ವಿಶ್ವದ ಮೊದಲ ‘ಪೇಪರ್ ಲೆಸ್ ಸರ್ಕಾರ’ವೆಂಬ ಹೆಗ್ಗಳಿಕೆಗೆ ಪಾತ್ರವಾದ ದುಬೈ !! | ಪೇಪರ್ ಲೆಸ್ ಸ್ಟ್ರಾಟರ್ಜಿಯಿಂದ ವಿಶ್ವದ ಪ್ರಮುಖ ಡಿಜಿಟಲ್ ಹಬ್ ಸ್ಥಾನಮಾನ ಗಿಟ್ಟಿಸಿಕೊಳ್ಳಲಿದೆ ಈ ಶ್ರೀಮಂತ ನಗರಿ

ಯುಎಇ ಅತ್ಯಂತ ಶ್ರೀಮಂತ ದೇಶಗಳಲ್ಲೊಂದು. ಜಾಗತಿಕವಾಗಿ ತುಂಬಾನೇ ಮುಂದುವರಿದ ದೇಶವಾಗಿದೆ. ಹಾಗೆಯೇ ಈ ದೇಶ ಡಿಜಿಟಲೀಕರಣದತ್ತ ಸಂಪೂರ್ಣ ಮುಖ ಮಾಡಿದ್ದು, ಇದರ ಪ್ರತಿಫಲವಾಗಿ ಇದೀಗ ಹೊಸದೊಂದು ಮುಕುಟವನ್ನು ತನ್ನ ಮುಡಿಗೇರಿಸಿಕೊಂಡಿದೆ.

 

ವಿಶ್ವದ ಮೊದಲ ಪೇಪರ್‌ಲೆಸ್‌ ಸರ್ಕಾರವಾಗಿ ದುಬೈ ಹೊರಹೊಮ್ಮಿದೆ. ಶೇ.100ರಷ್ಟು ಕಾಗದರಹಿತ ಆಡಳಿತ ಜಾರಿ ಮಾಡಿದ ವಿಶ್ವದ ಮೊದಲ ದೇಶ ಎಂಬ ಖ್ಯಾತಿಗೆ ದುಬೈ ಪಾತ್ರವಾಗಿದೆ ಎಂದು ಯುವರಾಜ ಶೇಖ್ ಹಮದ್ ಬಿನ್ ಮಹಮ್ಮದ್ ಬಿನ್ ರಶೀದ್ ಆಲ್ ಮುಕ್ತುಮ್ ಘೋಷಿಸಿದ್ದಾರೆ.

ದುಬೈ 2.65 ಲಕ್ಷ ಕೋಟಿ ಹಣ ಮತ್ತು 1.4 ಲಕ್ಷ ಕೋಟಿ ಮಾನವ ಗಂಟೆಗಳನ್ನು ಉಳಿತಾಯ ಮಾಡಿದೆ ಎಂದು ತಿಳಿಸಿದ್ದಾರೆ. ಇನ್ಮುಂದೆ ದುಬೈ ಸರ್ಕಾರದ ಎಲ್ಲಾ ಆಂತರಿಕ ಮತ್ತು ಬಾಹ್ಯ ವಹಿವಾಟು ಮತ್ತು ಕಾರ್ಯ ವಿಧಾನಗಳು ಶೇ.100ರಷ್ಟು ಡಿಜಿಟಲ್ ಆಗಿರಲಿದೆ.

ದುಬೈನಲ್ಲಿ ಕಾಗದರಹಿತ ಆಡಳಿತವನ್ನು 5 ಹಂತಗಳ ಮೂಲಕವಾಗಿ ಅಳವಡಿಸಿಕೊಳ್ಳಲಾಗಿದೆ. 5ನೇ ಹಂತದ ವೇಳೆಗೆ ದುಬೈನ ಎಲ್ಲಾ 45 ಸರ್ಕಾರಿ ಘಟಕಗಳ ಕಾರ್ಯತಂತ್ರವನ್ನು ಸಂಪೂರ್ಣವಾಗಿ ಕಾಗದರಹಿತ ಮಾಡಲಾಗಿದೆ. ಈ ಘಟಕಗಳು 1,800ಕ್ಕೂ ಹೆಚ್ಚು ಡಿಜಿಟಲ್ ಸೇವೆಯನ್ನು ಮತ್ತು 10,500ಕ್ಕೂ ಹೆಚ್ಚು ಪ್ರಮುಖ ವಹಿವಾಟುಗಳನ್ನು ಒದಗಿಸುತ್ತದೆ. ಇದರಿಂದ ದುಬೈ ನಿವಾಸಿಗಳ ನಿರೀಕ್ಷೆಗಳನ್ನು ಪೂರೈಸಲು ಸರ್ಕಾರಕ್ಕೆ ನೆರವಾಗುತ್ತದೆ ಎಂದು ಯುವರಾಜ ಶೇಖ್ ಹಮದ್ ತಿಳಿಸಿದ್ದಾರೆ.

ದುಬೈ ಪೇಪರ್‌ಲೆಸ್ ಸ್ಟ್ರಾಟರ್ಜಿಯನ್ನು ಐದು ಹಂತಗಳಲ್ಲಿ ಅಳವಡಿಸಲಾಯಿತು. ಇದು ಹಂತ ಹಂತವಾಗಿ ದುಬೈ ಸರ್ಕಾರದ ವಿಭಿನ್ನ ಇಲಾಖೆಗಳ ಡಿಜಿಟಲಿಕರಣಕ್ಕೆ ಸಾಧ್ಯವಾಯಿತು. ಐದನೇ ಹಂತದ ಅಂತ್ಯದ ವೇಳೆಗೆ, ಎಮಿರೇಟ್‌ನಲ್ಲಿರುವ ಎಲ್ಲಾ 45 ಸರ್ಕಾರಿ ಘಟಕಗಳಲ್ಲಿ ಡಿಜಿಟಲ್ ಕಾರ್ಯತಂತ್ರವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಯಿತು. ಈ ಘಟಕಗಳು 1,800 ಕ್ಕೂ ಹೆಚ್ಚು ಡಿಜಿಟಲ್ ಸೇವೆಗಳನ್ನು ಮತ್ತು 10,500 ಕ್ಕೂ ಹೆಚ್ಚು ಪ್ರಮುಖ ವಹಿವಾಟುಗಳನ್ನು ಒದಗಿಸುತ್ತವೆ.

ಈ ಸಾಧನೆಯಿಂದ ದುಬೈ ವಿಶ್ವದ ಪ್ರಮುಖ ಡಿಜಿಟಲ್ ಹಬ್ ಸ್ಥಾನಮಾನವನ್ನು ಪಡೆದುಕೊಳ್ಳಲಿದೆ ಮತ್ತು ಗ್ರಾಹಕರಿಗೆ ಸುಲಭವಾಗುವಂತೆ ಸರ್ಕಾರಿ ಕಾರ್ಯಾಚರಣೆಗಳು ಮತ್ತು ಸೇವೆಗಳನ್ನು ವಿನ್ಯಾಸಗೊಳಿಸುವುದರಿಂದ ದುಬೈ ರೋಲ್ ಮಾಡೆಲ್ ಆಗಿ ಹೊರ ಹೊಮ್ಮಲಿದೆ ಎಂದು ಶೇಖ್‌ ಹಮದ್‌ ಹೇಳಿದರು.

ಅದಲ್ಲದೆ ಅಮೆರಿಕ, ಬ್ರಿಟನ್‌, ಯುರೋಪ್‌ ಮತ್ತು ಕೆನಡಾ ಸಹ ಡಿಜಿಟಲ್‌ ಆಡಳಿತ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಆದರೂ ಈ ಮನ್ನಣೆಗೆ ಮೊದಲು ಪಾತ್ರವಾದ ದುಬೈ ನ ಸಾಧನೆ ತುಂಬಾನೇ ಪ್ರಶಂಸನೀಯ.

Leave A Reply

Your email address will not be published.