ಮಂಗಳೂರು: ಖಾಸಗಿ ಕಾಲೇಜೊಂದರಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!!
ಮಂಗಳೂರು: ಇಲ್ಲಿನ ಖಾಸಗಿ ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯೋರ್ವಳ ಶವ ಆಕೆ ತಂಗಿದ್ದ ಅಪಾರ್ಟ್ಮೆಂಟ್ ನ ಕೋಣೆಯೊಳಗೆ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಎದ್ದಿವೆ.
ಮೃತ ಯುವತಿಯನ್ನು ಕನಚೂರು ವೈದ್ಯಕೀಯ ಆಸ್ಪತ್ರೆಯಲ್ಲಿ ಇಂಟರ್ನ್ಶಿಪ್ ವೈದ್ಯಕೀಯ ವಿದ್ಯಾರ್ಥಿನಿ ವೈಶಾಲಿ ಗಾಯಕ್ವಾಡ್(25) ಎಂದು ಗುರುತಿಸಲಾಗಿದೆ.
ಕುತ್ತಾರ್ ಸಮೀಪದ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಿದ್ದ ಯುವತಿ ಇದ್ದಕ್ಕಿದ್ದಂತೆ ನಿನ್ನೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಪೋಷಕರು ಇಂದು ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಸಾವಿನ ಸುತ್ತ ಅನುಮಾನಗಳು ಇದ್ದು, ತನಿಖೆಯ ಬಳಿಕ ಸಾವಿಗೆ ಕಾರಣ ತಿಳಿದುಬರಬೇಕಾಗಿದೆ.