ಓಮಿಕ್ರಾನ್ ವೈರಸ್ ಭೀತಿ | ಅಂತರಾಷ್ಟ್ರೀಯ ವಿಮಾನ ಹಾರಾಟ ರದ್ದು ಮಾಡಿದ ಕೇಂದ್ರ ಸರಕಾರ

Share the Article

ನವದೆಹಲಿ: ದೇಶದಲ್ಲಿ ಒಮಿಕ್ರಾನ್ ಭೀತಿ ಹಿನ್ನೆಲೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ರದ್ದು ಮಾಡಿ ಆದೇಶಿಸಿದೆ ಎಂದು ವರದಿಯಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಹೊಸ ವೈರಸ್ ಪತ್ತೆಯಾಗಿದೆ ಎಂದು ಹೇಳಿದ ಕೆಲವೇ ದಿನಗಳಲ್ಲಿ ಭಾರತಕ್ಕೂ ಕಾಲಿಟ್ಟಿತ್ತು.
ಹೀಗಾಗಿ ದೇಶದೆಲ್ಲೆಡೆ ಒಮಿಕ್ರಾನ್ ವೈರಸ್ ಅನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, 2022ರ ಜನವರಿ 31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ರದ್ದು ಮಾಡಿ ಆದೇಶಿಸಿದೆ ಎಂದು ವರದಿಯಾಗಿದೆ.

ಸರಕು ಸಾಗಣೆ ವಿಮಾನಗಳನ್ನು ಹೊರತು ಪಡಿಸಿ ಉಳಿದ ವಿಮಾನಗಳ ರದ್ದು ಮಾಡಲಾಗಿದೆ. ಆಯ್ದ ಮಾರ್ಗಗಳ ವಿಮಾನಗಳಿಗೆ ಮಾತ್ರ ಹಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಕೇಂದ್ರ ವಿಮಾನಯಾನ ಇಲಾಖೆಯಿಂದ ಅಧಿಕೃತ ಮಾಹಿತಿ ಸಿಕ್ಕಿದೆ.

Leave A Reply