ವಾಟ್ಸಪ್ ನಲ್ಲಿ ಬರಲಿದೆ ಹೊಸ ಫೀಚರ್ |ಸಮೀಪದ ಗ್ರಾಹಕರ ಸಂಪರ್ಕ ಮಾಹಿತಿ ಒದಗಿಸಲಿದೆ|ಅಲ್ಲದೆ ಲಾಗಿನ್,ಲಾಗ್ ಔಟ್ ಆಯ್ಕೆಯು ದೊರೆಯಲಿದೆ

ದಿನ ಕಳೆದಂತೆ ಸೋಶಿಯಲ್ ಮೀಡಿಯಾಗಳು ಮುಂದುವರಿಯುತ್ತಲೇ ಇದೆ. ಅದಕ್ಕೆ ತಕ್ಕಂತೆ ಹೊಸ-ಹೊಸ ಫೀಚರ್ ಬರುತ್ತಲೇ ಇದೆ. ಇದೀಗ ಮತ್ತೊಮ್ಮೆ ತನ್ನ ವೈಶಿಷ್ಟ್ಯ ನವೀಕರಿಸಿದ್ದು, ಬಳಕೆದಾರರಿಗೆ ಉಪಯೋಗವಾಗುವಂತಿದೆ. ಹೌದು. ಇನ್ನು ಮುಂದೆ ಸಮೀಪದ ವ್ಯಾಪಾರಿಗಳ ಸಂಪರ್ಕ ಮಾಹಿತಿಯನ್ನು ಗ್ರಾಹಕರಿಗೆ ವಾಟ್ಸಪ್ ಒದಗಿಸಲಿದೆ. ಅಲ್ಲದೆ ಇನ್ಸ್ಟಾಗ್ರಾಮ್ ವಾಟ್ಸಪ್, ಹಾಗೂ ಲಾಗಿನ್ ಲಾಗ್ಔಟ್ ಆಗುವ ಫೀಚರ್ ನ್ನು ಅಪ್ಡೇಟ್ ಮಾಡಲಿದೆ.

ಇನ್-ಆಪ್ ಬಿಸಿನೆಸ್ ಡೈರೆಕ್ಟರಿ ಎಂಬ ಕ್ಷಿಪ್ರ ಸಂದೇಶ ಆಪ್ ನಿಂದ ಬಳಕೆದಾರರು ತಮ್ಮ ಸಮೀಪದ ವ್ಯಾಪಾರಿಗಳನ್ನು ಆಯ್ದುಕೊಳ್ಳಲು ಆಯ್ಕೆಯೊಂದನ್ನು ವಾಟ್ಸ್‌ಆಪ್ ನಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ. ಆದರೆ, ಈ ಡೈರೆಕ್ಟರಿಯು ಸದ್ಯ ಎಲ್ಲ ಬಳಕೆದಾರರಿಗೂ ಲಭ್ಯವಾಗುವುದಿಲ್ಲ. ವಾಟ್ಸ್‌ಆಪ್ ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಬ್ಬರಿಗೂ ತನ್ನ ಸಂಪರ್ಕ ಮಾಹಿತಿ ಪುಟವನ್ನು ಮರು ವಿನ್ಯಾಸಗೊಳಿಸುತ್ತಿದೆ. ಈ ಸಂಪರ್ಕ ಮಾಹಿತಿ ಪುಟವು ಕಳೆದ ಆಗಸ್ಟ್‌ನಲ್ಲಿ ವಾಟ್ಸ್‌ಆಪ್ ಬೀಟಾ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ಪರಿಷ್ಕೃತಗೊಳಿಸಿದ ವ್ಯಾಪಾರ ಪುಟದಂತೆಯೇ ಇರಲಿದೆ ಎಂದು ಹೇಳಿದೆ.

ಬಳಕೆದಾರರಿಗೆ ಅತ್ಯುನ್ನತ ಅನುಭವ ನೀಡಲು ಮರುವಿನ್ಯಾಸಗೊಂಡಿರುವ ಸಂಪರ್ಕ ಮಾಹಿತಿ ಪುಟವು ಕ್ಷಿಪ್ರ ಹುಡುಕಾಟದ ಆಯ್ಕೆಯನ್ನೂ ಒಳಗೊಂಡಿರುವ ಸಾಧ್ಯತೆ ಇದೆ. ಡಬ್ಲ್ಯೂಎಬೀಟಾಇನ್ಫೊ ಪ್ರಕಾರ, ಈ ಸೌಲಭ್ಯವು ಕೇವಲ ಐಒಎಸ್ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ. ಆದರೆ, ಭವಿಷ್ಯದಲ್ಲಿ ಮರುವಿನ್ಯಾಸಗೊಂಡಿರುವ ಸಂಪರ್ಕ ಮಾಹಿತಿ ಪುಟವು ಐಒಎಸ್ ಹಾಗೂ ಆಯಂಡ್ರಾಯ್ಡ್ ಬಳಕೆದಾರರಿಬ್ಬರಿಗೂ ಲಭ್ಯವಾಗಲಿದೆ.

ಇದರಲ್ಲಿ ಸಮೀಪದ ವ್ಯಾಪಾರಗಳ ಹುಡುಕಾಟ ನಡೆಸುವಾಗ ಆಯ್ಕೆಗಳನ್ನು ಶೋಧಿಸುವ ಪ್ರತ್ಯೇಕ ಅವಕಾಶ ಒದಗಿಸುವ ನಿಟ್ಟಿನಲ್ಲಿ ವಾಟ್ಸ್‌ಆಪ್ ಪ್ರಯತ್ನಿಸುತ್ತಿದೆ. ಈ ಶೋಧವು ಮುಖ್ಯವಾಗಿ ರೆಸ್ಟೋರೆಂಟ್, ದಿನಸಿ ಅಂಗಡಿಗಳು ಹಾಗೂ ಜವಳಿ ಅಂಗಡಿಗಳ ನಿರ್ದಿಷ್ಟ ಸ್ಥಳಗಳ ಫಲಿತಾಂಶವನ್ನು ಒದಗಿಸಲಿದೆ.ಬಳಕೆದಾರರು ತಮ್ಮ ಸಮೀಪದ ವ್ಯಾಪಾರ ಸ್ಥಳಗಳನ್ನು ಹುಡುಕಲು ಅನುಕೂಲವಾಗುವ ಇನ್-ಆಯಪ್ ಬಿಸಿನೆಸ್ ಅನ್ನು ಸೆಪ್ಟೆಂಬರ್‌ನಲ್ಲಿ ಬ್ರೆಜಿಲ್‌ನ ಸೊ ಪೌಲೊದಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಲಾಗಿತ್ತು. ಆದರೆ, ಈ ವೈಶಿಷ್ಟ್ಯವು ಜಾಗತಿಕ ಬಳಕೆದಾರರಿಗೆ ಯಾವಾಗ ದೊರೆಯಲಿದೆ ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ.

ವಾಟ್ಸ್​ಆಪ್​ನಲ್ಲಿ ಬರಲಿದೆ ಹಲವು ವೈಶಿಷ್ಟ್ಯತೆಗಳು

ವಾಟ್ಸಪ್ ನಲ್ಲಿ ಇನ್ಸ್ಟಾಗ್ರಾಮ್ ರೀಲ್​ಗಳನ್ನು ಹಂಚಿಕೊಳ್ಳಲು ಬಯಸಿದಾಗ, ನಾವು ವಿಡಿಯೋವನ್ನು ಡೌನ್ಲೋಡ್ ಮಾಡಬೇಕು ನಂತರ ಅದನ್ನು ಸ್ಟೇಟಸ್​ನಲ್ಲಿ ಹಾಕುತ್ತೇವೆ. ಆದರೆ ಮೆಟಾ ಈಗ ಹೊಸ ರೂಪದೊಂದಿಗೆ ಹೊರಬರಲು ಮುಂದಾಗಿದ್ದು,ಮುಂಬರುವ ಸಮಯದಲ್ಲಿ ಇನ್​ಸ್ಟಾಗ್ರಾಮ್ ವಾಟ್ಸಾಪ್​ನಲ್ಲಿ ರೀಲ್ಸ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ಹೊಸ ವೈಶಿಷ್ಟ್ಯವನ್ನು ಇನ್ನೂ ದೃಢೀಕರಿಸಲಾಗಿಲ್ಲ, ಆದರೆ ಸಾಧ್ಯತೆಗಳನ್ನು ವ್ಯಕ್ತಪಡಿಸಲಾಗುತ್ತಿದೆ.

ಇದುವರೆಗೆ ವಾಟ್ಸಪ್ ನಲ್ಲಿ ಖಾತೆಯನ್ನು ಅಳಿಸುವ ಆಯ್ಕೆ ಮಾತ್ರ ಇತ್ತು, ಆದರೆ ಈಗ ಲಾಗ್‌ಔಟ್ ಆಯ್ಕೆಯೂ ಬರಬಹುದು ಎನ್ನಲಾಗುತ್ತಿದೆ. ಸ್ವೀಕರಿಸಿದ ವರದಿಗಳ ಪ್ರಕಾರ, ಖಾತೆಯನ್ನು ಅಳಿಸುವ ಆಯ್ಕೆಯನ್ನು ಲಾಗ್‌ಔಟ್​ಗೆ ಬದಲಾಯಿಸಬಹುದು. ಅಂದರೆ ಬಳಕೆದಾರರು ತನಗೆ ಬೇಕಾದಾಗ ಲಾಗಿನ್ ಆಗಬಹುದು ಮತ್ತು ಯಾವಾಗ ಬೇಕಾದರೂ ಲಾಗ್ ಔಟ್ ಆಗಬಹುದು. ಇದರೊಂದಿಗೆ ಚಾಟ್, ಮೀಡಿಯಾ ಫೈಲ್ಗಳನ್ನು ಅಳಿಸುವ ಅಗತ್ಯವಿಲ್ಲ ಮತ್ತು ಇಚ್ಛೆಯಂತೆ ವಾಟ್ಸಪ್ ನಲ್ಲಿ ವಿರಾಮಗಳನ್ನು ತೆಗೆದುಕೊಳ್ಳಬಹುದು.

Leave A Reply

Your email address will not be published.