ಜಮೀನಿನ ಆಸೆಗಾಗಿ 98 ವರ್ಷದ ಅಜ್ಜಿಯನ್ನೇ ಹೊತ್ತೊಯ್ದ ಸಂಬಂಧಿಕರು !! | ಸಿಸಿಟಿವಿಯಲ್ಲಿ ಈ ಪಾಪಿ ಕೃತ್ಯ ಸೆರೆ

ಆಸ್ತಿಗಾಗಿ ಮಕ್ಕಳು ತಂದೆ-ತಾಯಿಯನ್ನು ತುಂಬಾ ಕೀಳಾಗಿ ನಡೆಸಿಕೊಂಡ ಘಟನೆಗಳು ಅದೆಷ್ಟೋ ನಡೆದಿವೆ. ಹಣದಾಸೆಗಾಗಿ ಅದೆಷ್ಟೋ ಮಕ್ಕಳು ತಮ್ಮ ತಂದೆ ತಾಯಿಯನ್ನು ಕೊಲ್ಲುವ ಸಂಚು ನಡೆಸಿ, ಅದರಲ್ಲಿ ಯಶಸ್ವಿ ಕೂಡ ಆಗಿದ್ದುಂಟು. ಹಾಗೆಯೇ ಆಸ್ತಿಗಾಗಿ 98 ವರ್ಷದ ಅಜ್ಜಿಯನ್ನೇ ಸಂಬಂಧಿಕರು ಹೊತ್ತೊಯ್ದಿರುವ ಆತಂಕಕಾರಿ ಘಟನೆ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ.

 

98 ವರ್ಷದ ದೇವಕ್ಕ ದುಂಡಣ್ಣನವರ ಅಪಹರಣಕ್ಕೀಡಾದ ಅಜ್ಜಿ. ಆಕೆಯ ಮನೆಗೆ ನುಗ್ಗಿದ ಸಂಬಂಧಿಕರು ಅಜ್ಜಿಯನ್ನು ಹೆಗಲ ಮೇಲೆ ಹೊತ್ತೊಯ್ದಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ದೇವಕ್ಕ ದುಂಡಣ್ಣನವರ 7 ಎಕರೆ 36 ಗುಂಟೆ ಜಮೀನಿಗಾಗಿ ಸಂಬಂಧಿಕರು ಈ ನೀಚ ಕೃತ್ಯ ಮಾಡಿದ್ದಾರೆ. ಅಜ್ಜಿಯ ಪತಿಯ ಸಹೋದರನ ಮಕ್ಕಳಿಂದ ಈ ಪಾಪದ ಕೃತ್ಯ ನಡೆದಿದೆ.

ಸಂತೋಷ ದುಂಡಣ್ಣನವರ, ಈರಪ್ಪ ದುಂಡಣ್ಣನವರ, ಆದಪ್ಪ ದುಂಡಣ್ಣನವರ, ದಾಕ್ಷಾಯಿಣಿ ದುಂಡಣ್ಣನವರ, ಸಾವಿತ್ರಾ ದುಂಡಣ್ಣನವರ, ಮಂಜಪ್ಪ ದುಂಡಣ್ಣನವ, ಪ್ರಕಾಶ್ ದುಂಡಣ್ಣನವರ ಇಷ್ಟು ಮಂದಿ ಸೇರಿ ಅಜ್ಜಿಯನ್ನು ಹೊತ್ತೊಯ್ದಿದ್ದಾರೆ.

ಅನಾರೋಗ್ಯದಲ್ಲಿದ್ದಾಗ ಅಜ್ಜಿಯನ್ನು ಮಾಣಿಕಪ್ಪ ದುಂಡಣ್ಣನವರ ಎಂಬುವವರು ಸಾಕಿದ್ದರು. ಕಳೆದ 30 ವರ್ಷಗಳಿಂದ ಅಜ್ಜಿಯನ್ನು ಸಾಕಿ ಸಲುಹಿದ್ದರು. ಹೀಗಾಗಿ ಅಜ್ಜಿ ತನ್ನ ಹೆಸರಿನಲ್ಲಿದ್ದ ಜಮೀನನ್ನು ಮಾಣಿಕಪ್ಪ ಹೆಸರಿಗೆ ಮಾಡಿದ್ದರು. ನಮ್ಮ ಹೆಸರಿಗೆ ಮಾಡಲಿಲ್ಲ ಎಂಬ ಸಿಟ್ಟಿನಿಂದ ಅಜ್ಜಿಯನ್ನೇ ಪಾಪಿಗಳು ಹೊತ್ತೊಯ್ದಿದ್ದಾರೆ.

Leave A Reply

Your email address will not be published.