ಅಲ್ಲು ಅರ್ಜುನ್ – ರಶ್ಮಿಕಾ ಮಂದಣ್ಣ ಅಭಿನಯದ ಸೂಪರ್ ಹಿಟ್ ಸಿನಿಮಾ “ಪುಷ್ಪಾ” ಸಿನಿಮಾ ಮೊನ್ನೆಯಷ್ಟೇ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾಗೆ ಒಟಿಟಿಯಲ್ಲಿ ಕೂಡಾ ಭರ್ಜರಿ ರೆಸ್ಪಾನ್ಸ್ ದೊರಕಿತ್ತು.
ಆದರೆ ಈ ಚಿತ್ರದ ಕೊನೆಯಲ್ಲಿ ಕಲಾವಿದರ ಹೆಸರು ಹಾಕುವಾಗ ಚಿತ್ರತಂಡ ದೊಡ್ಡ ಯಡವಟ್ಟು ಮಾಡಿದೆ. ಸಿನಿಮಾದಲ್ಲಿ ಅಭಿನಯಿಸಿದವರ ಫೋಟೋ ಜೊತೆಗೆ ಹೆಸರನ್ನೂ ಹಾಕಲಾಗಿದೆ. ಅದರಲ್ಲಿ ರಶ್ಮಿಕಾ ಇದ್ದಾಳೆ, ಮಂದಣ್ಣ ಮಿಸ್ಸಿಂಗ್.
ಇದರಲ್ಲಿ ರಶ್ಮಿಕಾ ಮಂದಣ್ಣ ಹೆಸರನ್ನು ತಪ್ಪಾಗಿ ರಶ್ಮಿಕಾ ಮಡೋನ ಎಂದು ಹಾಕಲಾಗಿದೆ. ಇದನ್ನು ಗಮನಿಸಿದ ನೆಟ್ಟಿಗರು ಟ್ರೋಲ್ ಮಾಡಲು ಶುರುಮಾಡಿದ್ದಾರೆ. ಟ್ರೊಲ್ ಮಾಡಿಯೇ ಜೀವನ ನಿರ್ವಹಿಸುತ್ತಿರುವ ಕೆಲವು ಪೋಲಿ ಟ್ರೋಲಿಗರು ಮಂದಣ್ಣದಿಂದ ಬದಲಾದ ಮಡೋನ ದ ಸ್ಪೆಲ್ಲಿಂಗ್ ಅನ್ನು ಮತ್ತಷ್ಟು ಉಜ್ಜಿ, madona ಪದದ ಯಥಾವತ್ ಕನ್ನಡ ಅನುಕರಣೆ ಮಾಡಿ ‘ಮಾಡೋಣ ‘ ( madona) ಎಂದು ಟೀಸ್ ಮಾಡುತ್ತಿದ್ದಾರೆ. ‘ರಶ್ಮಿಕಾ ಮಾಡೋಣ ‘ ಈಗ ಆಕೆಯ ಟ್ರೆಂಡಿಂಗ್ ನಲ್ಲಿರುವ ಹೊಸ ನಾಮಧೇಯ.
You must log in to post a comment.