ಗೂಗಲ್ ಅಪ್ಲಿಕೇಶನ್ ಗಳಲ್ಲಿ ಮತ್ತೆ ಕಾಣಿಸಿಕೊಂಡ ‘ಜೋಕರ್’ ಎಂಬ ವೈರಸ್ | ನೀವೂ ಕೂಡ ಈ 7 ಆಪ್ ಇನ್ ಸ್ಟಾಲ್ ಮಾಡಿದ್ದರೆ ತಕ್ಷಣ ಡಿಲೀಟ್ ಮಾಡಿ

ಗೂಗಲ್ ಪ್ಲೇ ಸ್ಟೋರ್‌ನ ಹೊಸ ಅಪ್ಲಿಕೇಶನ್‌ಗಳಲ್ಲಿ ಮತ್ತೆ ಜೋಕರ್ ಎಂಬ ವೈರಸ್ ಕಾಣಿಸಿಕೊಂಡಿದ್ದು,ಮೊಬೈಲ್ ಸೆಕ್ಯುರಿಟಿ ಸೊಲ್ಯೂಷನ್ಸ್ ಸಂಸ್ಥೆಯಾದ ಪ್ರಡಿಯೊ ಸ್ಮಾರ್ಟ್​ಫೋನ್ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದ್ದು ಈ ಏಳು ಆಪ್​ಗಳನ್ನು ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡಲು ಸೂಚಿಸಿದೆ.

ಜೋಕರ್ ಮಾಲ್ವೇರ್ ಈಗಾಗಲೇ 15 ಜನಪ್ರಿಯ ಅಪ್ಲಿಕೇಶನ್‌ಗಳ ಒಳಹೊಕ್ಕಿದೆ ಎಂದು ತಿಳಿಸಿದೆ.ಗೂಗಲ್ ಪ್ಲೇ ಸ್ಟೋರ್‌ನ ಹೊಸ ಅಪ್ಲಿಕೇಶನ್‌ಗಳಲ್ಲಿ ಮತ್ತೆ ಜೋಕರ್ ಎಂಬ ವೈರಸ್ ಕಾಣಿಸಿಕೊಂಡಿದೆ.ಈ ಮಾಲ್‌ವೇರ್ ದಾಳಿಗಳಲ್ಲಿ ಅತ್ಯಂತ ಸಾಮಾನ್ಯವಾದವು ನಕಲಿ ಚಂದಾದಾರಿಕೆಗಳು ಮತ್ತು ಅಪ್ಲಿಕೇಶನ್‌ನಲ್ಲಿನ ಖರೀದಿಗಳ ಮೂಲಕ ಅಕ್ರಮ ಹಣವನ್ನು ಗಳಿಸುವ ಗುರಿಯನ್ನು ಹೊಂದಿವೆ.

ಕಳೆದ ಎರಡು ತಿಂಗಳಲ್ಲಿ ಜೋಕರ್‌ ಹೆಸರಿನ ಅಪಾಯಕಾರಿ ಮಾಲ್‌ವೇರ್‌ ಎರಡನೇ ಬಾರಿ ಗೂಗಲ್‌ ಪ್ಲೇ ಸ್ಟೋರ್​ನಲ್ಲಿ ಕಂಡುಬಂದಿದ್ದು,ಆಂಡ್ರಾಯ್ಡ್ ಸ್ಮಾರ್ಟ್‌ಫೋನ್​ಗಳನ್ನು ನಿರಂತರವಾಗಿ ಗುರಿಯಾಗಿಸುವ ಮಾಲ್‌ವೇರ್‌ಗಳಲ್ಲಿ ಜೋಕರ್ ಕೂಡಾ ಒಂದು.ಕ್ವಿಕ್ ಹೀಲ್ ಸೆಕ್ಯುರಿಟಿ ಲ್ಯಾಬ್‌ಗಳ ಸಂಶೋಧಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಮಾಲ್‌ವೇರ್ ಅಪ್ಲಿಕೇಶನ್‌ಗಳನ್ನು ಪತ್ತೆ ಮಾಡಿದ್ದಾರೆ. ಇತ್ತೀಚೆಗಷ್ಟೆ ಆಪ್‌ಗಳಲ್ಲಿರುವ ಟ್ರೋಜನ್ ಜೋಕರ್ ಮಾಲ್‌ವೇರ್ ಅನ್ನು ಗಮನದಲ್ಲಿಟ್ಟುಕೊಂಡು, ಗೂಗಲ್ ಈ 14 ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ‌ ತೆಗೆದುಹಾಕಿತ್ತು.

ಹೆಚ್ಚಿನ ವೈರಸ್ ಆಪ್​ಗಳು ರಹಸ್ಯವಾಗಿ ಜಾಹೀರಾತು ವೆಬ್‌ಸೈಟ್‌ಗಳೊಂದಿಗೆ ಸಂವಹನದ ಆರಂಭಕ್ಕೆ ಪ್ರಚೋದನೆ ನೀಡುತ್ತದೆ. ಬಾಧೆಗೀಡಾದ ಫೋನ್‌ನ ಎಸ್​ಎಮ್​ಎಸ್​ ಸಂದೇಶಗಳನ್ನು ಕದಿಯುತ್ತದೆ, ಸಂಪರ್ಕ ಸಂಖ್ಯೆಯ ಪಟ್ಟಿ ಮತ್ತು ಸಾಧನದ ಮಾಹಿತಿಯನ್ನೂ ಪಡೆದುಕೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇತ್ತೀಚೆಗೆ ನಿರ್ಬಂಧಿಸಲಾದ ಕೆಲವು ಅಪ್ಲಿಕೇಶನ್‌ಗಳಲ್ಲಿ ಎಮೋಜಿಒನ್ ಕೀಬೋರ್ಡ್ ಮತ್ತು ನೌ ಕ್ಯೂಆರ್‌ಕೋಡ್ ಸ್ಕ್ಯಾನ್ ಗಳನ್ನು ಕ್ರಮವಾಗಿ 50,000 ಮತ್ತು 10,000 ಕ್ಕಿಂತ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ. ಈ ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್‌ನಲ್ಲಿ ಇನ್​ಸ್ಟಾಲ್ ಆಗಿದ್ದರೆ ತಕ್ಷಣವೇ ಅವುಗಳನ್ನು ಅನ್‌ಇನ್​ಸ್ಟಾಲ್ ಮಾಡಲು ಸೂಚನೆ ನೀಡಿದ್ದಾರೆ.ಇನ್ನುಮುಂದೆ ಬಳಕೆದಾರರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಅನುಮಾನಾಸ್ಪದವಾಗಿ ತೋರುವ ಯಾವುದೇ ಲಿಂಕ್‌ಗಳು ಅಥವಾ ಅನುಚಿತ ಖರೀದಿಗಳಿಗೆ ಬಲಿಯಾಗಬಾರದು ಎಂದು ತಜ್ಞರು ತಿಳಿಸಿದ್ದಾರೆ.

ನೀವು ಈ ಏಳು ಆಪ್​ಗಳನ್ನು ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡಿ:

Color Message
Safety AppLock
Convenient Scanner 2
Push Message-Texting&SMS
Emoji Wallpaper
Separate Doc Scanner
Fingertip GameBox

Leave A Reply

Your email address will not be published.