ಸೂರ್ಯಂಗೇ ಟಾರ್ಚಾ ಕಿದ ಚೀನಾದ ವಿಜ್ಞಾನಿಗಳು | ಚೀನಾದ ಕೃತಕ ಸೂರ್ಯ ನೈಜ ಸೂರ್ಯನಿಗಿಂತ 5 ಪಟ್ಟು ಹೆಚ್ಚು ಶಕ್ತಿಶಾಲಿ !!

ಬೀಜಿಂಗ್: ಸೂರ್ಯಂಗೇ ಟಾರ್ಚಾ ಎನ್ನುವುದು ಇದೀಗ ನಿಜವಾಗುವ ಸುದ್ದಿ ಬಂದಿದೆ. ಭವಿಷ್ಯದಲ್ಲಿ ಬೇಕಾಗುವ ಶುದ್ಧ ಶಕ್ತಿಗೆ ದಾರಿ ಮಾಡಿಕೊಡಲು ಚೀನಾ “ಕೃತಕ ಸೂರ್ಯನ” ಪ್ರಯೋಗ ಮಾಡುತ್ತಿದೆ. ಇದರ ಹೆಸರು ಎಕ್ಸ್‌ಪೀರಿಯೆನ್ಷಿಯಲ್ ಅಡ್ವಾನ್ಸ್‌ಡ್ ಸೂಪರ್‌ಕಂಡಕ್ಟಿಂಗ್ ಟೋಕಾಮಾಕ್ (ಈಸ್ಟ್) ಎಂದು ಕರೆಯಲಾಗುತ್ತದೆ. ಈ ಪರೀಕ್ಷೆಯಲ್ಲಿ ಚೀನಾ ಯಶಸ್ವಿಯಾಗಿದೆ. ಈ ಕೃತಕ ಸೂರ್ಯ ನೈಜ ಸೂರ್ಯನಿಗಿಂತ 5 ಪಟ್ಟು ಹೆಚ್ಚು ಶಕ್ತಿಶಾಲಿ ಎಂಬ ಅಂಶ ಇದೀಗ ಗಮನಸೆಳೆಯುತ್ತಿದೆ.

ದೊಡ್ಡ ಡೋನಟ್ ಆಕಾರದ ಈ ಕೃತಕ ಸೂರ್ಯನಿಗೆ ಸಂಬಂಧಿಸಿದಂತೆ ಒಂದು ಮಹತ್ವದ ಪರೀಕ್ಷೆಯನ್ನು ಚೀನಾ ನಡೆಸಿದೆ. ನ್ಯೂಕ್ಲಿಯರ್ ಫ್ಯೂಷನ್ ಮೂಲಕ ನಡೆದ ವೈಜ್ಞಾನಿಕ ಪ್ರಯೋಗ ಇದಾಗಿದ್ದು, ಕೃತಕ ಸೂರ್ಯನ ತಾಪಮಾನ ಹೆಚ್ಚಿಸೋದು ಮತ್ತು ದೀರ್ಘಕಾಲ ಬಾಳಿಕೆ ಬರುವಂತೆ ಮಾಡೋದು ಈ ಪರೀಕ್ಷೆಯ ಉದ್ದೇಶವಾಗಿದೆ. ಹೆಫೀ ಇನ್​ಸ್ಟಿಟ್ಯೂಟ್ ಆಫ್ ಫಿಸಿಕಲ್ ಸೈನ್ಸ್ ಈ ಫರೀಕ್ಷೆ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ ಚೀನಾ ಈ ಯೋಜನೆಗೆ ಈಗಾಗಲೇ 89 ಕೋಟಿ ಡಾಲರ್ ಅಂದ್ರೆ ಆರೂವರೆ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಭಾರಿ ತಾಪಮಾನದ ಮೂಲಕ ಹೈಡ್ರೋಜನ್​​ನ್ನು ಉರಿಸಿ, ಪ್ಲಾಸ್ಮಾಗೆ ಬದಲಿಸಿ ಅದರಿಂದ ಇಂಧನ ಬಿಡುಗಡೆ ಮಾಡೋದು ಈ ಯೋಜನೆಯ ಉದ್ದೇಶವಾಗಿದೆ. ಈ ಇಂಧನ ಬಳಸೋಕೆ ಸಾಧ್ಯವಾದ್ರೆ ಸ್ವಲ್ಪ ಮಟ್ಟದ ಇಂಧನ ಸಾಕಾಗುತ್ತೆ. ಅಂದ್ರೆ ಇಂಧನ ಬಳಕೆ ಕಡಿಮೆಯಾಗುತ್ತೆ. ಇದ್ರಿಂದ ರೇಡಿಯೋ ಆಕ್ಟೀವ್ ವೇಸ್ಟೇಜ್ ಕೂಡ ಸೃಷ್ಟಿಯಾಗಲ್ಲ ಅನ್ನೋದು ಈ ಯೋಜನೆಯ ಲೆಕ್ಕಾಚಾರ.

ಸಾಧನದ ಸೆಟಪ್ ಒಂದು ಫ್ಯೂಷನ್ ರಿಯಾಕ್ಟರ್ ಆಗಿದ್ದು, ಇದರಲ್ಲಿ ಇತ್ತೀಚಿನ ಪರೀಕ್ಷೆಯಲ್ಲಿ ಬೆರಗುಗೊಳಿಸುವಂತ ಫಲಿತಾಂಶ ಸಿಕ್ಕಿದೆ. ಇದು 70 ಮಿಲಿಯನ್ ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಹೆಫಿ ಇನ್​​ಸ್ಟಿಟ್ಯೂಟ್​​ ಆಫ್ ಫಿಸಿಕಲ್​​ ಸೈನ್ಸ್​​ನ ಉಪ ನಿರ್ದೇಶಕ ಸಾಂಗ್ ಯುಂಟಾವೋ, ಈಗಿಂದ ಐದು ವರ್ಷಗಳ ನಂತರ ಫ್ಯೂಷನ್ ರಿಯಾಕ್ಟರ್ ಶುರು ಮಾಡ್ತೀವಿ. ಅದರ ನಿರ್ಮಾಣಕ್ಕೆ 10 ವರ್ಷಗಳು ಬೇಕಾಗುತ್ತೆ. ಸುಮಾರು 2040ರ ವೇಳೆಗೆ ಅದ್ರಿಂದ ಇಂಧನ ಉತ್ಪಾದನೆ ಶುರು ಮಾಡ್ತೀವಿ ಅಂತ ಹೇಳಿದ್ದಾರೆ. 2006ರಿಂದಲೇ ಇದ್ರ ನಿರ್ಮಾಣ ಕಾರ್ಯ ಶುರುವಾಗಿದ್ದು, ಹಲವು ಪರೀಕ್ಷೆಗಳು ಕೂಡ ನಡೆದಿವೆ ಎಂದರು.

ಇತ್ತೀಚಿನ ಪ್ರಯೋಗದಲ್ಲಿ “ಕೃತಕ ಸೂರ್ಯ” 1,056 ಸೆಕೆಂಡುಗಳವರೆಗೆ ಅಥವಾ 17 ನಿಮಿಷಗಳು ಮತ್ತು 36 ಸೆಕೆಂಡುಗಳವರೆಗೆ – 70 ಮಿಲಿಯನ್ ಡಿಗ್ರಿ ಸೆಲ್ಸಿಯಸ್‌ನಲ್ಲಿ ಓಡಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿ ಹೇಳುತ್ತದೆ. ಇದು ನೈಜ ಸೂರ್ಯನಿಗಿಂತ ಸುಮಾರು ಐದು ಪಟ್ಟು ಹೆಚ್ಚು ಬಿಸಿಯಾಗಿರುತ್ತದೆ. ಜೊತೆಗೆ ಅದು ಅದರ ಮಧ್ಯಭಾಗದಲ್ಲಿ 15 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿರುತ್ತದೆ. ವಿಜ್ಞಾನಿಗಳು ಈಗ 100 ಮಿಲಿಯನ್ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ.

2020ರಲ್ಲಿ ದಕ್ಷಿಣ ಕೊರಿಯಾ ಕೃತಕ ಸೂರ್ಯನ ಪ್ರಮಾಣದ ಉಷ್ಣಾಂಶ ಸೃಷ್ಟಿಸುವಲ್ಲಿ ದಾಪುಗಾಲು ಹಾಕಿತ್ತು. ಆಗ ಸುಮಾರು 20 ಸೆಕೆಂಡುಗಳ ಕಾಲ 100 ಮಿಲಿಯನ್ ಡಿಗ್ರಿಯಲ್ಲಿ ಕೃತಕ ಸೂರ್ಯನನ್ನು ದಕ್ಷಿಣ ಕೊರಿಯಾ ಬೆಳಗಿಸಿದೆ. ನಮ್ಮ ಸೂರ್ಯನ ಕೇಂದ್ರ ಭಾಗವು 15 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಮಾತ್ರ ಉರಿಯಬಲ್ಲದು. ಆದ್ರೆ ಕೊರಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯೂಷನ್ ಎನರ್ಜಿ (ಕೆಎಫ್‌ಇ) ಸಂಶೋಧನಾ ಕೇಂದ್ರ ಕೆಸ್ಟಾರ್, ಸೋಲ್ ನ್ಯಾಷನಲ್ ಯುನಿವರ್ಸಿಟಿ (ಎಸ್‌ಎನ್‌ಯು) ಮತ್ತು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಜಂಟಿ ಪ್ರಯೋಗದಲ್ಲಿ ಈ ಸಾಧನೆಯನ್ನು ಮಾಡಿದೆ. 2018ನೇ ವರ್ಷದಲ್ಲಿ ಪ್ಲಾಸ್ಮಾ ಕಾರ್ಯಾಚರಣೆಯು ಎಂಟು ಸೆಕೆಂಡುಗಳ ಕಾಲ ಕಾರ್ಯಾಚರಣೆ ನಡೆಸಿತ್ತು. 2018ರಲ್ಲಿ ಕೆಸ್ಟಾರ್ ಮೊದಲ ಬಾರಿಗೆ 100 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಉಷ್ಣತೆಯನ್ನು ತಲುಪಿತ್ತು. ಆದರೆ ಆಗ ಅದು ಕೇವಲ 1.5 ಸೆಕೆಂಡ್‌ವರೆಗೆ ಉಳಿದುಕೊಂಡಿತ್ತು.
ಒಂದೊಮ್ಮೆ ಇಂತಹ ಪ್ರಯೋಗಗಳು ಪರಿಪೂರ್ಣವಾಗಿ ನಡೆದು ಆಚರಣೆಯ ಹಂತಕ್ಕೆ ಬಂದರೆ ವಿಶ್ವದ ಇಂಧನ ಅಗತ್ಯತೆ ಕೃತಕ ಸೂರ್ಯನಿಂದಲೇ ಮರು ಪೂರಣಗೊಳ್ಳಲಿದೆ.

error: Content is protected !!
Scroll to Top
%d bloggers like this: