ತಾಯಿ ಗರ್ಭದಲ್ಲೇ ಕಲ್ಲಾದ 7 ತಿಂಗಳ ಮಗು!
ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ವೃದ್ಧೆಯ ಗರ್ಭದಲ್ಲಿ
ಸುಮಾರು 2 ಕೆಜಿ ತೂಕದ ಕಲ್ಲಿನ ಮಗು ಪತ್ತೆಯಾಗಿದೆ. ಆ ದೃಶ್ಯ ನೋಡಿ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಯಾಕಂದ್ರೆ ಆ ಮಗು ತಾಯಿಯ ಗರ್ಭದಲ್ಲೇ ಕಲ್ಲಾಗಿ, 35 ವರ್ಷದಿಂದ ಹೊಟ್ಟೆಯಲ್ಲೇ ಇದೆ. ಈ ಬಗ್ಗೆ ಆ ಮಹಿಳೆಗೂ ಗೊತ್ತಿರಲಿಲ್ಲ.
ವಿಚಿತ್ರ ಅನಿಸಿದರೂ ಇದು ಅಕ್ಟೋರಿಯಾದಲ್ಲಿ ಬೆಳಕಿಗೆ ಬಂದ ನೈಜ ಘಟನೆ, ವೈಜ್ಞಾನಿಕ ಲೋಕದಲ್ಲಿ ಸಾಕಷ್ಟು ಚಿತ್ರ ವಿಚಿತ್ರ ಘಟನೆಗಳು ಸಂಭವಿಸಿ ಅಚ್ಚರಿ ಮೂಡಿಸುತ್ತಲೇ ಇರುತ್ತದೆ. ಅಕ್ಟೋರಿಯಾದಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 73 ವರ್ಷದ ವೃದ್ಧೆಯೊಬ್ಬರು ಆಸ್ಪತ್ರೆಗೆ ಹೋಗಿದ್ದರು. ಸುಮಾರು ವರ್ಷಗಳಿಂದ ಅಂದ್ರೆ 30-35 ವರ್ಷದಿಂದ ಪದೇ ಪದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಲೇ ಇದೆ. ಈಗ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ ಎಂದು ವೈದ್ಯರ ಬಳಿ ಹೇಳಿಕೊಂಡರು.
ಆಗ ವೈದ್ಯರು ಎಕ್ಸ್ ರೇ ಮಾಡಿದ್ದು, ವೃದ್ಧೆಯ ಹೊಟ್ಟೆಯಲ್ಲಿ ಬೃಹತ್ ಗಾತ್ರದ ಕಲ್ಲು ಇರುವುದು ಗೊತ್ತಾಗಿದೆ. ತಪಾಸಣೆ ಮುಂದುವರಿದಂತೆ ಎಂಬುದು ಗೊತ್ತಾಗಿದೆ.
ಆದು ಕಲ್ಲಿನ ಮಗು 35 ವರ್ಷದ ಹಿಂದೆ ಮಹಿಳೆ ಗರ್ಭಿಣಿಯಾಗಿದ್ದರೂ ಅರಿವಿಗೆ ಬಾರದೆ, ಮಗು ಬೆಳವಣಿಗೆ ಆಗದೆ ಗರ್ಭಾವಸ್ಥೆಯಲ್ಲಿ ವಿಫಲವಾಗಿದೆ. ಸಾಕಷ್ಟು ರಕ್ತ ಪೂರೈಕೆಯೂ ಆಗದೆ, ಭ್ರೂಣವನ್ನು ಹೊರಹಾಕಲು ದೇಹಕ್ಕೆ ಯಾವುದೇ ಮಾರ್ಗವಿಲ್ಲದೆ 6-7 ತಿಂಗಳ ಮಗು ನಿಧಾನವಾಗಿ ಕಲ್ಲಾಗಿ ಪರಿವರ್ತನೆಯಾಗಿದೆ.