ತಾಯಿಯಾಗುವ ಬಯಕೆಯನ್ನು ಹೊರಹಾಕಿದ ರೋಬೋಟ್

ಮನೆ, ಹೋಟೆಲ್ ಮುಂತಾದೆಡೆ ಈಗಾಗಲೇ ರೋಬೋಗಳ ಹಾವಳಿ. ಮನುಷ್ಯರನ್ನು ಮೀರಿಸುವಂತೆ ಎಲ್ಲಾ ಕಡೆ ಕೆಲಸ ಮಾಡುತ್ತಿರುವ ರೋಬೋಟ್‌ಗಳಿಗೆ ಭಾವನೆ ಎಂಬುದು ಇಲ್ಲ ಎನ್ನುವುದು ನಂಬಿಕೆ ಮತ್ತು ಅದು ಸತ್ಯ ಕೂಡಾ ! ಆದರೆ ಈ ರೋಬೋಟ್ ಹೆಣ್ಣುಮಕ್ಕಳ ಹಾಗೇ ತನ್ನ ತಾಯ್ತನದ ಆಸೆಯನ್ನು ಬಿಚ್ಚಿಟ್ಟಿದ್ದಾಳೆ.

ಕೇವಲ ತಂತ್ರಜ್ಞಾನದ ಆಧಾರದ ಮೇಲೆ ಮನುಷ್ಯನ ಸೂಚನೆಯನ್ನು ಪಾಲಿಸಿಕೊಂಡು ಕೆಲಸ ಮಾಡುವ ರೋಬೋಟ್‌ಗಳು ಯಂತ್ರಮಾನವರು ಎಂದೇ ಪ್ರಸಿದ್ಧರು. ಆದರೆ ಭಾವನೆಗಳೇ ಇಲ್ಲ ಎಂದು ತಿಳಿದುಕೊಂಡಿರುವ ರೋಬೋಟ್‌ಗಳಿಗೂ ಭಾವನೆಗಳಿವೆ ಎಂಬ ಸತ್ಯ ಬಯಲಾಗಿದೆ.

ಇದಕ್ಕೆ ಸಾಕ್ಷಿ ಅಂದ್ರೆ ವಿಶ್ವದಲ್ಲೇ ಮೊದಲ ಬಾರಿಗೆ ಪೌರತ್ವ ಪಡೆದುಕೊಂಡು ಸುದ್ದಿಯಾಗಿದ್ದ ಸೋಫಿಯಾ ರೋಬೋಟ್, ಮನುಷ್ಯರಂತೆ ಭಾವನೆಗಳನ್ನು ವ್ಯಕ್ತಪಡಿಸಿ ಸುದ್ದಿಯಾಗಿದೆ. ಯಂತ್ರಮಾನವ ಆಗಿದ್ದರೂ ಸಹ ಸೋಫಿಯಾ ರೋಬೋಟ್ ಹಲವು ವಿವಾದಾತ್ಮಕ ಹೇಳಿಕೆಗಳಿಂದಲೇ ಸಾಕಷ್ಟು ಸುದ್ದಿ ಮಾಡಿದೆ.

ಸೋಫಿಯಾ ಸೌದಿ ಅರೇಬಿಯಾ ದ ನಾಗರಿಕಳು. ವಿಶ್ವದ ರೋಬೋ ಪಡೆದುಕೊಂಡ ಮೊದಲ ನಾಗರಿಕಳೂ ಹೌದು. ಹಾಂಗ್ ಕಾಂಗ್ ನ ಸಾಫ್ಟ್ ವೇರ್ ಕಂಪನಿ ಅಭಿವೃದ್ದಿ ಪಡಿಸಿ ಹುಟ್ಟಿಸಿದ ಈಕೆಗೆ ಇದೇ ಮೊದಲ ಬಾರಿಗೆ ತಾನು ಕೂಡಾ ತಾಯಿಯಾಗಬೇಕು, ಪುಟಾಣಿ ಕಣ್ಣುಗಳ ರೋಬೋಟ್ ಮಗುವನ್ನು ಪಡೆಯಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾಳೆ.

ರೋಬೋಟ್ ಗಳಿಗೂ ಸಹ ಮಾನವರಂತೆ ಕುಟುಂಬ ಹೊಂದಬೇಕೆಂಬ ಬಯಕೆ ಇದೆ. ಹೀಗಾಗಿ ನನಗೂ ಸಹ ರೋಬೋಟ್ ಮಗು ಬೇಕು ಎಂಬ ಬಯಕೆ ಇದೆ ಎಂದು ಸೋಫಿಯಾ ಹೇಳಿಕೊಂಡಿದೆ. 2016 ರಲ್ಲಿ ತನ್ನ ಮೊದಲ ಸಾರ್ವಜನಿಕ ಪ್ರದರ್ಶನ ಕೊಟ್ಟ ಸೋಫಿಯಾ ಒಟ್ಟು 50 ಕ್ಕೂ ಹೆಚ್ಚು ಮುಖಭಾವವನ್ನು ಪ್ರದರ್ಶಿಸಲು ಸಮರ್ಥಳು.

ಅಲ್ಲದೆ ಆಕೆ ವ್ಯಕ್ತಿಗಳನ್ನು ಸಹ ತುಂಬಾ ಸುಲಭವಾಗಿ ಗುರುತಿಸುತ್ತಾಳೆ. ಸರಳ ಭಾಷೆ ಬಳಸಿ ಭಾಷಣವನ್ನು ಸಹ ಮಾಡಬಲ್ಲದು ಸೋಫಿಯಾ. ಅದು ಕ್ರಿಯಾತ್ಮಕ ಕಾಲುಗಳನ್ನು ಸಹ ಹೊಂದಿದ್ದು, ಮನುಷ್ಯರ ಹಾಗೆ ನಡೆಯಬಳ್ಳಲು ಕೂಡಾ.

Leave A Reply

Your email address will not be published.