ಸೂರ್ಯನಿಗೇ ಟಕ್ಕರ್ ನೀಡಿದ ಬಾಹ್ಯಾಕಾಶ ನೌಕೆ | 2 ಮಿಲಿಯನ್ ಡಿಗ್ರಿ ಉಷ್ಣತೆಯ ಸೂರ್ಯನೊಳಕ್ಕೆ ನುಗ್ಗಿದ ನಾಸಾ ರಾಕೆಟ್ ಶಿಪ್ !!
ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಅಸಾಧ್ಯವಾದ ಕಾರ್ಯಾಚರಣೆಯೊಂದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 2 ಮಿಲಿಯನ್ ಡಿಗ್ರಿ ಫ್ಯಾರನ್‌ಹೀಟ್ ಉಷ್ಣಾಂಶ ಇರುವ ಭಗ ಭಗ ಉರಿಯುತ್ತಿರುವ ಸೂರ್ಯನನ್ನೇ ಸ್ಪರ್ಶಿಸುವ ಮೂಲಕ ನಾಸಾ ವಿಜ್ಞಾನಿಗಳು ವಿಜ್ಞಾನ ಲೋಕದಲ್ಲಿ ಹೊಸ ಮೈಲುಗಲ್ಲನ್ನೇ ಸ್ಥಾಪಿಸಿದ್ದಾರೆ.
ಹೌದು, ನಾಸಾದ ಬಾಹ್ಯಾಕಾಶ ನೌಕೆಯು ಅಧಿಕೃತವಾಗಿ ಸೌರವ್ಯೂಹದ ಅಧಿಪತಿ ಸೂರ್ಯನನ್ನು ಸ್ಪರ್ಶಿಸುವ ಮೂಲಕ ವಿಜ್ಞಾನ ಲೋಕದಲ್ಲಿ ಹೊಸ ಇತಿಹಾಸವನ್ನು ಬರೆದಿದೆ. ಇದುವರೆಗೂ ಅನ್ವೇಷಿಸದ ಕರೊನಾ ಎಂದು ಕರೆಯಲ್ಪಡುವ ಸೂರ್ಯನ ಹೊರಭಾಗದ ವಾತಾವರಣದ ಮೂಲಕ ನೌಕೆಯು ಸೂರ್ಯನತ್ತ ಧುಮಿಕಿರುವುದಾಗಿ ಅಮೆರಿಕನ್ ಜಿಯೋಫಿಸಿಕಲ್ ಯೂನಿಯನ್ ಸಭೆಯಲ್ಲಿ ವಿಜ್ಞಾನಿಗಳು ಮಂಗಳವಾರ ತಿಳಿಸಿದ್ದಾರೆ.
ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ಉಡಾವಣೆ ಮಾಡಿದ ಬಾಹ್ಯಾಕಾಶ ನೌಕೆಯು ಅಸಾಧ್ಯವೆಂದು ಪರಿಗಣಿಸಲಾದ ಸಾಧನೆಯನ್ನು ಮಾಡಿದೆ. ಸೂರ್ಯನ ಹೊರಪದರದ ಉಷ್ಣತೆಯು 2 ಮಿಲಿಯನ್ ಡಿಗ್ರಿ ಫ್ಯಾರನ್‌ಹೀಟ್ ಆಗಿರುವುದರಿಂದ ಈ ಕಾರ್ಯಾಚರಣೆಯು ಅಸಾಧ್ಯವಾಗಿತ್ತು. ಆದರೂ ಇತಿಹಾಸದಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆಯು ಸೂರ್ಯನ ಹೊರಪದರವನ್ನು ಸ್ಪರ್ಶಿಸಿದೆ. ಹೀಗಾಗಿ ನಾಸಾದ ಈ ಸಾಧನೆಯೂ ವಿಜ್ಞಾನ ಪ್ರಪಂಚದ ಶ್ರೇಷ್ಠ ಸಾಧನೆಗಳಲ್ಲಿ ಒಂದಾಗಿದೆ ಮತ್ತು ಮಾನವರಿಗೆ ಒಂದು ಮೈಲಿಗಲ್ಲಾಗಿದೆ.
ವರದಿಯ ಪ್ರಕಾರ, ಪಾರ್ಕರ್ ಸೋಲಾರ್ ಪ್ರೋಬ್ ಹೆಸರಿನ ರಾಕೆಟ್‌ಶಿಪ್ ಏಪ್ರಿಲ್ 28 ರಂದು ಉಡಾವಣೆಯಾಗಿ ಕರೋನಾ ಎಂದು ಕರೆಯಲ್ಪಡುವ ಸೂರ್ಯನ ಮೇಲ್ಪದರವನ್ನು ಯಶಸ್ವಿಯಾಗಿ ಪ್ರವೇಶಿಸಿತು. ಇದರೊಂದಿಗೆ ಈ ನಾಸಾ ರಾಕೆಟ್ ಸೂರ್ಯನ ಮೇಲ್ಮೈಯಲ್ಲಿರುವ ಕಣಗಳು ಮತ್ತು ಕೆಲ ಮಾದರಿಗಳನ್ನು ಸಹ ತೆಗೆದುಕೊಂಡಿದೆ.
ಹಾರ್ವರ್ಡ್ ಮತ್ತು ಸ್ಮಿತ್ಸೋನಿಯನ್ (CfA) ನಲ್ಲಿನ ಖಗೋಳ ಭೌತಶಾಸ್ತ್ರದ ಕೇಂದ್ರದ ಸದಸ್ಯರು ಸೇರಿದಂತೆ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ದೊಡ್ಡ ಸಹಯೋಗದೊಂದಿಗೆ ಈ ಐತಿಹಾಸಿಕ ಕ್ಷಣವನ್ನು ಸಾಧಿಸಲಾಗಿದೆ. ತನಿಖೆಯಲ್ಲಿ ಪ್ರಮುಖ ಸಾಧನವನ್ನು ನಿರ್ಮಿಸಿದ ಮತ್ತು ಮೇಲ್ವಿಚಾರಣೆ ಮಾಡಿದವರು ಸೋಲಾರ್ ಪ್ರೋಬ್ ಕಪ್ ಎಂಬ ವಿಜ್ಞಾನಿ. ಸೂರ್ಯನ ವಾತಾವರಣದಿಂದ ಕಣಗಳನ್ನು ಸಂಗ್ರಹಿಸುವ ಏಕೈಕ ಸಾಧಕರ ಪಟ್ಟ ಕಪ್ ಅವರಿಗೆ ಸಿಗಲಿದೆ.
ಬಾಹ್ಯಾಕಾಶ ನೌಕೆಯನ್ನು ರಕ್ಷಿಸಲು ಎರಡು ಕಪ್ ಆಕಾರದ ರಕ್ಷಾ ಕವಚಗಳನ್ನು ತಯಾರಿಸಲಾಗಿದೆ. ಇದನ್ನು ಬಾಹ್ಯಾಕಾಶ ನೌಕೆಗೆ ಅಂಟಿಸಲಾಗಿದೆ. ಈ ಎರಡೂ ಕಪ್‌ಗಳು ಸೂರ್ಯನ ಶಾಖಕ್ಕೆ ನೇರವಾಗಿದ್ದು ಅವುಗಳಿಂದಲೇ ನೌಕೆಯನ್ನು ರಕ್ಷಿಸಲಾಗಿದೆ ಎಂದು ವಿಜ್ಞಾನಿ ಕೇಸ್ ಹೇಳಿದ್ದಾರೆ. ಈ ಕಪ್ ಸೂರ್ಯನ ಶಾಕಕ್ಕೆ ಕರಗದಂತೆ ಹೆಚ್ಚಿನ ಲೋಹಗಳು, ಟಂಗ್‌ಸ್ಟನ್, ನಿಯೋಬಿಯಂ, ಮಾಲಿಬ್ಡಿನಮ್ ಮತ್ತು ನೀಲಮಣಿಯಂತಹ ಕಲ್ಲುಗಳಿಂದ ತಯಾರಿಸಲಾಗಿದೆ.
ಭೂಮಿಗಿಂತ ಭಿನ್ನವಾಗಿ, ಸೂರ್ಯನಿಗೆ ಘನ ಮೇಲ್ಮೈ ಇಲ್ಲ. ಇದು ಅತ್ಯಂತ ಬಿಸಿ ವಾತಾವರಣವನ್ನು ಹೊಂದಿದೆ. ಕರೋನಾವು ಸೂರ್ಯನ ವಾತಾವರಣದ ಹೊರ ಪದರವಾಗಿದೆ. ಈ ಕರೋನಾ ಸೂರ್ಯನ ಮೇಲ್ಮೈಯಿಂದ 4.3 ರಿಂದ 8.6 ಮಿಲಿಯನ್ ಮೈಲುಗಳಷ್ಟು ದೂರದಲ್ಲಿದೆ. ನಾಸಾದ ಪ್ರಕಾರ, ಸೂರ್ಯನ ವಾತಾವರಣದಲ್ಲಿ ಪಾರ್ಕರ್ ಸೋಲಾರ್ ಪ್ರೋಬ್ ಬಾಹ್ಯಾಕಾಶ ನೌಕೆಯ ಆಗಮನವು ಊಹಿಸಿದ್ದಕ್ಕಿಂತ ಹೆಚ್ಚಿನ ತಂತ್ರಜ್ಞಾನದ ಪ್ರಗತಿಯನ್ನು ಸೂಚಿಸುತ್ತದೆ. ಬಾಹ್ಯಾಕಾಶ ನೌಕೆಯ ಐತಿಹಾಸಿಕ ಸಾಧನೆಯು ವಿಜ್ಞಾನಿಗಳಿಗೆ ಕೆಂಪು-ಬಿಸಿ ನಕ್ಷತ್ರವಾದ ಸೂರ್ಯನ ಬಗ್ಗೆ ಶತಮಾನಗಳಷ್ಟು ಹಳೆಯ ರಹಸ್ಯಗಳನ್ನು ಪರಿಹರಿಸುವ ಹೊಸ ಭರವಸೆಯನ್ನು ನೀಡಿದೆ. ಉದಾಹರಣೆಗೆ, ಸೂರ್ಯನ ಹೊರಗಿನ ವಾತಾವರಣ (2 ಮಿಲಿಯನ್ ಡಿಗ್ರಿ ಸೆಲ್ಸಿಯಸ್) ಎಂದು ನಮಗೆ ನಿಜವಾಗಿಯೂ ತಿಳಿದಿಲ್ಲ ಎಂದು ನಾಸಾ ಹೇಳಿದೆ.
ಅದೇನೇ ಆದರೂ ನಾಸದ ಈ ಸಾಧನೆ ಮಾತ್ರ ಎಲ್ಲರೂ ಮೆಚ್ಚುವಂಥದ್ದೇ. ಸೂರ್ಯನನ್ನು ತಲುಪುವುದು ಸುಲಭದ ಮಾತಲ್ಲ, ಇಂತಹ ಕಠಿಣ ಸವಾಲನ್ನು ಧೈರ್ಯ, ಸಾಮರ್ಥ್ಯದಿಂದ ಎದುರಿಸಿ, ಅಸಾಧ್ಯವಾದುದನ್ನು ಸಾಧಿಸಿದ ನಾಸಾಗೆ ತುಂಬು ಹೃದಯದ ಅಭಿನಂದನೆಗಳು.