ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಡಾ.ಕೆ.ವಿ.ರೇಣುಕಾಪ್ರಸಾದ್ ಅವರಿಗೆ ಭರ್ಜರಿ ಗೆಲುವು

ಪುತ್ತೂರು : ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ದ.ಕ. ಮತಕ್ಷೇತ್ರದಿಂದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ರೇಣುಕಾ ಪ್ರಸಾದ್‌ರವರು ಗೆಲುವು ಸಾಧಿಸಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ, ಸಹೋದರ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದರವರನ್ನು 1554 ಮತಗಳಿಂದ ಅವರು ಸೋಲಿಸಿದ್ದಾರೆ.

ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಮತಕ್ಷೇತ್ರ ಇದಾಗಿದ್ದು, ಡಿ.12 ರಂದು ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದಿತ್ತು. ಡಾ. ಕೆ.ವಿ.ಚಿದಾನಂದ, ಡಾ.ಕೆ.ವಿ. ರೇಣುಕಾಪ್ರಸಾದ್ ಹಾಗೂ ಹೇಮಾನಂದ ಹಲ್ದಡ್ಕ ಚುನಾವಣಾ ಕಣದಲ್ಲಿದ್ದರು. ಇಂದು ಮತ ಎಣಿಕೆ ನಡೆದಿದ್ದು, ಡಾ. ಕೆ.ವಿ. ರೇಣುಕಾಪ್ರಸಾದ್‌ರವರು 3295 ಮತಗಳನ್ನು, ಡಾ.ಕೆ.ವಿ.ಚಿದಾನಂದರವರು 1741 ಮತಗಳನ್ನು ಹಾಗೂ ಹೇಮಾನಂದ ಹಲ್ದಡ್ಕ 346 ಮತಗಳನ್ನು ಪಡೆದಿದ್ದಾರೆ. 30 ಮತಗಳು ಅಸಿಂಧುವಾಗಿದೆ. ಉಡುಪಿ ಮತಕಟ್ಟೆ ಹೊರತುಪಡಿಸಿ ಉಳಿದೆಲ್ಲ ಕಡೆ ಡಾ.ಕೆ.ವಿ.ರೇಣುಕಾಪ್ರಸಾದ್‌ರವರು ಮುನ್ನಡೆ ಸಾಧಿಸಿದ್ದಾರೆ.

ಉಡುಪಿಯಲ್ಲಿ ಡಾ.ಕೆ.ವಿ.ಚಿದಾನಂದರಿಗೆ 93 ಮತಗಳು, ಡಾ.ಕೆ.ವಿ.ರೇಣುಕಾ ಪ್ರಸಾದ್‌ರವರಿಗೆ 3 ಮತಗಳು ಮತ್ತು ಹೇಮಾನಂದ ಹಲ್ದಡ್ಕರವರಿಗೆ 37 ಮತಗಳು ಲಭಿಸಿದೆ. ಮಂಗಳೂರಿನಲ್ಲಿ ಡಾ.ಕೆ.ವಿ.ಚಿದಾನಂದರಿಗೆ 44 ಮತಗಳು, ಡಾ.ಕೆ.ವಿ.ರೇಣುಕಾ ಪ್ರಸಾದ್‌ರವರಿಗೆ 192 ಮತಗಳು ಲಭಿಸಿದೆ. ಪುತ್ತೂರಿನಲ್ಲಿ ಡಾ.ಕೆ.ವಿ.ಚಿದಾನಂದರಿಗೆ 138 ಮತಗಳು, ಡಾ.ಕೆ.ವಿ.ರೇಣುಕಾ ಪ್ರಸಾದ್‌ರವರಿಗೆ 335 ಮತಗಳು ಲಭಿಸಿದೆ. ಕಡಬದಲ್ಲಿ ಡಾ.ಕೆ.ವಿ.ಚಿದಾನಂದರಿಗೆ 52 ಮತಗಳು, ಡಾ.ಕೆ.ವಿ.ರೇಣುಕಾ ಪ್ರಸಾದ್‌ರವರಿಗೆ 135 ಮತಗಳು ಲಭಿಸಿದೆ.

Leave A Reply

Your email address will not be published.