ಕುಕ್ಕೆ ಸುಬ್ರಹ್ಮಣ್ಯ : ಪಾನಮತ್ತ ವ್ಯಕ್ತಿಯನ್ನು ಎಸೆದ ಆನೆ

Share the Article

ಕಡಬ: ದ.ಕ.ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆ ದೇವಸ್ಥಾನದ ಪ್ರಾಂಗಣದೊಳಗಡೆ ವ್ಯಕ್ತಿಯೋರ್ವನನ್ನು ಸೊಂಡಿಲಿನಿಂದ ಎತ್ತಿ ಎಸೆದ ಘಟನೆ ನಡೆದಿದೆ‌. ಎರಡು ವಾರಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಇತ್ತೀಚೆಗೆ ವೈರಲ್ ಆಗಿತ್ತು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ‘ಯಶಸ್ವಿನಿ’ ಎಂಬ ಆನೆಯಿಂದ ಎಸೆಯಲ್ಪಟ್ಟ ವ್ಯಕ್ತಿ ದೇವಸ್ಥಾನಕ್ಕೆ ರಾತ್ರಿಯ ಪೂಜೆಗೆಂದು ಬಂದಿದ್ದರು. ಅವರು ಆನೆಯ ಬಳಿಯಿಂದ ಹಾದು ಹೋಗುತ್ತಿರುವಾಗ ಹಠಾತ್ತನೆ ಸೊಂಡಿಲಿನಿಂದ ಎತ್ತಿ ಎಸೆದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆನೆಯ ಮಾವುತ, ಘಟನೆ ನಡೆದಿರುವುದು ನಿಜ ಎಂದು ಹೇಳಿದ್ದಾರೆ. ಆದರೆ ಆನೆ ಅವರನ್ನು ಎತ್ತಿ ಹಿಂದಕ್ಕೆ ಮೆಲ್ಲಗೆ ಎಸೆದಿರುವುದರಿಂದ ವ್ಯಕ್ತಿಗೆ ಯಾವುದೇ ತೊಂದರೆಯಾಗಿಲ್ಲ ಆನೆಯಿಂದ ಎಸೆಯಲ್ಪಟ್ಟ ವ್ಯಕ್ತಿ ‌ಮದ್ಯ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದಾರೆ. ಆನೆಗೆ ಮದ್ಯದ ವಾಸನೆ ಆಗದಿರುವುದರಿಂದ ಈ ಘಟನೆ ನಡೆದಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

Leave A Reply