ತನ್ನನ್ನು ವಿವಾಹವಾಗದೇ ಇದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುವ ಬೆದರಿಕೆ : ಯುವತಿಯ ಬಂಧನ

Share the Article

ತನ್ನನ್ನು ವಿವಾಹವಾಗದೇ ಇದ್ದರೆ ಅಥವಾ ಹಣ ನೀಡದೇ ಇದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ವ್ಯಕ್ತಿಯೊಬ್ಬನಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಗುರ್ಗಾಂವ್ ಪೊಲೀಸರು 22 ವರ್ಷದ ಯುವತಿಯನ್ನು ಬಂಧಿಸಿದ್ದಾರೆ.

ಕಳೆದ 15 ತಿಂಗಳುಗಳಲ್ಲಿ ಈ ಯುವತಿ ಎಂಟು ಪ್ರಕರಣಗಳನ್ನು ಈಕೆ ಎಂಟು ಪುರುಷರ ವಿರುದ್ಧ ಗುರ್ಗಾಂವ್‌ನ ಏಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದಳೆಂದು ಪೊಲೀಸರು ತಿಳಿಸಿದ್ದಾರೆ. ಇವುಗಳ ಪೈಕಿ ಮೂರು ಪ್ರಕರಣಗಳ ತನಿಖೆ ಅಂತ್ಯಗೊಂಡಿದೆ.

ಯುವತಿಯ ತಾಯಿ ಮತ್ತು ಚಿಕ್ಕಪ್ಪ ಕೂಡ ಈ ಸುಲಿಗೆ ಜಾಲದ ಭಾಗವಾಗಿದ್ದಾರೆ ಹಾಗೂ ತಲೆಮರೆಸಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಲ್ ನಿವಾಸಿಯೊಬ್ಬರು ದೂರು ದಾಖಲಿಸಿ ಯುವತಿ ತನ್ನನ್ನು ಬ್ಲಾಕ್ ಮೇಲ್ ಗೊಳಿಸುತ್ತಿದ್ದಾಳೆ ಮತ್ತು ಹಣ ನೀಡಬೇಕು ಇಲ್ಲವೇ ಮದುವೆಯಾಗಬೇಕೆಂದು ಬಲವಂತಪಡಿಸುತ್ತಿದ್ದಾಳೆಂದು ಆರೋಪಿಸಿದ್ದರು. ಆಕೆಯನ್ನು ವಿವಾಹವಾಗಲು ನಿರಾಕರಿಸಿದ ನಂತರ ಆಕೆ ತನ್ನ ವಿರುದ್ಧ ಅಕ್ಟೋಬರ್ ನಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಎಂದು ಆತ ದೂರಿದ್ದರು.

ಆಕೆ ಎಂಟು ಮಂದಿಯ ವಿರುದ್ಧ ಇದೇ ರೀತಿ ಪ್ರಕರಣ ದಾಖಲಿಸಿದ್ದಾಳೆಂದು ಪೊಲೀಸರು ಆಕೆಯ ವಿಚಾರಣೆ ವೇಳೆ ಕಂಡುಕೊಂಡಿದ್ದಾರೆ. ಮದುವೆಯ ಭರವಸೆ ನೀಡಿ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಪ್ರತಿ ಪ್ರಕರಣದಲ್ಲಿ ಆಕೆ ಆರೋಪಿಸಿದ್ದಳು.

ಸದ್ಯ ಎಸ್‌ಐಟಿ ಮೂಲಕ ವಿಚಾರಣೆ ನಡೆಯುತ್ತಿದೆ. ಎಂಟು ಪ್ರಕರಣಗಳ ಪೈಕಿ ನಾಲ್ಕು ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ಹಾಗೂ ಇನ್ನೊಂದು ತನಿಖೆಯ ಹಂತದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿಯ ತನಕ ಇಬ್ಬರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Leave A Reply

Your email address will not be published.