ದಕ್ಷಿಣ ಕನ್ನಡ ಜಿಲ್ಲೆಯ Declamation contest ಭಾಷಣ ಸ್ಪರ್ಧೆಯಲ್ಲಿ ಪುತ್ತೂರಿನ‌ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಪುತ್ತೂರು: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಇದರ ವತಿಯಿಂದ ಪ್ರತೀ ವರ್ಷ ಭಾರತದ ಗಣತಂತ್ರ ದಿವಸದ ಪ್ರಯುಕ್ತ ಹಾಗೂ “ಸಂವಿಧಾನ ದಿವಸ” ವನ್ನು ಆಚರಿಸುವ ಸಲುವಾಗಿ “ದೇಶಭಕ್ತಿ ಮತ್ತು ರಾಷ್ಟ್ರದ ನಿರ್ಮಾಣದಲ್ಲಿ ಯುವಜನರು ಕುರಿತ ಇಂಗ್ಲೀಷ್/ಹಿಂದಿ ಭಾಷೆಯ ಭಾಷಣ ಸ್ಪರ್ಧೆಯನ್ನು ಆಯೋಜಿಸಿದ್ದು, ಡಿಸೆಂಬರ್ 14. ರಂದು ನಡೆದ ಜಿಲ್ಲಾ ಮಟ್ಟದ‌ ಭಾಷಣ ಸ್ಪರ್ಧೆಯಲ್ಲಿ ಪುತ್ತೂರಿನ ಇಬ್ಬರು ವಿದ್ಯಾರ್ಥಿಗಳು ಪ್ರಥಮ‌ ಮತ್ತು ದ್ವೀತಿಯ ಸ್ಥಾನ‌ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪುತ್ತೂರು ಸೈಂಟ್ ಫಿಲೋಮಿನಾ‌ ಕಾಲೇಜು ತೃತೀಯ ‌ಬಿಕಾಂ‌ ವಿದ್ಯಾರ್ಥಿನಿ ಶ್ರೀದೇವಿ ಪ್ರಥಮ ಸ್ಥಾನ ಹಾಗೂ ಅದೇ ಕಾಲೇಜಿನ ತೃತೀಯ ಬಿಸಿಎ ವಿದ್ಯಾರ್ಥಿನಿ‌ ಸಾಯಿಲಿ ವಿಠಲ್ ಸುವರ್ಣ ದ್ವಿತೀಯ ಸ್ಥಾನ‌ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ ಎಂದು ನೆಹರು ಯುವ ಕೇಂದ್ರ ಇದರ‌ ತಾಲೂಕು ಸಂಯೋಜಕರಾದ‌ ಗೌತಮ್ ರಾಜ್ ಕರಂಬಾರು ಮತ್ತು ಪ್ರಜ್ಞಾ ಕುಲಾಲ್ ಕಾವು ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.