ಬಜೆಟ್ ಮಂಡನೆಗೂ ಮುನ್ನ
ಹಲ್ವಾ ಯಾಕೆ ತಿನ್ನಿಸ್ತಾರೆ ಗೊತ್ತಾ ? | ‘ಹಲ್ವಾ ಸಮಾರಂಭ’ ದ ಬಗ್ಗೆ ನಿಮಗೆ ತಿಳಿದಿರದ ಕೆಲವೊಂದು ಮಾಹಿತಿ

Share the Article

ಫೆ.1, 2022 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಇದಕ್ಕೂ ಮೊದಲು ಸಂಪ್ರದಾಯದಂತೆ ಹಲ್ವಾ ಸಮಾರಂಭ ನಡೆಯುತ್ತದೆ. ಇದಕ್ಕೆ ಈಗ ಸಿದ್ಧತೆಗಳು ನಡೆಯುತ್ತಿದೆ. ಜನವರಿ 22, 2021 ರಂದು ಕಳೆದ ಬಾರಿ ಹಲ್ವಾ ಸಮಾರಂಭ ನಡೆದಿತ್ತು. ಅಂದರೆ ಬಜೆಟ್ ಮಂಡನೆಗೂ 9 ದಿನ ಮೊದಲು.

ಸಾಂಪ್ರದಾಯಿಕವಾಗಿ ಹಣಕಾಸು ಸಚಿವಾಲಯದಲ್ಲಿ ನಡೆಯುವ ಈ ಹಲ್ವಾ ಸಮಾರಂಭಕ್ಕೆ ಸಚಿವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುತ್ತಾರೆ.

ಈ ಹಲ್ವಾ ಸಮಾರಂಭ ನಡೆಯುವುದರ ಹಿಂದೆ ಒಂದು ಕಾರಣವಿದೆ. ನಮ್ಮ ಭಾರತೀಯ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯದ ಮುನ್ನ ಸಿಹಿ ತಿನ್ನುವ ಪದ್ಧತಿ ಇದೆ. ಹಾಗಾಗಿ ದೇಶದ ಒಳಿತಿಗಾಗಿ ಬಜೆಟ್ ಸಿದ್ಧಪಡಿಸುವ ಮುನ್ನವೂ ಹಲ್ವಾ ಆಚರಣೆ ನಡೆಯುತ್ತದೆ.

ಈ ಸಿಹಿಯನ್ನು ಬಜೆಟ್ ಮುದ್ರಕರು ಹಾಗೂ ಸಿಬ್ಬಂದಿಗೆ ನೀಡಲಾಗುತ್ತದೆ. ಈ ಸಮಾರಂಭವು ಬಜೆಟ್ ದಾಖಲೆಗಳ ಮುದ್ರಣ ಆರಂಭಿಸುವ ಮೊದಲು ನಡೆಯುತ್ತದೆ.

ಈ ಹಲ್ವಾ ಸಮಾರಂಭ ನಡೆದಿದೆ ಎಂದಾದ್ರೆ ಬಜೆಟ್ ದಾಖಲೆ ಮುದ್ರಣ ಶುರು ಎಂದು ಅರ್ಥ. ಇನ್ನೊಂದು ಮುಖ್ಯವಾದ ಮಾಹಿತಿ ಏನೆಂದರೆ ಈ ಬಜೆಟ್ ಮಂಡನೆಯಾಗುವವರೆಗೂ ಮುದ್ರಣಕಾರರು ಹಾಗೂ ಸಿಬ್ಬಂದಿ ಮೊಬೈಲ್, ಲ್ಯಾಂಡ್ ಫೋನ್ ಬಂದ್ ಮಾಡಲಾಗುತ್ತದೆ.

Leave A Reply

Your email address will not be published.