ಮಿಸ್ ಯುನಿವರ್ಸ್ ಕಿರೀಟದ ಬೆಲೆ 37 ಕೋಟಿ ರೂ.
ಡಿಸೆಂಬರ್ 12 ರಂದು ನಡೆದ ಮಿಸ್ ಯುನಿವರ್ಸ್ 2021 ಸರ್ಧೆಯಲ್ಲಿ ಭಾರತೀಯ ಯುವತಿ ಕಿರೀಟ ಅಲಂಕರಿಸಿದ್ದಾರೆ. ಭಾರತದ ನಾರಿ ಗೆದ್ದ ಕಿರೀಟದ ಬೆಲೆ ಬರೋಬ್ಬರಿ 37 ಕೋಟಿ ರೂ. ಹೌದು, ಈ ಹಿಂದೆ ನಡೆದಿರುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಹಲವು ಬಾರಿ ಕಿರೀಟಗಳನ್ನು ಬದಲಿಸಲಾಗಿದೆ. 2019ರಲ್ಲಿ ಮಿಸ್ ಯುನಿವರ್ಸ್ ಸಂಸ್ಥೆ ಕಿರೀಟವನ್ನು ವಿನ್ಯಾಸ ಗೊಳಿಸಲು ಮೌವರ್ ಆಭರಣ ಕಂಪನಿಯನ್ನು ಆಯ್ಕೆ ಮಾಡಿತ್ತು.
ಮಹಿಳಾ ಸಬಲೀಕರಣ, ಶಕ್ತಿ, ಸಮುದಾಯಗಳನ್ನು ಒಂದುಗೂಡಿಸುವಂತಹ ಯುನಿವರ್ಸ್ ಸಂಸ್ಥೆಗೆ ಮೌವದ ವಿನ್ಯಾಸಕರಾರು ಪವರ್ ಆಪ್ ಯುನಿಟ್ ಕೌನ್ ಅನ್ನು ತಯಾರಿಸಿದ್ದರು. ಈ ಕಿರೀಟದ ಬೆಲೆ 5 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಎಂದರೆ ಬರೋಬ್ಬರಿ 37 ಕೋಟಿ ರೂ. ಹಾಗೂ ಇದು ವಿಶ್ವ ಅತ್ಯಂತ ದುಬಾರಿ ಸೌಂದರ್ಯ ಸ್ಪರ್ಧೆಯ ಕಿರೀಟ ಎಂಬುದಾಗಿ ದಾಖಲೆಯಾಗಿದೆ.
ಈ ಕಿರೀಟ ಮಹತ್ವಾಕಾಂಕ್ಷೆ, ವೈವಿಧ್ಯತೆ, ಸಮುದಾಯ ಹಾಗೂ ಸೌಂದರ್ಯದ ಸಂಕೇತವಾಗಿದೆ. 2019ರಲ್ಲಿ ದಕ್ಷಿಣ ಆಫ್ರಿಕಾದ ಚೊಜಿಬಿನಿ ತುಂಜಿ, 2020ರಲ್ಲಿ ಮೆಕ್ಸಿಕೋದ ಆಂಡ್ರಿಯಾ ಮೆಜಾ ಈ ವಿಶ್ವದ ದುಬಾರಿ ಕಿರೀಟವನ್ನು ತೊಟ್ಟಿದ್ದು, ಇದೀಗ ಭಾರತದ ಹೆಮ್ಮೆಯ ಹರ್ನಾಜ್ ಸಿಂಧು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.