ಶಿವಮೊಗ್ಗದಲ್ಲಿ ನಡೆಯಿತೊಂದು ಕೋತಿಯ ಭರ್ಜರಿ ಹುಟ್ಟುಹಬ್ಬ | ಖುದ್ದು ಸಚಿವರೇ ಸಾಕ್ಷಿಯಾಗಿದ್ದಾರೆ ಈ ಮಾರುತಿಯ ಬರ್ತಡೇ ಗೆ

ಸಾಮಾನ್ಯವಾಗಿ ಎಲ್ಲರೂ ಸಾಕುಪ್ರಾಣಿಗಳನ್ನು ತಮ್ಮ ಸಂಗಾತಿಗಳಂತೆ ಜೊತೆಯಲ್ಲಿಯೇ ಇರಿಸಿಕೊಳ್ಳಲು ಇಷ್ಟಪಡುತ್ತಾರೆ. ನಾಯಿ, ಬೆಕ್ಕು, ಮೊಲ ಮುಂತಾದವು ಜನರು ಇಷ್ಟಪಡುವ ಸಾಕುಪ್ರಾಣಿಗಳಾಗಿರುತ್ತವೆ. ಇವುಗಳ ಹೊರತಾಗಿ ಕೆಲವು ಅಸಾಮಾನ್ಯ ಪ್ರಾಣಿಗಳನ್ನೂ ಕೂಡ ನೀವು ಮನೆಯಲ್ಲಿ ಸಾಕುತ್ತಾರೆ.

ಹಾಗೆಯೇ ಶಿವಮೊಗ್ಗದ ಮಹಿಳೆಯೊಬ್ಬರು ಮಂಗನ ಮರಿಯೊಂದನ್ನು ಮಗುವಿನಂತೆಯೇ ಸಾಕಿದ್ದು, ಇದರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿ ಆ ಸುದ್ದಿ ವೈರಲ್ ಆಗುವಂತೆ ಮಾಡಿದ್ದಾರೆ. ವಿಶೇಷ ಎಂದರೆ, ಈ ಹುಟ್ಟುಹಬ್ಬಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತು ಚಿಕ್ಕಮಗಳೂರಿನ ಜಿಲ್ಲೆ ತಾವರೆಕೆರೆಯ ಶಿಲಾ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಕಿರಿಯ ಶ್ರೀಗಳು ಕೂಡ ಸಾಕ್ಷಿಯಾಗಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಇಂಥದ್ದೊಂದು ಅಪರೂಪದ ಹುಟ್ಟುಹಬ್ಬ ಆಚರಿಸಿಕೊಂಡಿರುವ ಕೋತಿಮರಿಯನ್ನು ಸಾಕಿರುವುದು ಶಿವಮೊಗ್ಗ ನಗರದ ಎನ್ ರಸ್ತೆಯಲ್ಲಿರುವ ಪಾರ್ವತಮ್ಮ ಎನ್ನುವವರು. ಇವರಿಗೆ ಸುಮಾರು ಆರು ವರ್ಷಗಳ ಹಿಂದೆ ಯಾರೋ ಕೋತಿಮರಿಯನ್ನು ಕೊಟ್ಟು ಹೋಗಿದ್ದರು. ತಮಗೆ ಸಾಕಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಇದನ್ನು ಪಾರ್ವತಮ್ಮನವರ ಬಳಿ ಬಿಟ್ಟಿದ್ದರು. ಪ್ರೀತಿಯಿಂದ ಸಾಕಲ್ ಒಪ್ಪಿದ ಪಾರ್ವತಮ್ಮನವರು ಆ ಕೋತಿಗೆ ಮಾರುತಿ ಎಂದು ಹೆಸರು ಇಟ್ಟಿದ್ದಾರೆ.

ಪಾರ್ವತಮ್ಮನವರಿಗೆ ಇಬ್ಬರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು ಇದ್ದಾರೆ. ಐದನೆಯ ಮಗುವಾಗಿ ಈ ಕೋತಿಮರಿ ಸೇರ್ಪಡೆಗೊಂಡಿದೆ. ಇತರ ಮಕ್ಕಳಂತೆಯೇ ಕೋತಿಮರಿಯನ್ನೂ ಅವರು ತಮ್ಮ ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಡಿಸೆಂಬರ್ 5 ರಂದು ಮಾರುತಿ ಜನ್ಮದಿನದ ಆಚರಿಸಲಾಗುತ್ತದೆ. ಅದೇ ರೀತಿ ಈ ವರ್ಷವೂ ಆಚರಿಸಲಾಗಿದೆ.

ದಿನವೂ ಅದಕ್ಕೆ ಸ್ನಾನ ಮಾಡಿಸುತ್ತೇವೆ, ಬಟ್ಟೆ ತೊಡಿಸುತ್ತೇವೆ, ನಾವು ತಿನ್ನುವ ಎಲ್ಲಾ ಆಹಾರ ಅವನೂ ತಿನ್ನುತ್ತಾನೆ. ಅಷ್ಟೇ ಅಲ್ಲದೆ ಹೊರಗಡೆಯೂ ಬರುತ್ತಾನೆ ಐಸ್‌ಕ್ರೀಂ ಎಂದರೆ ತುಂಬಾ ಇಷ್ಟ. ಹೊರಗೆ ಬಂದಾಗ ಜ್ಯೂಸ್ ಮಾತ್ರ ಕುಡಿಯುತ್ತಾನೆ ಎನ್ನುತ್ತಾರೆ ಕುಟುಂಬದ ಸದಸ್ಯರು. ಹಾಗೆಯೇ ಇವರ ಮನೆಯಲ್ಲಿ ಬೆಕ್ಕು ಕೂಡ ಇದ್ದು, ಮಾರುತಿ ಮತ್ತು ಬೆಕ್ಕು ತುಂಬಾ ಕ್ಲೋಸ್ ಫ್ರೆಂಡ್ಸ್ ಎನ್ನುತ್ತಾರೆ ಪಾರ್ವತಮ್ಮ.

error: Content is protected !!
Scroll to Top
%d bloggers like this: