ಎಲ್ಐಸಿಯಿಂದ ಬಿಡುಗಡೆಯಾಗಿದೆ ಹೊಸ ವಿಮೆ ಪಾಲಿಸಿ | “ಧನ್ ರೇಖಾ” ಪಾಲಿಸಿಯ ವಿಶೇಷತೆಯ ಕುರಿತು ಇಲ್ಲಿದೆ ಮಾಹಿತಿ

ಪ್ರತಿಯೊಬ್ಬರು ಕೂಡ ಹಣ ಹೂಡಿಕೆ ಮಾಡಬೇಕೆಂದು ಉತ್ತಮವಾದ ಯೋಜನೆಗಳನ್ನು ಹುಡುಕುವುದು ಸಹಜ. ಅದರಲ್ಲೂ ನಂಬಿಕಸ್ತ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ಹಣ ಸುರಕ್ಷಿತವಾಗಿರುತ್ತದೆ. ಗ್ರಾಹಕರ ವಿಶ್ವಾಸ ಗಳಿಸಿರುವ ಹಾಗೂ ಗ್ರಾಹಕರಿಗೆ ಉತ್ತಮ ಯೋಜನೆ ನೀಡುವ ಕಂಪನಿಗಳಲ್ಲಿ ಎಲ್ ಐ ಸಿ ಕೂಡ ಒಂದಾಗಿದ್ದು,ಇದೀಗ ಎಲ್ ಐ ಸಿ ಮತ್ತೊಂದು ಯೋಜನೆಯನ್ನು ಪರಿಚಯಿಸಿದೆ.

ಎಲ್ ಐ ಸಿ ಈ ವಿಮೆ ಪಾಲಿಸಿಗೆ ಧನ್ ರೇಖಾ ಎಂದು ಹೆಸರಿಟ್ಟಿದೆ. ಈ ಪಾಲಿಸಿಯ ವಿಶೇಷತೆಯೆಂದರೆ, ಮುಕ್ತಾಯದ ನಂತರ ಈಗಾಗಲೇ ಪಡೆದಿರುವ ಮೊತ್ತವನ್ನು ಕಡಿತಗೊಳಿಸದೆಯೇ ಸಂಪೂರ್ಣ ವಿಮಾ ಮೊತ್ತವನ್ನು ಪಾಲಿಸಿದಾರರಿಗೆ ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ಕನಿಷ್ಠ 2 ಲಕ್ಷ ರೂಪಾಯಿ ವಿಮಾ ಮೊತ್ತವನ್ನು ಹೂಡಿಕೆ ಮಾಡಬಹುದು. ಗರಿಷ್ಠ ಮೊತ್ತಕ್ಕೆ ಮಿತಿ ಇಲ್ಲ. ಷರತ್ತುಗಳ ಪ್ರಕಾರ 90 ದಿನಗಳಿಂದ ಎಂಟು ವರ್ಷದವರೆಗೆ ಮಗುವಿನ ಹೆಸರಿನಲ್ಲಿ ವಿಮೆ ತೆಗೆದುಕೊಳ್ಳಬಹುದು. ಗರಿಷ್ಠ ವಯಸ್ಸಿನ ಮಿತಿ 35 ವರ್ಷದಿಂದ 55 ವರ್ಷಗಳವರೆಗೆ ಇರುತ್ತದೆ.

ಕಂಪನಿ ಮೂರು ಟರ್ಮ್ ಗಳಲ್ಲಿ ಯೋಜನೆಯನ್ನು ಪರಿಚಯಿಸಿದೆ. 20 ವರ್ಷ, 30 ವರ್ಷ ಮತ್ತು 40 ವರ್ಷದ ಟರ್ಮ್ ಗಳಿದ್ದು, ಗ್ರಾಹಕ ಯಾವುದನ್ನಾದ್ರೂ ಖರೀದಿ ಮಾಡಬಹುದು. ಗ್ರಾಹಕ ಖರೀದಿ ಮಾಡಿದ ಟರ್ಮ್ ಯೋಜನೆಗೆ ತಕ್ಕಂತೆ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಗ್ರಾಹಕರು 20 ವರ್ಷದ ಟರ್ಮ್ ಆಯ್ದುಕೊಂಡಿದ್ದರೆ 10 ವರ್ಷದವರೆಗೆ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಇನ್ನು 30 ವರ್ಷಕ್ಕಾದ್ರೆ 15 ಹಾಗೂ 40 ವರ್ಷಕ್ಕಾದ್ರೆ 20 ವರ್ಷ ಪಾವತಿ ಮಾಡಬೇಕಾಗುತ್ತದೆ. ಇದಕ್ಕೆ ಕಂಪನಿ ಗ್ರಾಹಕರಿಗೆ ಸಿಂಗಲ್ ಪ್ರೀಮಿಯಂ ಪಾವತಿಗೂ ಅವಕಾಶ ನೀಡಿದೆ.

Leave A Reply

Your email address will not be published.