ಗ್ರಾಹಕರ ಕಾಲ್ ರೆಕಾರ್ಡ್ ನಿಯಮಗಳಲ್ಲಿ ಬದಲಾವಣೆ ತಂದ ಕೇಂದ್ರ ಸರ್ಕಾರ !! | ಹೊಸ ನಿಯಮದಲ್ಲೇನಿದೆ?? ಇಲ್ಲಿದೆ ಮಾಹಿತಿ

ಭದ್ರತೆಯನ್ನು ಉಲ್ಲೇಖಿಸಿ ಎರಡು ವರ್ಷಗಳ ಕಾಲ ಕರೆ ದಾಖಲೆಗಳನ್ನು ಸುರಕ್ಷಿತವಾಗಿರಿಸುವಂತೆ ಕೇಂದ್ರ ಸರ್ಕಾರ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದ್ದು, ಇದೀಗ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ.

ಈ ನಿಯಮದ ಅಡಿಯಲ್ಲಿ, ಇದೀಗ ದೂರಸಂಪರ್ಕ ಇಲಾಖೆಯು ತನ್ನ ಏಕೀಕೃತ ಪರವಾನಗಿ ಒಪ್ಪಂದದಲ್ಲಿ ಬದಲಾವಣೆಗಳನ್ನು ಮಾಡಿದೆ ಮತ್ತು ಎಲ್ಲಾ ಬಳಕೆದಾರರ ಕರೆ ದಾಖಲೆಗಳು ಮತ್ತು IP ವಿಳಾಸಗಳನ್ನು ಇದೀಗ ಕನಿಷ್ಠ ಎರಡು ವರ್ಷಗಳವರೆಗೆ ಸಂರಕ್ಷಿಸಬೇಕು ಎಂದು ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಆದೇಶಿಸಿದೆ.

ಇದುವರೆಗೆ ಕರೆ ದಾಖಲೆಗಳು ಮತ್ತು ಐಪಿ ವಿಳಾಸವನ್ನು ಒಂದು ವರ್ಷದವರೆಗೆ ಮಾತ್ರ ಸಂಗ್ರಹಿಸಿ ಇಡುವುದು ಕಡ್ಡಾಯವಾಗಿತ್ತು, ಅದು ಇದೀಗ ಎರಡು ವರ್ಷಕ್ಕೆ ಬದಲಾಗಿದೆ. ಭದ್ರತಾ ಏಜೆನ್ಸಿಗಳ ಬೇಡಿಕೆ ಮೇರೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಭದ್ರತಾ ಕಾರಣಗಳಿಂದಾಗಿ ಎರಡು ವರ್ಷಗಳ ಕಾಲ ಕಾಲ್ ರೆಕಾರ್ಡ್‌ಗಳು ಮತ್ತು ಐಪಿ ಅಡ್ರೆಸ್‌ಗಳನ್ನು ಸುರಕ್ಷಿತವಾಗಿಡಬೇಕು ಎಂದು ಭದ್ರತಾ ಏಜೆನ್ಸಿಗಳಿಂದ ಬಹಳ ಸಮಯದಿಂದ ಬೇಡಿಕೆ ಇತ್ತು.

ಡಿಸೆಂಬರ್ 21 ರಂದು ಈ ಕುರಿತು ದೂರಸಂಪರ್ಕ ಇಲಾಖೆಯಿಂದ ಅಧಿಸೂಚನೆಯನ್ನು ಹೊರಡಿಸಲಾಗಿದೆ, ಇದರಲ್ಲಿ ಎಲ್ಲಾ ರೀತಿಯ ಸಂವಹನ ಕರೆ ದಾಖಲೆಗಳು, ವಿನಿಮಯ ವಿವರಗಳ ದಾಖಲೆಗಳು, ಐಪಿ ವಿಳಾಸದ ದಾಖಲೆಗಳನ್ನು ಈಗ ಕನಿಷ್ಠ 2 ರವರೆಗೆ ರಕ್ಷಿಸಬೇಕು ಎಂದು ಹೇಳಲಾಗಿದೆ. ಇಂಟರ್ನೆಟ್ ಟೆಲಿಫೋನಿನ ಎಲ್ಲಾ ದಾಖಲೆಗಳನ್ನು ಸಹ ನಿರ್ವಹಿಸುವ ಅಗತ್ಯವಿದೆ ಎಂದು ಈ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಬಹುತೇಕ ತನಿಖೆಗಳು ಪೂರ್ಣಗೊಳ್ಳಲು ಒಂದು ವರ್ಷಕ್ಕಿಂತ ಹೆಚ್ಚು ಸಮಯಾವಕಾಶ ತೆಗೆದುಕೊಳ್ಳುತ್ತವೆ ಮತ್ತು ಇಂತಹ ಪರಿಸ್ಥಿತಿಯಲ್ಲಿ, ಕರೆ ರೆಕಾರ್ಡ್ ಸುರಕ್ಷಿತವಾಗಿಲ್ಲದಿದ್ದರೆ ಸಮಸ್ಯೆ ಎದುರಾಗುತ್ತದೆ ಎಂದು ಭದ್ರತಾ ಏಜೆನ್ಸಿಗಳು ತಮ್ಮ ವಾದ ಮಂಡಿಸಿದ್ದವು. ಇದಕ್ಕಾಗಿ, ಇದೀಗ ಕರೆ ರೆಕಾರ್ಡ್ ಮತ್ತು ಐಪಿ ವಿಳಾಸವನ್ನು 2 ವರ್ಷಗಳವರೆಗೆ ಸುರಕ್ಷಿತವಾಗಿರಿಸಲಾಗುವುದು ಎನ್ನಲಾಗಿದೆ.

Leave A Reply

Your email address will not be published.