ಸುಬ್ರಹ್ಮಣ್ಯ ರೈಲು ನಿಲ್ದಾಣ : ಉತ್ತಮ ಸೌಲಭ್ಯದ ಯಾತ್ರಿ ನಿವಾಸ ಆರಂಭ

ಸುಬ್ರಹ್ಮಣ್ಯ :ಪ್ರಸಿದ್ಧ ಯಾತ್ರಾ ಕೇಂದ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪದಲ್ಲಿರುವ ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣದಲ್ಲಿ ನೈಋತ್ಯ ರೈಲ್ವೇ ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ಸೌಲಭ್ಯಗಳನ್ನು ಒಳಗೊಂಡಿರುವ ಯಾತ್ರಿ ನಿವಾಸವನ್ನು ಆರಂಭಿಸಿದೆ.

 

ಈ ಯಾತ್ರಿ ನಿವಾಸವು ಪುರುಷರು ಮತ್ತು ಮಹಿಳೆಯರಿಗೆ ಪ್ರತೇಕ ಸುಸಜ್ಜಿತ ಶೌಚಾಲಯ, ಸ್ನಾನಗೃಹ, ವಿಶ್ರಾಂತಿ ಕೊಠಡಿ, ಮಹಿಳೆಯರ ಡ್ರೆಸ್ಸಿಂಗ್‌ ರೂಂ ಮುಂತಾದ ಸೌಲಭ್ಯಗಳನ್ನು ಒಳಗೊಂಡಿದೆ.

ಇಲ್ಲಿಂದ ಕುಕ್ಕೆಶ್ರೀ ಸುಬ್ರಹ್ಮಣ ಕ್ಷೇತ್ರ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುವವರು ಯತ್ರಾರ್ಥಿಗಳಿಗೆ ಇದು ಹೆಚ್ಚು ಅನುಕೂಲಕವಾಗಿದ್ದು ಸೌಲಭ್ಯಗಳು ಉಚಿತವಾಗಿರುತ್ತವೆ ಎಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ಪ್ರಬಂಧಕ ರಾಹುಲ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Leave A Reply

Your email address will not be published.