ಖಿನ್ನತೆ ಎಚ್ಚರ.. ಖಿನ್ನತೆ ಬರೀ ಮನಸ್ಸನ್ನು ಮಾತ್ರ ಕಾಡಲ್ಲ..ನಿಮ್ಮ ದೇಹವನ್ನೇ ಹಾಳು ಮಾಡುತ್ತೆ!
ಖಿನ್ನತೆ ಎಚ್ಚರ.. ಖಿನ್ನತೆ ಬರೀ ಮನಸ್ಸನ್ನು ಮಾತ್ರ ಕಾಡಲ್ಲ..ನಿಮ್ಮ ದೇಹವನ್ನೇ ಹಾಳು ಮಾಡುತ್ತೆ!
ನಮ್ಮ ಮನಸ್ಸಿನ ಆರೋಗ್ಯ ಸದಾ ನಮ್ಮ ದೇಹದ ಮೇಲಿನ ಆರೋಗ್ಯಕ್ಕೂ ಪರಿಣಾಮ ಬೀರುತ್ತಲೇ ಇರುತ್ತದೆ… ನಮ್ಮ ಮೆದುಳು ಸದಾ ಚಟುವಟಿಕೆಯಿಂದ ಇರುವುದರಿಂದ ದೇಹದಲ್ಲಿನ ಹಲವು ಭಾಗಗಳು ಸಹ ಆರೋಗ್ಯದಾಯಕವಾಗಿರುವವು.. ಆದ್ರೆ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯ ದೇಹದಲ್ಲಿ ಹಲವು ಬದಲಾವಣೆಗಳು ಹಾಗೂ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿ ಮಾನಸಿಕವಾಗಿ ಆಘಾತಗೊಂಡಿರುತ್ತಾನೆ.. ಜೀವನದಲ್ಲಿ ಯಾವುದರ ಮೇಲೂ ಉತ್ಸಾಹ ಇರುವುದಿಲ್ಲ.ಸದಾ ಏಕಾಂಗಿಯಾಗಿ ಕಾಲ ಕಳೆಯಲು ಇಷ್ಟಪಡುತ್ತಾರೆ. ಮನಸ್ಸಿಗೆ ಬಂದಿದ್ದನ್ನು ಮಾಡುತ್ತಾ ತನ್ನ ಸುತ್ತಲಿರುವವರಿಂದ ಅಂತರ ಕಾಯ್ದುಕೊಳ್ಳಲು ಬಯಸುವವರು. ಹೀಗಾಗಿ ಒಬ್ಬ ಮನುಷ್ಯನಿಗೆ ಒಮ್ಮೆ ಖಿನ್ನತೆಗೆ ಎಂಬುದು ಕಾಡಲು ಶುರು ಮಾಡಿದರೆ ಆತನ ಮಾನಸಿಕ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟು ಹೋಗಿರುತ್ತದೆ. ಇದರಿಂದ ಹೊರಬರಲು ಖಿನ್ನತೆಗೆ ಒಳಗಾದ ವ್ಯಕ್ತಿ ನಾನಾ ರೀತಿಯ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.. ಮನಸ್ಸಿನ ಒತ್ತಡ ಖಿನ್ನತೆಯಿಂದ ಬಳಲುತ್ತಿರುವವರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.. ಇದರಿಂದಾಗಿ ಮನಸ್ಸು ಹಿಡಿತಕ್ಕೆ ಸಿಲುಕುವುದಿಲ್ಲ.
. ಆದರೆ ಖಿನ್ನತೆಯಿಂದ ಬಳಲುತ್ತಿರುವವರಿಗೆ ಕೇವಲ ಮಾನಸಿಕ ಆರೋಗ್ಯದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ದೈಹಿಕವಾಗಿಯೂ ಒತ್ತಡಕ್ಕೆ ಒಳಗಾದ ವ್ಯಕ್ತಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಖಿನ್ನತೆಯಿಂದ ದೇಹದಲ್ಲಿ ಆಗಲಿವೆ ಹಲವು ಬದಲಾವಣೆ.ನಮ್ಮ ಮನಸ್ಸಿನ ಆರೋಗ್ಯ ಸದಾ ನಮ್ಮ ದೇಹದ ಮೇಲಿನ ಆರೋಗ್ಯಕ್ಕೂ ಪರಿಣಾಮ ಬೀರುತ್ತಲೇ ಇರುತ್ತದೆ… ನಮ್ಮ ಮೆದುಳು ಸದಾ ಚಟುವಟಿಕೆಯಿಂದ ಇರುವುದರಿಂದ ದೇಹದಲ್ಲಿನ ಹಲವು ಭಾಗಗಳು ಸಹ ಆರೋಗ್ಯದಾಯಕವಾಗಿರುವವು.. ಆದ್ರೆ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯ ದೇಹದಲ್ಲಿ ಹಲವು ಬದಲಾವಣೆಗಳು ಹಾಗೂ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ..
ಹಾಗಿದ್ರೆ ಖಿನ್ನತೆ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಮಾಹಿತಿ ಇಲ್ಲಿದೆ..
1)ಖಿನ್ನತೆಯು ದೇಹದಲ್ಲಿ ಉರಿಯೂತವನ್ನು ಉಂಟುಮಾಡಬಹುದು
ದೀರ್ಘಕಾಲದ ಒತ್ತಡವು ಹೈಪೋಥಾಲಮಸ್, ಪಿಟ್ಯುಟರಿ ಗ್ರಂಥಿ ಮತ್ತು ಮೂತ್ರಜನಕಾಂಗದ ಗ್ರಂಥಿಗಳ ಪರಸ್ಪರ ಕ್ರಿಯೆಯಲ್ಲಿ ಬದಲಾವಣೆಗಳನ್ನು ಆರಂಭ ಮಾಡುತ್ತದೆ. ಹೀಗಾಗಿ ಮನುಷ್ಯನ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.. ಅಷ್ಟೇ ಅಲ್ಲದೆ ದೀರ್ಘಕಾಲದ ಒತ್ತಡ ಮತ್ತು ಖಿನ್ನತೆ ಎರಡೂ ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.
2) ತೂಕದಲ್ಲಿ ಬದಲಾವಣೆ ::
ಖಿನ್ನತೆಯ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಹಸಿವಿನ ಬದಲಾವಣೆಗಳು. ಖಿನ್ನತೆಯಿಂದ ಬಳಲುತ್ತಿರುವ ಜನರು ತುಂಬಾ ಕಡಿಮೆ ತಿನ್ನುತ್ತಾರೆ ಅಥವಾ ಹೆಚ್ಚು ತಿನ್ನುತ್ತಾರೆ. ಈ ಕಾರಣದಿಂದಾಗಿ, ಅವರು ತೂಕದಲ್ಲಿ ಹಠಾತ್ ಏರಿಳಿತವನ್ನು ಅನುಭವಿಸಬಹುದು. ಇದು ಹೃದಯದ ಮೇಲೆ ಅಗಾಧವಾದ ಒತ್ತಡವನ್ನು ಉಂಟುಮಾಡುತ್ತದೆ, ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇತರ ಆರೋಗ್ಯ ಕಾಯಿಲೆಗಳಿಗೆ ಅವಕಾಶ ನೀಡುತ್ತದೆ.
3) ಹೃದಯದ ಅನಾರೋಗ್ಯಕ್ಕೆ ಖಿನ್ನತೆ ಕಾರಣ
ಮನುಷ್ಯನ ಆರೋಗ್ಯ ಹೃದಯದಲ್ಲಿದೆ ಎನ್ನುವ ಮಾತು ಸತ್ಯ.. ಮನುಷ್ಯ ಒತ್ತಡದಲ್ಲಿದ್ದಾಗ ಅದರ ನೇರ ಪರಿಣಾಮ ಹೃದಯದ ಮೇಲೆ ಬೀರುತ್ತದೆ. ನೀವು ನಿರಂತರವಾಗಿ ಒತ್ತಡದಲ್ಲಿರುವಾಗ, ನಿಮ್ಮ ದೇಹವು ಕಾರ್ಟಿಸೋಲ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಋಣಾತ್ಮಕವಾಗಿ ಹೆಚ್ಚಳ ಮಾಡುತ್ತದೆ… ಇದರಿಂದ ಹೃದಯರಕ್ತನಾಳದ ಕಾಯಿಲೆಗಳು ಉಂಟಾಗಬಹುದು.
4) ಕಡಿಮೆ ಲೈಂಗಿಕ ಆಸಕ್ತಿಖಿನ್ನತೆಯಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಲೈಂಗಿಕ ಆಸಕ್ತಿಯನ್ನು ಕಳೆದುಕೊಂಡಿರುತ್ತಾರೆ.. ಸಂಗಾತಿ ಇದ್ದರೂ ಸಹ ಹೀನತೆಯಿಂದ ಬಳಲುತ್ತಿರುವವರು ನಿರಾಸಕ್ತಿ ತೋರಿಸ್ತಾರೆ.
5)ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ.ಖಿನ್ನತೆಯು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ..ನಿಮ್ಮ ಹೊಟ್ಟೆ ಮತ್ತು ಕರುಳಿನ ಕಾರ್ಯನಿರ್ವಹಣೆಯಲ್ಲಿ ನಿಮ್ಮ ಮೆದುಳು ದೊಡ್ಡ ಪಾತ್ರವನ್ನು ವಹಿಸುತ್ತದೆ. ಬಹುಶಃ ಈ ಕಾರಣದಿಂದಾಗಿ ಅನೇಕರು ಮಲ ವಿಸರ್ಜನೆ ಸಂದರ್ಭದಲ್ಲಿ ಸಮಸ್ಯೆ ಎದುರಿಸುತ್ತಾರೆ.ಇನ್ನು ಖಿನ್ನತೆಯ ದೇಹದ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ಎಚ್ಚೆತ್ತುಕೊಂಡು ಆದಷ್ಟು ಬೇಗ ಪರಿಹಾರಗಳನ್ನು ಕಂಡುಕೊಂಡು ಹಲವಾರು ಸಮಸ್ಯೆಗಳನ್ನು ಎದುರಿಸಬಹುದು. ಹೀಗಾಗಿ ದಿನನಿತ್ಯದ ನಮ್ಮ ಕೆಲಸಗಳು ಮತ್ತು ಚಟುವಟಿಕೆಗಳನ್ನು ಚೆನ್ನಾಗಿ ಮಾಡಿ ಮುಗಿಸಬೇಕು. ವಾಕಿಂಗ್, ಜಿಮ್ಗೆ ಹೋಗಿ ದೈಹಿಕವಾಗಿ ಸದೃಢವಾಗಿರಬೇಕು. ವ್ಯಾಯಾಮವು ದೇಹ ಮತ್ತು ಮನಸ್ಸಿನ ವಿಕಸನಕ್ಕೆ ನೆರವಾಗುತ್ತದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಮತ್ತು ಭಯಗಳನ್ನು ಧೈರ್ಯದಿಂದ ಎದುರಿಸಬೇಕು. ಮನೆಯವರು, ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಸುಮಧುರ ಬಾಂಧವ್ಯ ಹೊಂದಿರಬೇಕು.