ಜಮೀನಿನಲ್ಲಿದ್ದ ಮಣ್ಣನ್ನು ಅಗೆದು ಕದ್ದೊಯ್ದ ಖದೀಮರು! ಅಷ್ಟಕ್ಕೂ ಈ‌ ಮಣ್ಣನ್ನು ಯಾಕೆ ಕದ್ದರು ಗೊತ್ತಾ?

Share the Article

ನಾವು ಚಿನ್ನ, ಹಣ ಕಳ್ಳತನ ಮಾಡುವವರನ್ನು ನೋಡಿದ್ದೇವೆ. ಆದ ಇಲ್ಲಿ ಕಳ್ಳತನ ಮಾಡಿದ್ದು ಮಾತ್ರ ಯಾರೂ ಊಹಿಸಿದ ವಸ್ತುವನ್ನು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ ವಿಚಿತ್ರ ಕಳ್ಳತನ ಪ್ರಕರಣ, ಹೌದು, ಜಮೀನಿನಲ್ಲಿರುವ ಮಣ್ಣನ್ನೇ ಕಳ್ಳರು ಕಳ್ಳತನ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಬಡ ರೈತನ ಜಮೀನಿನಲ್ಲಿರುವ ಮಣ್ಣನ್ನು ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ಅಂಚಟಗೇರಿ ಗ್ರಾಮದ ಕಾಶೀನಾಥ ತೊಡೆ ಎಂಬ ರೈತನ ಜಮೀನಿನಲ್ಲಿ ನಡೆದಿದೆ. ರಾತ್ರೋ ರಾತ್ರಿ ಜಮೀನಿನ ಮಣ್ಣು ಕಳವು ಮಾಡಿದ ಭೂಪರು, ಇಟ್ಟಿಗೆ ತಯಾರಿಸಲು ಫಲ ನೀಡುವ ಮಣ್ಣು ಕಳ್ಳತನ ಮಾಡಿದ್ದಾರೆ.

ನಮ್ಮ ತೋಟವನ್ನೇ ನಾಶ ಮಾಡಿ ಮಣ್ಣು ಕದ್ದಿದ್ದು, ದುಷ್ಕರ್ಮಿಗಳು ಸುಮಾರು 15 ಲಕ್ಷ ಬೆಲೆಬಾಳುವ ಮಣ್ಣು ಕಳ್ಳತನ ಮಾಡಿದ್ದಾರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರೈತ ಕಾಶಿನಾಥ ಖೋಡೆ ಅಗ್ರಹಿಸಿದ್ದಾರೆ.

Leave A Reply