ಭಾರತೀಯ ವಾಯುಸೇನೆಯ ಮತ್ತೊಂದು ಫೈಟರ್ ಜೆಟ್ ಪತನ !! | ಪೈಲೆಟ್ ವಿಂಗ್ ಕಮಾಂಡರ್ ಹುತಾತ್ಮ

0 10

ಭಾರತೀಯ ವಾಯುಸೇನೆಯ ಮತ್ತೊಂದು ಫೈಟರ್ ಜೆಟ್ ನಿನ್ನೆ ರಾತ್ರಿ ಪತನಗೊಂಡಿದೆ. ಭಾರತೀಯ ವಾಯುಸೇನೆಯ ಮಿಗ್-21 ಫೈಟರ್ ಜೆಟ್ ಪತನಗೊಂಡು ಪೈಲಟ್ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಸರ್ ಬಳಿ ನಿನ್ನೆ ರಾತ್ರಿ ನಡೆದಿದೆ.

ಈ ಮಾಹಿತಿಯನ್ನು ವಾಯುಸೇನೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಖಚಿತಪಡಿಸಿದೆ. ಶುಕ್ರವಾರ ರಾತ್ರಿ 8.30 ರ ಸುಮಾರಿಗೆ ಮಿಗ್-21 ಫೈಟರ್ ಜೆಟ್ ತರಬೇತಿ ವಿಹಾರ ಸಮಯದಲ್ಲಿ ಪಶ್ಚಿಮ ವಲಯದಲ್ಲಿ ಪತನಗೊಂಡಿದೆ. ಮತ್ತಷ್ಟು ಮಾಹಿತಿ ಬರಬೇಕಿದ್ದು, ತನಿಖೆ ಆದೇಶಿಸಲಾಗಿ ಎಂದು ತಿಳಿಸಿದೆ.

ರಾಜಸ್ಥಾನದ ಸ್ಯಾಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಡೆಸೆರ್ಟ್‌ ನ್ಯಾಷನಲ್ ಪಾರ್ಕ್ ಏರಿಯಾದಲ್ಲಿ ಜೆಟ್ ಪತನಗೊಂಡಿದೆ ಎಂದು ಜೈಸರ್ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೆಲವು ಗಂಟೆಗಳ ಬಳಿಕ ಮತ್ತೊಂದು ಟ್ವಿಟ್ ಮಾಡಿರುವ ವಾಯುಸೇನೆ, ಜೆಟ್ ಪತನದಲ್ಲಿ ಪೈಲಟ್ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಹುತಾತ್ಮರಾಗಿದ್ದಾರೆ ಎಂದು ಹೇಳಲು ಅತೀವ ದುಃಖವಾಗುತ್ತಿದೆ. ಈ ಸಂದರ್ಭದಲ್ಲಿ ದಿಟ್ಟ ಯೋಧನ ಕುಟುಂಬದ ಜೊತೆ ನಾವೆಲ್ಲರು ನಿಲ್ಲುತ್ತೇವೆ ಎಂದಿದೆ.

Leave A Reply