ಮಂಟಪಕ್ಕೆ ಮದುಮಗನನ್ನು ಮೆರವಣಿಗೆಯ ಮೂಲಕ ಕರೆತರುತ್ತಿದ್ದ ಕುದುರೆಗಾಡಿಗೆ ಬೆಂಕಿ !! | ಬೆಂಕಿ ಹತ್ತಿಕೊಳ್ಳಲು ಕಾರಣ ಏನು ಗೊತ್ತಾ??

ಮದುವೆ ಎಂದರೆ ಮದುಮಗನಿಗೆ ಒಂದು ವಿಶೇಷವಾದ ಪ್ರಾಶಸ್ತ್ಯ ಇದ್ದೇ ಇದೆ. ಆತನನ್ನು ಮೆರವಣಿಗೆಯ ಮೂಲಕ ಮಂಟಪಕ್ಕೆ ಕರೆತರುವುದು ಹಲವು ಮದುವೆ ‌ಸಂಪ್ರದಾಯಗಳಲ್ಲಿ ರೂಢಿಯಲ್ಲಿದೆ. ಹಾಗೆಯೇ ಇಲ್ಲೊಂದು ಕಡೆ ಮದುಮಗನನ್ನು ಕೂರಿಸಿಕೊಂಡು ಮೆರವಣಿಗೆ ಹೊರಟ್ಟಿದ್ದ ಕುದುರೆ ಗಾಡಿಗೆ ಬೆಂಕಿ ಹೊತ್ತಿಕೊಂಡ ಘಟನೆ ಗುಜಾರಾತ್ ನ ಪಂಚಮಹಲ್ ಜಿಲ್ಲೆಯಲ್ಲಿ ನಡೆದಿದೆ.

 

ವರನನ್ನು ಮಂಟಪಕ್ಕೆ ಮೆರವಣಿಗೆಯೊಂದಿಗೆ ಕರೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ರಸ್ತೆಯುದ್ದಕ್ಕೂ ಜನರು ಪಟಾಕಿ ಸಿಡಿಸುತ್ತಾ ನೃತ್ಯ ಮಾಡುತ್ತಾ ಬರುತ್ತಿದ್ದರು. ಈ ವೇಳೆ ಪಟಾಕಿ ಕಿಡಿ ತಗುಲಿ ಕುದುರೆಗಾಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವರ ಕೂದೆಲೆಳೆ ಅಂತರದಲ್ಲಿ ಪಾರಾಗಿದ್ದಾನೆ.

ಗಾಬರಿಗೊಂಡ ಜನರು ತಕ್ಷಣವೇ ಪಕ್ಕದಲ್ಲಿದ್ದ ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿದರು. ಹಾಗೆಯೇ ಸುತ್ತಮುತ್ತಲಿನ ಜನ ನೀರು ಸುರಿದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸದೆ ಕುದುರೆ ಕೂಡ ಸುರಕ್ಷಿತವಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಆದರೂ ಈ ಆಡಂಬರದ ವಿವಾಹ ಜೀವಕ್ಕೆ ಅಪಾಯ ತಂದದ್ದಂತೂ ಸತ್ಯ. ಯಾವುದೇ ರೀತಿಯ ಸಂಭ್ರಮಾಚರಣೆಯ ವೇಳೆಯಲ್ಲಿಯೂ ಅತ್ಯಂತ ಜಾಗರೂಕರಾಗಿರುವುದು ಅತಿಮುಖ್ಯ ಎಂಬುದಕ್ಕೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ.

Leave A Reply

Your email address will not be published.