯರ್ ಸಹಾಯದಿಂದ ಒಣಗಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

Leave A Reply