ಇನ್ನು ಮುಂದೆ ಆಧಾರ್ ಕಾರ್ಡ್ ಗೆ ವೋಟರ್ ಐಡಿ ಲಿಂಕ್ !!| ಮಹತ್ವದ ಚುನಾವಣಾ ಸುಧಾರಣೆಯ ಮಸೂದೆಗೆ ಕೇಂದ್ರ ಸಂಪುಟದ ಅನುಮೋದನೆ

ಕೇಂದ್ರ ಸಂಪುಟವು ಚುನಾವಣಾ ಸುಧಾರಣೆಗಳ ಮಸೂದೆಯನ್ನು ಅನುಮೋದಿಸಿದ್ದು, ಅದರನ್ವಯ ಮತದಾರರ ಗುರುತಿನ ಚೀಟಿಗಳಿಗೆ ಆಧಾರ್ ಅನ್ನು ಲಿಂಕ್ ಮಾಡಲು ಅವಕಾಶ ನೀಡಿದೆ.

ಇದು ಭಾರತದ ಚುನಾವಣಾ ಆಯೋಗ (ECI) ಪ್ರಸ್ತಾಪಿಸಿದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಮತದಾರರ ಪಟ್ಟಿಯನ್ನು ಬಲಪಡಿಸಲು, ಮತದಾನ ಪ್ರಕ್ರಿಯೆಯನ್ನು ಹೆಚ್ಚು ಒಳಗೊಳ್ಳುವಂತೆ ಮಾಡಲು, ಚುನಾವಣಾ ಆಯೋಗಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಲು ಮತ್ತು ನಕಲಿಗಳನ್ನು ಹೊರಹಾಕಲು ನಾಲ್ಕು ಪ್ರಮುಖ ಸುಧಾರಣೆಗಳನ್ನು ಪರಿಚಯಿಸಲಾಗುತ್ತಿದೆ.

ಮುಂದಿನ ವರ್ಷ ಜನವರಿ 1 ರಿಂದ, 18 ವರ್ಷ ತುಂಬಿದ ಮತದಾರರು ನಾಲ್ಕು ವಿಭಿನ್ನ ಕಟ್-ಆಫ್ ದಿನಾಂಕಗಳೊಂದಿಗೆ ವರ್ಷಕ್ಕೆ ನಾಲ್ಕು ಬಾರಿ ನೋಂದಾಯಿಸಲು ಅವಕಾಶವನ್ನು ಹೊಂದಿರುತ್ತಾರೆ. ಅವರು ಇದನ್ನು ಇಲ್ಲಿಯವರೆಗೆ ವರ್ಷಕ್ಕೊಮ್ಮೆ ಮಾತ್ರ ಮಾಡುತ್ತಿದ್ದರು. ಇದಲ್ಲದೇ ಸೇವಾ ಅಧಿಕಾರಿಗಳಿಗೆ ಜೆಂಡರ್ ನ್ಯೂಟ್ರಲ್ ಕಾನೂನು ಜಾರಿ ಕುರಿತು ತಿಳಿಸಲಾಗಿದೆ. ಹಾಗೂ ಚುನಾವಣೆ ನಡೆಸಲು ಯಾವುದೇ ಕಟ್ಟಡ ಸ್ವಾಧೀನಪಡಿಸಿಕೊಳ್ಳುವ ಅಧಿಕಾರವನ್ನು ಸಭೆಯಲ್ಲಿ ಆಯೋಗಕ್ಕೆ ನೀಡಲಾಗಿದೆ.

ಆಧಾರ್ ಹಾಗೂ ವೋಟರ್ ಐಡಿ ಲಿಂಕ್ ಮಾಡುವ ವಿಚಾರದ ಕುರಿತು ಬರುವುದಾದರೆ, ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್, ಎಸ್‌ಎಂಎಸ್, ಫೋನ್ ಅಥವಾ ಬೂತ್ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಬಹುದು. ಆದರೆ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ಆಧಾರ್ ಗೆ ವೋಟರ್ ಐಡಿ ಲಿಂಕ್ ಮಾಡುವುದು ಹೇಗೆ??

*https://voterportal.eci.gov.in/  ಗೆ ಭೇಟಿ ನೀಡಿ.

*ಮೊಬೈಲ್ ನಂಬರ್/ಇಮೇಲ್ ಐಡಿ/ವೋಟರ್ ಐಡಿ
ಸಂಖ್ಯೆ ನೀಡಿ ಲಾಗಿನ್ ಆಗಿ, ಪಾಸ್ವರ್ಡ್ ನಮೂದಿಸಿ. ರಾಜ್ಯ, ಜಿಲ್ಲೆ, ವೈಯಕ್ತಿಕ ವಿವರಗಳಾದ ಹೆಸರು, ಜನ್ಮ
ದಿನಾಂಕ ಮತ್ತು ತಂದೆ ಹೆಸರು ನಮೂದಿಸಿ.

*ಈ ವಿವರಗಳ ನಮೂದು ನಂತರ ಸರ್ಚ್ ಬಟನ್ ಒತ್ತಿ, ‘ಫೀಡ್ ಆಧಾರ್ ನಂಬರ್’ ಕ್ಲಿಕ್ ಮಾಡಿ.

*ಸ್ಕ್ರೀನ್ ಮೇಲೆ ಬರುವ ಪಾಪ್ ಅಪ್ ಪೇಜ್‌ನಲ್ಲಿ ಆಧಾರ್ ಕಾರ್ಡ್, ಆಧಾರ್ ಸಂಖ್ಯೆ, ವೋಟರ್ ಐಡಿ ಸಂಖ್ಯೆ, ನೋಂದಾಯಿತ ಮೊಬೈಲ್/ಇಮೇಲ್ ವಿಳಾಸ ತುಂಬಿ.

*ಮರುಪರಿಶೀಲನೆ ಮಾಡಿ ‘ಸಬ್‌ಮಿಟ್’ ಬಟನ್ ಒತ್ತಿ.

*ನಿಮ್ಮ ಅರ್ಜಿ ಯಶಸ್ವಿಯಾಗಿ ನೋಂದಾವಣೆಗೊಂಡಿದೆ ಎಂಬ ಸಂದೇಶ ಬರುತ್ತದೆ.

ಈ ಹಂತಗಳ ಮೂಲಕ ನೀವು ಸುಲಭವಾಗಿ ಆಧಾರ್ ವೋಟರ್ ಐಡಿಯನ್ನು ಲಿಂಕ್ ಮಾಡಬಹುದಾಗಿದೆ.

Leave A Reply

Your email address will not be published.