ಆಧಾರ್ ಕಾರ್ಡ್ ಅನ್ನು ಪ್ರತಿಯೊಂದು ಕೆಲಸಕ್ಕೂ ಜೊತೆಗೆ ಒಯ್ದು ಕಿರಿಕಿರಿ ಅನುಭವಿಸಿದ್ದೀರಾ?? |‌ಹಾಗಿದ್ರೆ ಇಲ್ಲಿದೆ ನೋಡಿ ಮೊಬೈಲ್ ಮೂಲಕ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದಾದ ಸುಲಭ ವಿಧಾನ

Share the Article

ಎಲ್ಲಾ ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಅನ್ನು ಆರಂಭದಲ್ಲಿ ಗುರುತಿನ ದಾಖಲೆಯಾಗಿ ಪರಿಚಯಿಸಲಾಯಿತು. ಆದರೆ ವರ್ಷಗಳಲ್ಲಿ ಅದು ಎಲ್ಲಾ ವ್ಯವಹಾರಗಳ ಅವಿಭಾಜ್ಯ ಅಂಗವಾಗಿದೆ. ಆಧಾರ್ ಕಾರ್ಡ್ ಇದ್ದಲ್ಲಿ ಸರ್ಕಾರಿ ಕೆಲಸ, ಬ್ಯಾಂಕಿಂಗ್ ಸೇರಿದಂತೆ ಇತರೇ ಕೆಲಸಗಳನ್ನು ಸುಲಭವಾಗಿ ಮಾಡಬಹುದು.

ಆಧಾರ್ ಕಾರ್ಡ್‌ ಅನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೀಡುತ್ತದೆ. ಆಧಾರ್ ಸರ್ಕಾರದ ಯೋಜನೆ ಮಾತ್ರವಲ್ಲದೆ ಹಣಕಾಸು ಸೇವೆಗಳಿಗೂ ಅಗತ್ಯವಿದೆ. ಬ್ಯಾಂಕ್ ಖಾತೆ, ವಾಹನ ಮತ್ತು ವಿಮಾ ಪಾಲಿಸಿಗಳೊಂದಿಗೂ ಆಧಾರ್ ಲಿಂಕ್ ಆಗಿರುತ್ತದೆ. ವ್ಯಕ್ತಿಯ ಹೆಸರು, ಲಿಂಗ, ಹುಟ್ಟಿದ ದಿನಾಂಕ, ವಿಳಾಸ ಭಾವಚಿತ್ರ ಹೀಗೆ ಹಲವು ವಿವರಗಳನ್ನು ಇದು ಹೊಂದಿರುತ್ತದೆ.

ನಾವು ಯಾವಾಗಲೂ ನಮ್ಮ ಆಧಾರ್ ಕಾರ್ಡಿನ ಪ್ರತಿಯನ್ನು ಹೊಂದಿರುವುದು ಅಗತ್ಯವಾಗುತ್ತದೆ. ಆದರೆ ಅದನ್ನು ಎಲ್ಲೆಂದರಲ್ಲಿ ಪ್ರತ್ಯೇಕವಾಗಿ ಇಟ್ಟುಕೊಳ್ಳುವುದು ಜನರಿಗೆ ಕಿರಿಕಿರಿ ಎನಿಸಬಹುದು. ಇದೀಗ ಯುಐಡಿಎಐ ಅಧಿಕೃತ ವೆಬ್‍ಸೈಟ್ ಮುಲಕ ಆಧಾರ್ ಕಾರ್ಡನ್ನು ಮೊಬೈಲಿನಲ್ಲಿಯೇ ಡೌನ್‍ಲೋಡ್ ಮಾಡಲು ಅವಕಾಶ ನೀಡಿದೆ. 

eaadhaar.uidai.gov.in ಈ ಲಿಂಕ್ ಮೂಲಕ ನಿಮ್ಮ ಆಧಾರ್ ಅನ್ನು ಮೊಬೈಲಿನಲ್ಲಿ ಡೌನ್‍ಲೋಡ್ ಮಾಡಬಹುದು. ಯುಐಡಿಎಐ ಜೂನ್ 28, 2021 ರಂದು ಮಾಡಿದ್ದ ಟ್ವೀಟ್‍ನಲ್ಲಿ ಇದರ ಬಗ್ಗೆ ಮಾಹಿತಿ ನೀಡಿದೆ. ಸಂಪೂರ್ಣ ಆಧಾರ್ ಸಂಖ್ಯೆಯನ್ನು ಪ್ರದರ್ಶಿಸುವ ಹಾಗೂ ಕೊನೆಯ ನಾಲ್ಕು ಅಂಕೆಗಳನ್ನು ಮಾತ್ರ ತೋರಿಸುವ ಮಾಸ್ಕ್‌ಡ್ ಆಧಾರ್ ಕಾರ್ಡ್ ಗಳನ್ನು ಡೌನ್‍ಲೋಡ್ ಮಾಡಲು ಆಯ್ಕೆಗಳು ಇವೆ.

ಆಧಾರ್  ಡೌನ್‍ಲೋಡ್ ಮಾಡುವುದು ಹೇಗೆ??

*ಆಧಾರ್ ಅಧಿಕೃತ ವೆಬ್‍ಸೈಟ್ eaadhaar.uidai.gov.in ಗೆ ಭೇಟಿ ನೀಡಿ
*ನಂತರ ಡೌನ್‍ಲೋಡ್ ಎಲೆಕ್ಟ್ರಾನಿಕ್ ಕಾಪಿ ಆಫ್ ಯುವರ್ ಆಧಾರ್ ಲಿಂಕ್‍ ಅನ್ನು ಕ್ಲಿಕ್ ಮಾಡಿ
*ಆಧಾರ್ ನಂಬರ್ ಆಯ್ಕೆಯನ್ನು ಕ್ಲಿಕ್ ಮಾಡಿ, 12 ಅಂಕಿಯ ನಿಮ್ಮ ಐಡಿಯನ್ನು ನಮೂದಿಸಿ
*ಮಾಸ್ಕ್‌ಡ್ ಆಧಾರ್ ಕಾರ್ಡ್ ಬೇಕಾಗಿದ್ದಲ್ಲಿ, ಐ ವಾಂಟ್ ಮಾಸ್ಕ್‌ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಿ
*ನಂತರ ಸೆಂಡ್ ಒಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಿ
*ಆಧಾರ್‌ಗೆ ಲಿಂಕ್ ಮಾಡಲಾಗಿದ್ದ ಮೊಬೈಲ್ ಸಂಖ್ಯೆಗೆ ಒಂದು ಬಾರಿ ಬಳಸಬಹುದಾದ ಪಾಸ್‍ವರ್ಡ್ ಬರುತ್ತದೆ
*ಒಟಿಪಿಯನ್ನು ನಮೂದಿಸಿ ಮತ್ತು ಸಬ್‍ಮಿಟ್ ಆಯ್ಕೆಯನ್ನು ಕ್ಲಿಕ್ ಮಾಡಿ
*ಒಟಿಪಿಯನ್ನು ಸರಿಯಾಗಿ ನಮೂದಿಸಿದ ಬಳಿಕ ನಿಮ್ಮ ಆಧಾರ್ ಅನ್ನು ಪಿಡಿಎಫ್ ಆವೃತ್ತಿಯಲ್ಲಿ ಪಡೆಯಬಹುದು

ನಿಮಗೆ ನೆನಪಿಡಬಹುದಾದಂತಹ ಅಂಕೆಗಳನ್ನು ಪಾಸ್‍ವರ್ಡ್ ಆಗಿ ಬಳಸಿ. ಇದರಿಂದ ನಿಮ್ಮ ಆಧಾರ್ ಅನ್ನು ಸುರಕ್ಷಿತವಾಗಿ ಮೊಬೈಲಿನಲ್ಲಿ ಬಳಸಬಹುದು.
ಮುಂದೆ ಎಂದಾದರೂ ಆಧಾರ್ ಪ್ರತಿ ಅಗತ್ಯವಾದಲ್ಲಿ ಇದನ್ನು ಬಳಸಲು ಪಿಡಿಎಫ್ ಆವೃತಿಯನ್ನು ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ  ಸೇವ್ ಮಾಡಿ ಇಟ್ಟುಕೊಳ್ಳಬಹುದು. ಮಾಸ್ಕ್‌ಡ್ ಆಧಾರ್ ಭದ್ರತೆಯ ಕಾರಣಕ್ಕೆ ನಿಮ್ಮ ಐಡಿಯ ಎಂಟು ಅಂಕೆಗಳನ್ನು ಮರೆ ಮಾಡುತ್ತದೆ.

Leave A Reply