ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ ಮೇಲ್ : ಖ್ಯಾತ ಜ್ಯೋತಿಷಿಯ ಪುತ್ರ ಅರೆಸ್ಟ್

ಬೆಂಗಳೂರು : ಇಲ್ಲಿಯವರೆಗೆ ಜನಸಾಮಾನ್ಯರಿಗೆ ಬ್ಲಾಕ್ ಮೇಲ್ ಮಾಡಿ ಹಣ ದೋಚುತ್ತಿದ್ದಂತ ವಂಚಕರು, ರಾಜ್ಯದ ಸಚಿವರೊಬ್ಬರ ಪುತ್ರನಿಗೆ ವೀಡಿಯೋ ಕಳುಹಿಸಿ, ಬ್ಲಾಕ್ ಮೇಲ್ ಮಾಡಲು ಪ್ರಯತ್ನಿಸಿದ್ದಾರೆ.

ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರ ಪುತ್ರ ನಿಶಾಂತ್ ಎಂಬುವರಿಗೆ ಎಡಿಟ್ ಮಾಡಿದಂತ ವೀಡಿಯೋ ಮಾಡಿ, ವಾಟ್ಸಪ್ ಮೂಲಕ ಎಸ್ ಟಿ ಸೋಮಶೇಖರ್, ಅವರ ಪಿ ಎ ಸೇರಿದಂತೆ ಸಚಿವರ ಪುತ್ರ ನಿಶಾಂತ್ ಗೂ ಕಳುಹಿಸಲಾಗಿತ್ತು.

ಒಂದು ಕೋಟಿ ಹಣ ನೀಡದಿದ್ದರೆ ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಹಾಕುವುದಾಗಿ ಬ್ಲಾಕ್ ಮೇಲರ್ಸ್ ಬೆದರಿಕೆ ಹಾಕಿದ್ದರು.

ಈ ಪ್ರಕರಣ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿತ್ತು.

ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು, ದುಬೈನಿಂದ ಆಗಮಿಸಿದ ಬೆಂಗಳೂರಿನ ಖ್ಯಾತ ಜ್ಯೋತಿಷಿಯೊಬ್ಬರ ಪುತ್ರ, ಆರೋಪಿ, ರಾಹುಲ್ ಭಟ್ ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಐದು ದಿನ ತಮ್ಮ‌ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಈ ಪ್ರಕರಣದ ಮತ್ತೋರ್ವ ಆರೋಪಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.

Leave A Reply

Your email address will not be published.