ಹವಾಯಿಯಲ್ಲಿ ಭೂಮಿ ಖರೀದಿಸಿದ ಜುಕರ್ಬರ್ಗ್
ಫೇಸ್ಬುಕ್ನ ಪೋಷಕ ಸಂಸ್ಥೆ ಮೆಟಾ ಸಿಇಒ ಜುಕರ್ ಬರ್ಗ್ ಅವರು ,ಹವಾಯ್ ದ್ವೀಪದಲ್ಲಿ ಇನ್ನೂ 110 ಎಕರೆ ಭೂಮಿಯನ್ನು ಖರೀದಿಸಿದ್ದಾರೆ ಎಂದು ಹೊನೊಲುಲಿ ಸ್ಟಾರ್ ಅಡ್ವರ್ಟೈಸರ್ನ ಅಂಡೂ ಗೋಮ್ಸ್ ವರದಿ ಮಾಡಿದ್ದಾರೆ.
ಇತ್ತೀಚಿನ ಸೇರ್ಪಡೆಯೊಂದಿಗೆ, ಜುಕರ್ಬರ್ಗ್ ಕೊವೊಲ್ ರಾಂಜ್ ಎಂದು ಹೆಸರನ್ನಿಟ್ಟಿರುವ ಎಸ್ಟೇಟ್ ಕೌವಾಯ್ನ ಉತ್ತರ ತೀರದಲ್ಲಿ ಸುಮಾರು 1500 ಎಕರೆಗಳಷ್ಟು ಹೆಚ್ಚುವರಿಯಾಗಿದೆ.
ಜುಕರ್ಬರ್ಗ್ ಅವರು ಮಾಡಿರುವ ಇತ್ತೀಚಿನ ಖರೀದಿಯು ಎರಡನೆಯದ್ದಾಗಿದೆ. ಮಾರ್ಚ್ನಲ್ಲಿ ಸಾರ್ವಜನಿಕ ಬೀಚ್ ಹಾಗೂ ಜಾನುವಾರು ಸಾಕಣೆಯನ್ನೊಳಗೊಂಡಿರುವ 600 ಎಕರೆ ಭೂಮಿಯನ್ನು 53 ಮಿಲಿಯನ್ ಡಾಲರ್ ಖರೀದಿಸಿದರು. ಇದನ್ನು ಅವರು 2014ರಲ್ಲಿ ಖರೀದಿಸಿದ್ದ 750 ಎಕರೆಗಳ ಸತ್ತಿಗೆ ಸೇರ್ಪಡೆಗೊಳಿಸಿದ್ದಾರೆ.
ಮಾರ್ಕ್ ಹಾಗೂ ಪ್ರಸಿಕ ಪ್ರಚ ದಂಪತಿಗಳು ಕೊವೊಲ್ರಾಂಚ್ನಲ್ಲಿ ತಮ್ಮ ಮನೆ ಸು ನಿರ್ಮಾಣವನ್ನು ಮುಂದುವರಿಸುತ್ತಿದ್ದಾರೆ ಎಂಬುದಾಗಿ ಅವರ ವಕ್ತಾರ ಬೆನ್ ಲಾಬೋಲ್ಟ್ ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಾರ್ಕ್ ದಂಪತಿಗಳು ರಾಂಚ್ ನಿರ್ವಹಣೆಗೆ ಹಲವಾರು ಸಮುದಾಯ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದು ಸಂರಕ್ಷಣೆಯನ್ನು ಉತ್ತೇಜಿಸಲು, ಸುಸ್ಥಿರ ಕೃಷಿಯನ್ನು ಉತ್ಪಾದಿಸಲು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ಮತ್ತು ಹೆಚ್ಚುವರಿ ಆಸ್ತಿಯನ್ನು ಸೇರಿಸಲು ತಮ್ಮ ಪ್ರಯತ್ನಗಳನ್ನು ವಿಸ್ತರಿಸಲು ಎದುರು ನೋಡುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.