ಪ್ರಿಯಕರನನ್ನು ಉಳಿಸಿಕೊಳ್ಳಲು ಆಸ್ಪತ್ರೆಗೆ ಹೋಗಿ ಮಗು ಕದ್ದ ನೀತು | ಪ್ರಕರಣದ ಹಿಂದೆ ಇದೆ ಹಿಂದೂ ಯುವತಿಗೆ ಮಾಡಿದ ಲವ್ ಕಮ್ ಸೆಕ್ಸ್ ಧೋಕ !!

ಕೊಟ್ಟಾಯಂ : ಕೇರಳದ ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ನವಜಾತ ಶಿಶುವನ್ನು ನರ್ಸ್ ಡ್ರೆಸ್ ನಲ್ಲಿ ಬಂದಿದ್ದ ಮಹಿಳೆಯೊಬ್ಬಳು ಕಳವು ಮಾಡಿದ್ದಾಳೆ. ಈ ಮಗು ಕಳ್ಳತನದ ಹಿಂದಿನ ಕಾರಣ ತಿಳಿದು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಹಿಂದೂ ಮಹಿಳೆಯನ್ನು ವಂಚಿಸಿದ ಮತ್ತು ಲವ್ ಹೆಸರಿನಲ್ಲಿ ಸೆಕ್ಸ್ ಧೋಕಾ ಮಾಡಿದ ಪ್ರಕರಣ ಹೊರಕ್ಕೆ ಬಂದಿದೆ.

ಅದು ಜನವರಿ 6. ಅಂದು ವೈದ್ಯಕೀಯ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿದ್ದ ನವಜಾತ ಶಿಶುವನ್ನು ನರ್ಸ್ ವೇಷಧಾರಿಯಲ್ಲಿದ್ದ ಮಹಿಳೆಯೊಬ್ಬಳು ಬಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕದ್ದುಕೊಂಡು ಹೋಗಿದ್ದಾಳೆ. ಶಿಶುವಿನ ತಾಯಿ ಮತ್ತು ಸಂಬಂಧಿಕರಿಗೆ ತಮ್ಮ ಮಗು ಕಳ್ಳತನವಾಗಿದೆ ಎಂದು ಗೊತ್ತಾಗಲು ಅರ್ಧಗಂಟೆ ಹಿಡಿದಿದೆ. ಆದರೆ ಅಷ್ಟರಲ್ಲಿ ಕಳ್ಳಿ ಮಗುವಿನ ಜತೆ ಕಾಣೆಯಾಗಿದ್ದಾಳೆ.

ಮಗುವನ್ನು ಕದ್ದ ಮಹಿಳೆ ನೀತು ( 33 ವರ್ಷ), ತನ್ನ ಪ್ರಿಯಕರನಾದ ಇಬ್ರಾಹಿಂ ಬಾದುಷಾಗೆ ತಾನು ಆತನ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ತೋರಿಸಲು ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾಳೆ. ವಾಸ್ತವವಾಗಿ ಈ ಮಹಿಳೆ ಈ ಹಿಂದೆ ಗರ್ಭಧರಿಸಿದ ನಂತರ ಗರ್ಭಪಾತ ಮಾಡಿಸಿಕೊಂಡಿದ್ದಳಂತೆ. ಈ ವಿಷಯದ ಬಗ್ಗೆ ಆಕೆ ತನ್ನ ಪ್ರೇಮಿಗೆ ತಿಳಿಸಿಲ್ಲವಂತೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಕೊಟ್ಟಾಯಂ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ದ್ಯಾವಯ್ಯ, ” ತನ್ನ ಪ್ರಿಯಕರ ತನ್ನನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವುದಾಗಿ ನಿರ್ಧರಿಸಿದ್ದರಿಂದ, ನೀತು ಈ ರೀತಿಯ ಕೃತ್ಯ ಎಸಗಿದ್ದಾಳೆ. ತನ್ನನ್ನು ಬಳಸಿಕೊಂಡು ಗರ್ಭವತಿ ಯನ್ನಾಗಿ ಮಾಡಿ ಆನಂತರ ಬಿಡುತ್ತಿರುವ ಆ ಮುಸ್ಲಿಂ ಯುವಕನ ನಡೆಯ ಬಗ್ಗೆ ನೀತು ಆತಂಕಿತರಾಗಿ ಇದ್ದಳು.

ಹೀಗಾಗಿ ತನಗೆ ಮಗುವಾಗಿದೆ ಎಂದು ಆಕೆ ಸುಳ್ಳು ಹೇಳಿದ್ದಾಳೆ. ಅದನ್ನೇ ಇಟ್ಟುಕೊಂಡು ಆಕೆ ಅವನನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದಳಂತೆ. ಒಂದು ವೇಳೆ ಮಗುವಿನ ಬಗ್ಗೆ ಪ್ರಿಯಕರ ಕೇಳಿದರೆ ಕದ್ದ ಮಗುವನ್ನೇ ಆತನಿಗೆ ತೋರಿಸಲು ಈಕೆ ಹೀಗೆ ಮಾಡಿದ್ದಾಳೆ ಎಂದು ಪ್ರಕರಣದ ತನಿಖೆ ಮಾಡಿದ ಪೊಲೀಸರು ಹೇಳಿದ್ದಾರೆ.

ಹಾಗೆ ಮಗುವನ್ನು ಆತನಿಗೆ ತೋರಿಸಲು ಒಂದು ಮಗು ಬೇಕಿತ್ತು. ಅದಕ್ಕಾಗಿ ಹೆರಿಗೆ ವಾರ್ಡ್ ಗೆ ತೆರಳಿದ ನೀತು ಅಲ್ಲಿಂದ ಮಗುವನ್ನು ಕದ್ದು ಸೆಲ್ಫಿ ತೆಗೆದುಕೊಂಡು‌ ಅದನ್ನು ತನ್ನ ಪ್ರಿಯಕರನಿಗೆ ಕಳುಹಿಸಿದ್ದಳು. ಇದರಿಂದ ತಾನು ಆತನ ಮಗುವಿನ ತಾಯಿಯಾಗಿದ್ದೇನೆ ಎಂದು ಹೇಳಲು ಪ್ರಯತ್ನ ಮಾಡಿದ್ದಾಳೆ. ತಾನು ಪ್ರೀತಿಸಿದ ಹುಡುಗನ ವಂಚನೆಯಿಂದ ತಪ್ಪಿಸಿಕೊಳ್ಳಲು ನೀತು ಮಗುವನ್ನು ಕದಿಯಲು ಹೊರಟಿದ್ದಾಳೆ. ಆದರೆ ಮಗುವನ್ನು ಕದ್ದ ಕೆಲವೇ ಗಂಟೆಗಳ ಒಳಗೆ ಆಟೋ ರಿಕ್ಷಾ ಡ್ರೈವರ್ ಒಬ್ಬ ನೀಡಿದ ಸುಳಿವಿನ ಆಧಾರದ ಮೇಲೆ ಪೊಲೀಸರು ಮಗುವಿನ ಸಮಯದ ಕಲಿಯನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಪ್ರಿಯಕರ ಇಬ್ರಾಹಿಂ ಬಾದುಷಾ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನ್ನಿಂದ 30 ಲಕ್ಷಕ್ಕೂ ಹೆಚ್ಚು ಹಣ ಸಾಲ ಪಡೆದು ವಂಚಿಸಿದ್ದಾನೆ, ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಸೆಕ್ಸಗೆ ಬಳಕೆ ಮಾಡಿಕೊಂಡಿದ್ದಾನೆ ಎಂದು ನೀತು ತನ್ನ ಪ್ರಿಯಕರನ ವಿರುದ್ಧ ದೂರು ನೀಡಿದ್ದಾಳೆ.

Leave A Reply

Your email address will not be published.