ಒಪ್ಪಿಗೆ ಇಲ್ಲದ ಲವ್ ಮ್ಯಾರೇಜ್ ಕುರಿತು ವಿಚಿತ್ರ ಮಾಹಿತಿ ಹೊರ ಹಾಕಿದ ಪೊಲೀಸ್ ಮಹಾನಿರ್ದೇಶಕ!! | ಅಷ್ಟಕ್ಕೂ ಅವರು ಹೇಳಿದ್ದೇನು??

ಇಂದಿನ ಕಾಲದಲ್ಲಿ ಮಕ್ಕಳೊಂದಿಗೆ ಪೋಷಕರ ನಡೆ ಹೇಗಿರುತ್ತೆ ಎಂಬುದರ ಮೇಲೆ ಮಕ್ಕಳ ಸಂಸ್ಕಾರ ನಿಂತಿದೆ. ಹೀಗೆ ಬಿಹಾರದ ಪೊಲೀಸ್​ ಮಹಾನಿರ್ದೇಶಕರಾದ ಎಸ್​​.ಕೆ. ಸಿಂಗಾಲ್​​ ಸಮಾಜ ಸುಧಾರಣೆ ಅಭಿಯಾನದಲ್ಲಿ ಮತನಾಡುತ್ತ, ಪೋಷಕರ ಒಪ್ಪಿಗೆ ಇಲ್ಲದೆ ಲವ್ ಮ್ಯಾರೇಜ್ ಆಗುತ್ತಿರುವ ಹೆಣ್ಣು ಮಕ್ಕಳ ಕುರಿತು ಅಚ್ಚರಿಯ ಮಾಹಿತಿಯೊಂದನ್ನು ತಿಳಿಸಿದ್ದಾರೆ.

Ad Widget

ಹೌದು.ಪೋಷಕರ ಒಪ್ಪಿಗೆಯಿಲ್ಲದೇ ಮದುವೆಯಾಗುವ ಹೆಣ್ಣು ಮಕ್ಕಳನ್ನು ಒತ್ತಾಯಪೂರ್ವಕವಾಗಿ ವೇಶ್ಯಾವಾಟಿಕೆ ದಂಧೆಗೆ ನೂಕಲಾಗುತ್ತದೆ ಎಂಬ ವಿಚಿತ್ರವಾದ ಹೇಳಿಕೆಯೊಂದನ್ನು ಹೊರಹಾಕಿದ್ದಾರೆ.ಇದೀಗ ಈ ಮಾತಿನಿಂದಾಗಿ ಸೋಶಿಯಲ್​ ಮೀಡಿಯಾದಲ್ಲಿ ಇವರ ಬಗ್ಗೆ ಸದ್ದು ಹೆಚ್ಚಾಗಿದೆ.ಬಿಹಾರದ ಸಿಎಂ ನಿತೀಶ್​ ಕುಮಾರ್​ ಅವರು ನಡೆಸುತ್ತಿರುವ ಸಮಾಜ ಸುಧಾರಣಾ ಅಭಿಯಾನದಲ್ಲಿ ಸಿಂಗಾಲ್​ ಈ ಹೇಳಿಕೆಗಳನ್ನು ನೀಡಿದ್ದಾರೆ.

Ad Widget . . Ad Widget . Ad Widget . Ad Widget

Ad Widget

ಮನೆ ಬಿಟ್ಟು ಹೋಗುವ ಯುವತಿಯರು ಪೋಷಕರ ಒಪ್ಪಿಗೆಯನ್ನು ಪಡೆಯದೇ ಮದುವೆಯಾಗುವಂತಹ ಅನೇಕ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಇದರಲ್ಲಿ ಅನೇಕ ಯುವತಿಯರನ್ನು ಕೊಲೆ ಮಾಡಲಾಗಿದೆ. ಇನ್ನೂ ಕೆಲವರನ್ನು ವೇಶ್ಯಾವಾಟಿಕೆಗೆ ತಳ್ಳಲಾಗಿದೆ. ಇಂತಹ ನಿರ್ಧಾರಗಳಿಗೆ ಪೋಷಕರು ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ. ಸಮಸ್ತಿಪುರದಲ್ಲಿ ನಡೆದ ಸಮಾಜ ಸುಧಾರಣಾ ಅಭಿಯಾನದಲ್ಲಿ ಈ ಹೇಳಿಕೆ ನೀಡಿದ್ದಾರೆ.ಪೋಷಕರು ತಮ್ಮ ಮಕ್ಕಳೊಂದಿಗೆ ನಿಯಮಿತವಾಗಿ ಮಾತನಾಡಬೇಕೆಂದು ನಾನು ವಿನಂತಿಸುತ್ತೇನೆ. ಅವರಿಗೆ ಉತ್ತಮ ಸಂಸ್ಕಾರಗಳನ್ನು ನೀಡಿ ಹಾಗೂ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ ಎಂದು ಹೇಳಿದರು.

Ad Widget
Ad Widget Ad Widget

Leave a Reply

error: Content is protected !!
Scroll to Top
%d bloggers like this: